ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಕಾರಿನ ಎಸಿ ಆನ್ ಮಾಡಿ ಮಲಗಿದ್ದಾರೆ. ಗಡದ್ ನಿದ್ದೆಗೆ ಜಾರಿದ್ದ ಚಾಲಕ ಮೃತಪಟ್ಟಿದ್ದಾರೆ. ತನಿಖೆ ನಡೆಸಿದ ಪೊಲೀಸರು ಸಾವಿನ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾರೆ.
ಘಾಜಿಯಾಬಾದ್(ಜೂ.18) ಕಾರಿನಲ್ಲಿ ನಿದ್ದೆ ಮಾಡುವುದು ಸಹಜ. ಎಸಿ ಆನ್ ಮಾಡಿ ಹಲವರು ನಿದ್ದಿಗೆ ಜಾರುತ್ತಾರೆ. ಆದರೆ ಹೀಗೆ ಮಾಡುವ ಮುನ್ನ ಎಚ್ಚರ ವಹಿಸುವುದು ಅಗತ್ಯ. ಇದೀಗ ಕುಡಿದ ಮತ್ತಿನಲ್ಲಿ ಚಾಲಕ ಕಾರಿನಲ್ಲಿ ಎಸಿ ಆನ್ ಮಾಡಿ ನಿದ್ದಿಗೆ ಜಾರಿದ್ದಾನೆ. ರಾತ್ರಿ ಮಲಗಿ ಬೆಳಗ್ಗೆ ಚಾಲಕ ಎದ್ದೇಳಲೇ ಇಲ್ಲ. ಕಾರಿನೊಳಗೆ ಕ್ಯಾಬ್ ಚಾಲಕ ಮೃತಪಟ್ಟ ಘಟನೆ ಘಾಜಿಯಾಬಾದ್‌ನಲ್ಲಿ ನಡೆದಿದೆ.
36 ವರ್ಷದ ಕಲ್ಲು ದುಬೆ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಮಲೇಶ್ ಪಾಂಡೆ ಕ್ಯಾಬ್ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಲ್ಲು ದುಬೆ ಭಾನುವಾರ ಸಂಜೆಯಾಗುತ್ತಿದ್ದಂತೆ ಬಾರ್ ಪಕ್ಕ ಕಾರು ನಿಲ್ಲಿಸಿ ತೆರಳಿದ್ದಾರೆ. ಕ್ಯಾಬ್ ಬಾರ್‌ನಲ್ಲಿ ಕಂಠಪೂರ್ತಿ ಕುಡಿದು ಮರಳಿದ್ದಾನೆ. ಕಾರು ಹತ್ತಿದ ಕಲ್ಲು ದುಬೆಗೆ ಚಲಾಯಿಸಿಕೊಂಡು ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಕಾರು ಸ್ಟಾರ್ಟ್ ಮಾಡಿ ಎಸಿ ಆನ್ ಮಾಡಿದ್ದಾನೆ. ಬಳಿಕ ಕಾರಿನಲ್ಲೇ ಮಲಗಿದ್ದಾನೆ.
ಹಲವು ಗ್ರಾಹಕರು ಕಾರು ಬುಕ್ ಮಾಡಿದರೂ ಕಲ್ಲು ದುಬೆ ಯಾವುದೇ ಕರೆಯನ್ನೂ ಸ್ವೀಕರಿಸಿಲ್ಲ, ಗ್ರಾಹಕರನ್ನು ಕರೆದುಕೊಂಡಿಲ್ಲ. ಇತ್ತ ಕ್ಯಾಬ್ ಮಾಲೀಕ ಅಮಲೇಶ್ ಪಾಂಡೆ ಹಲವು ಬಾರಿ ಕರೆ ಮಾಡಿದ್ದಾನೆ. ಆದರೆ ಪ್ರತಿಕ್ರಿಯೆ ಬಂದಿರಲಿಲ್ಲ. ಮರು ದಿನ ಬೆಳಗ್ಗೆ ಕ್ಯಾಬ್ ಮಾಲೀಕನಿಗೆ ಗ್ರಾಹಕರು ಕರೆ ಮಾಡಿ ಕಾರು ಬಂದಿಲ್ಲ ಎಂದು ದೂರು ನೀಡಿದ್ದಾರೆ. ಈ ವೇಳೆ ಕಲ್ಲು ದುಬೆ ಕುರಿತು ಅನುಮಾನ ಮೂಡಿದೆ. ಹೀಗಾಗಿ ಕ್ಯಾಬ್ ಸೇವೆಯ ಆ್ಯಪ್ ನೆರವಿನಿಂದ ಕಲ್ಲು ದುಬೆ ಮೊಬೈಲ್ ಲೋಕೇಶನ್ ಟ್ರೇಸ್ ಮಾಡಿದ್ದಾರೆ.
ಕಾರು ಹಿಟ್ & ರನ್: ಎತ್ತರಕ್ಕೆ ಹಾರಿ ಕೆಳಗೆ ಬಿದ್ದರೂ ಯುವತಿ ಪವಾಡಸದೃಶ ಪಾರು: ವೀಡಿಯೋ ವೈರಲ್
ಬಳಿಕ ಲೋಕೇಶನ್ ಬಳಿ ತೆರಳಿದಾಗ ಬಾರ್ ಪಕ್ಕದಲ್ಲಿ ಕಾರು ನಿಲ್ಲಿಸಿ ಕಲ್ಲು ದುಬೆ ಮಲಗಿದ್ದ. ಅದೆಷ್ಟು ಕರೆದರೂ ಕಲ್ಲು ದುಬೆ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಜು ಒಡೆದ ಕಾರಿನ ಡೋರ್ ಒಪನ್ ಮಾಡಿದ್ದಾರೆ. ಈ ವೇಳೆ ಕಲ್ಲು ದುಬೆ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.
ಕಾರು ಸಂಪೂರ್ಣ ತನಿಖೆ ನಡೆಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದೀಗ ಮರಣೋತ್ತರ ವರದಿ ಬಂದಿದೆ. ಕಲ್ಲು ದುಬೆ ಉಸಿರುಗಟ್ಟಿ ಸತ್ತಿರುವುದು ಪತ್ತೆಯಾಗಿದೆ. ಇಷ್ಟೇ ಅಲ್ಲ ಈತನ ದೇಹದಲ್ಲಿ ಯಾವುದೇ ಗಾಯಗಳಿಲ್ಲ. ಕಾರು ಎಸಿ ಆನ್ ಮಾಡಿದ ಕಲ್ಲು ದುಬೈ ಮಲಗಿದ್ದಾನೆ. ಕುಡಿದ ಕಾರಣ ಈತನಿಗೆ ಎಚ್ಚರವಾಗಿಲ್ಲ. ಇತ್ತ ಕಾರಿನ ಪೆಟ್ರೋಲ್ ಖಾಲಿಯಾಗಿ ಎಂಜಿನ್ ಆಫ್ ಆಗಿದೆ. ಕಾರು ಸಿಎನ್‌ಜಿ ಕಿಟ್ ಇದ್ದರೂ ಎದ್ದು ಆನ್ ಮಾಡಲು ಸಾಧ್ಯವಾಗಿಲ್ಲ. ನಿದ್ದೆಯಲ್ಲಿ ಇದ್ಯಾವುದು ಗೊತ್ತಾಗಿಲ್ಲ. ಹೀಗಾಗಿ ಕಾರಿನೊಳಗೆ ಗಾಳಿಯಾಡದ ಕಾರಣ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಚಾಮರಾಜನಗರ: ಇನ್ನೋವಾ ಕಾರು ಡಿಕ್ಕಿ, ಕಾಡು ನಾಯಿ, ಜಿಂಕೆ ಸಾವು