ಹಿಮಾಚಲ ಪ್ರದೇಶದಲ್ಲಿ ಮಾರ್ಗ ಮಧ್ಯೆ ಸಿಲುಕಿಕೊಂಡ ಕೇಬಲ್ ಕಾರ್, ಎಲ್ಲಾ 11 ಮಂದಿಯ ರಕ್ಷಣೆ!

Published : Jun 20, 2022, 05:31 PM ISTUpdated : Jun 20, 2022, 06:08 PM IST
ಹಿಮಾಚಲ ಪ್ರದೇಶದಲ್ಲಿ ಮಾರ್ಗ ಮಧ್ಯೆ ಸಿಲುಕಿಕೊಂಡ ಕೇಬಲ್ ಕಾರ್, ಎಲ್ಲಾ 11 ಮಂದಿಯ ರಕ್ಷಣೆ!

ಸಾರಾಂಶ

ಹಿಮಾಚಲ ಪ್ರದೇಶದಲ್ಲಿ ನಡೆದ ಮತ್ತೊಂದು ಕೇಬಲ್ ಕಾರ್ ಘಟನೆಯಲ್ಲಿ ಸೋಮವಾರ 11 ಮಂದಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಅಂದಾಜು ಮೂರು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆ 1992ರಲ್ಲಿ ಇದೇ ಪ್ರದೇಶದಲ್ಲಿ ನಡೆದ ಇಂಥದ್ದೇ ಕಾರ್ಯಾಚರಣೆಯನ್ನು ನೆನಪಿಸಿದೆ.  

ಚಂಡೀಗಢ (ಜೂನ್ 20): ಅಂದಾಜು ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ (Rescue Operation) ಬಳಿಕ, ಇಲ್ಲಿನ ಪರ್ವಾನೋ (Parwanoo ) ಎಂಬಲ್ಲಿ ಮಾರ್ಗ ಮಧ್ಯದಲ್ಲಿಯೇ ಸಿಲುಕಿಹಾಕಿಕೊಂಡ ಕೇಬಲ್ ಕಾರ್‌ನಲ್ಲಿದ್ದ (cable car)  11 ಮಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. 

ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ವಾಯುಮಾರ್ಗದಲ್ಲಿ ಮಧ್ಯದಲ್ಲಿಯೇ ಕೇಬಲ್‌ ಕಾರ್ ಸಿಲುಕಿ ಹಾಕಿಕೊಂಡಿತ್ತು.  ಇಲ್ಲಿ ಏನು ತಪ್ಪಾಗಿದೆ ಎನ್ನುವ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ (Chief Minister Jai Ram Thakur) ಹೇಳಿದ್ದು, ಘಟನೆಯಲ್ಲಿ ಎಲ್ಲರನ್ನೂ ರಕ್ಷಣೆ ಮಾಡಲಾಗಿರುವುದನ್ನು ಖಚಿತಪಡಿಸಿದ್ದಾರೆ.

ಸೋಲನ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ವೀರೇಂದ್ರ ಶರ್ಮಾ (Solan district police chief Virendra Sharma) ಪ್ರಕಾರ, ಪ್ರಯಾಣಿಕರನ್ನು ಹೊರತರಲು ಕೇಬಲ್‌ನಲ್ಲಿ ರಕ್ಷಣಾ ಟ್ರಾಲಿಯನ್ನು ನಿಯೋಜಿಸಲಾಗಿತ್ತು, ಅವುಗಳನ್ನು ಒಂದೊಂದಾಗಿ ಕೆಳಗಿರುವ ಕೌಶಲ್ಯ ನದಿ ಕಣಿವೆಯ ಬೆಟ್ಟದ ಮೇಲೆ ಇರಿಸಿದ ರಕ್ಷಣಾ ಉಪಕರಣಗಳನ್ನು ಬಳಸಿ ಇಳಿಸಲಾಯಿತು.


ಕೇಬಲ್ ಕಾರ್ ಟಿಂಬರ್ ಟ್ರಯಲ್ (Timber Trail ) ಖಾಸಗಿ ರೆಸಾರ್ಟ್‌ನ ಜನಪ್ರಿಯ ವೈಶಿಷ್ಟ್ಯವಾಗಿದೆ, ಚಂಡೀಗಢದಿಂದ ಕಸೌಲಿ ಮತ್ತು ಶಿಮ್ಲಾ ಮಾರ್ಗದಲ್ಲಿ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ಪರ್ವಾನೂ ಹರ್ಯಾಣ, ಪಂಜಾಬ್ ಮತ್ತು ಚಂಡೀಗಢಗಳೊಂದಿಗೆ ಹಿಮಾಚಲ ಪ್ರದೇಶದ ತುದಿಯಲ್ಲಿರುವ ಕಾರಣ ಈ ಪ್ರದೇಶದಾದ್ಯಂತ ಜನರು ಇಲ್ಲಿ ಆಗಾಗ್ಗೆ ಭೇಟಿ ಮಾಡುತ್ತಾರೆ. ಟಿಂಬರ್ ಟ್ರಯಲ್ ಆಪರೇಟರ್‌ನ ತಾಂತ್ರಿಕ ತಂಡವನ್ನು ನಿಯೋಜಿಸಲಾಗಿದ್ದಲ್ಲದೆ, ಪೊಲೀಸ್ ತಂಡವು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವೂ ಸ್ಥಳದಲ್ಲಿತ್ತು.

ಕೇಬಲ್ ಕಾರ್ ಸಿಕ್ಕಿಹಾಕಿಕೊಂಡ ನಂತರ, ಸಿಕ್ಕಿಬಿದ್ದವರಲ್ಲಿ ಕೆಲವು ಹಿರಿಯ ಪ್ರವಾಸಿಗರು, ಈ ಕೇಬಲ್ ಕಾರ್ ವ್ಯವಸ್ಥೆ ಯಾಕೆ ಕೆಟ್ಟದ್ದು ಎನ್ನುವ ವಿಡಿಯೋವನ್ನೂ ಕೂಡ ಪೋಸ್ಟ್ ಕೂಡ ಹಾಕಿದ್ದಾರೆ. "ನಾನು ಮಧುಮೇಹ ಹಾಗೂ ಕಿಡ್ನಿಯ ಸಮಸ್ಯೆಯಿರುವ ವ್ಯಕ್ತಿ. ಪ್ರತಿ ಬಾರಿ ಅವರು ಹೇಳಿದ್ದನ್ನೇ ಹೇಳುತ್ತಿದ್ದಾರೆ. ರೋಪ್ ವೇ ಬಳಸಿ ನಮ್ಮನ್ನು ರಕ್ಷಣೆ ಮಾಡುವುದಾಗಿ ಹೇಳುತ್ತಿದ್ದಾರೆ. ನಾವು ರೋಪ್ ವೇ ಮೂಲಕ ಇಲ್ಲಿಂದ ಹೊರಬರುವಷ್ಟು ಶಕ್ತರಲ್ಲ' ಎಂದು ಹಿರಿಯ ವಯಸ್ಸಿನ ಪ್ರವಾಸಿಗರೊಬ್ಬರು ಹೇಳಿದ್ದಾರೆ.

ಸೋಮವಾರದ ಘಟನೆಯು 1992ರ ಅಕ್ಟೋಬರ್‌ನಲ್ಲಿ ಟಿಂಬರ್ ಟ್ರಯಲ್‌ನಲ್ಲಿ ಆದ ಇದೇ ರೀತಿಯ ಘಟನೆಯನ್ನು ನೆನಪಿಸುವಂತೆ ಮಾಡಿದೆ. ಸೇನೆ ಹಾಗು ವಾಯುಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 10 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದ್ದರೆ, ಕೇಬಲ್ ಕಾರ್ ಆಪರೇಟರ್ ಸಾವಿಗೀಡಾಗಿದ್ದರು.

ಕೊಡಚಾದ್ರಿ - ಕೊಲ್ಲೂರು ನಡುವೆ ಕೇಬಲ್ ಕಾರ್ !

ಭಾರತೀಯ ಸಶಸ್ತ್ರ ಪಡೆಗಳು ಕೆಲವು ತಿಂಗಳ ಹಿಂದೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡ ಸಮಯದಿಂದ ಮೂರು ಚಿತ್ರಗಳನ್ನು ಹೊಂದಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದವು. ಮೊದಲ ಫೋಟೋ ಕೇಬಲ್ ಕಾರ್ ಅನ್ನು ತೋರಿಸಿದ್ದರೆ,  ಅದರ ಮೇಲೆ ಟಿಂಬರ್ ಟ್ರಯಲ್ ಪರ್ವಾನೂ ಎಂದು ಬರೆಯಲಾಗಿದೆ. ಈ ಕೇಬಲ್ ಕಾರ್ ಗಾಳಿಯಲ್ಲಿ ನೇತಾಡುತ್ತಿತ್ತು. ಮತ್ತೊಂದು ಫೋಟೋ ಪ್ರವಾಸಿಗರನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗೆ ಎತ್ತುತ್ತಿರುವುದನ್ನು ತೋರಿಸಿದೆ, ಆದರೆ ಮೂರನೆಯದು ಅಧಿಕಾರಿಗಳು ಮತ್ತು ಕೆಲವು ರಕ್ಷಿಸಿದ ಪ್ರಯಾಣಿಕರ ಗುಂಪಿನ ಫೋಟೋ ಆಗಿತ್ತು.

Mysore ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಸಾಹಸ ಬೇಡ, ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಮನವಿ!

ಅಂದಿನ ರಕ್ಷಣಾ ಕಾರ್ಯಾಚರನೆಯಲ್ಲಿ ಕತ್ತಲಾಗುವ ಮುನ್ನ ಕೇವಲ ಅರ್ಧದಷ್ಟು ಪ್ರಯಾಣಿಕರನ್ನು ರಕ್ಷಣೆ ಮಾಡಲು ಸಾಧ್ಯವಾಗಿತ್ತು. ಬಳಿಕ ತಂಡವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗು ಸ್ಥಗಿತಗೊಳಿಸಿತ್ತು. ಮರುದಿನ ಇತರರನ್ನು ಹೊರತರುವಲ್ಲಿ ತಂಡ ಯಶಸ್ವಿಯಾಯಿತು. ಎಲ್ಲರನ್ನೂ ಕೆಳಗಿಳಿಸಿದ ಬಳಿಕ ಕೇಬಲ್ ಕಾರ್ ನಿಯಂತ್ರಣ ತಪ್ಪಿತು. ಈ ವೇಳಗೆ ಸುರಕ್ಷತೆಗಾಗಿ ಜಿಗಿಯಲು ಪ್ರಯತ್ನಿಸಿದ್ದ ಕೇಬಲ್ ಕಾರ್ ಆಪರೇಟರ್, ಆಯ ತಪ್ಪಿ ಕೆಳಗೆ ಬಿದ್ದಿದ್ದರು. ಈ ವೇಳೆ ಅವರ ತಲೆ ಬಂಡೆಗೆ ಬಡಿದಿದ್ದರಿಂದ ಸಾವು ಕಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?