ಬಾಲಿವುಡ್‌ಗೆ ಸಿಂಹ ಸ್ವಪ್ನವಾದ IRS ಅಧಿಕಾರಿ ಸಮೀರ್‌ ವಾಂಖೆಡೆ!

By Kannadaprabha News  |  First Published Oct 4, 2021, 9:07 AM IST

* ನಟ ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣದ ತನಿಖೆ

* 2 ವರ್ಷದಲ್ಲಿ 17,000 ಕೋಟಿ ಮೌಲ್ಯದ ಡ್ರಗ್ಸ್‌ ವಶಕ್ಕೆ

* ಅನುರಾಗ್‌, ಒಬೆರಾಯ್‌, ವರ್ಮಾ ಆಸ್ತಿ ಮೇಲೆ ದಾಳಿ

* 2011 ವಿಶ್ವಕಪ್‌ ಗೆದ್ದ ಕ್ರಿಕೆಟಿಗರಿಗೂ ಬಿಸಿ ಮುಟ್ಟಿಸಿದ್ದ ಅಧಿಕಾರಿ


ಮುಂಬೈ(ಆ.04): ಹಲವು ವರ್ಷಗಳಿಂದ ಮುಂಬೈನ ಸೆಲೆಬ್ರೆಟಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಭಾರತೀಯ ಕಂದಾಯ ಸೇವೆಯ(IRS) ಅಧಿಕಾರಿ ಸಮೀರ್‌ ವಾಂಖೇಡೆ(Sameer Wankhede), ಇದೀಗ ಶಾರುಖ್‌(Shah Rukh Khan) ಪುತ್ರನ ಕೇಸಿನೊಂದಿಗೆ ಮತ್ತೊಮ್ಮೆ ಭಾರೀ ಸುದ್ದಿಯಲ್ಲಿದ್ದಾರೆ.

2008ನೇ ಬ್ಯಾಚ್‌ನ ಐಆರ್‌ಎಸ್‌(IRS) ಅಧಿಕಾರಿಯಾಗಿರುವ ಸಮೀರ್‌, ಕಳೆದ 13 ವರ್ಷಗಳಲ್ಲಿ ನಾನಾ ಹುದ್ದೆಯನ್ನು ನಿರ್ವಹಿಸಿದ್ದಾರೆ. ಈ ವೇಳೆ ಅವರು ಯಾವುದೇ ಮುಲಾಜಿಲ್ಲದೇ ಸೆಲೆಬ್ರಿಟಿಗಳ ವಿರುದ್ಧ ಕೈಗೊಂಡ ಕ್ರಮಗಳು ಎಲ್ಲರಲ್ಲೂ ಅವರ ಬಗ್ಗೆ ಅಭಿಮಾನ ಹುಟ್ಟಿಸಿವೆ.

Tap to resize

Latest Videos

undefined

15 ದಿನದಿಂದ ಹೊಂಚು ಹಾಕಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದವರನ್ನು ಹಿಡಿದ ಎನ್‌ಸಿಬಿ!

2011ರಲ್ಲಿ ಭಾರತ ಕ್ರಿಕೆಟ್‌ ತಂಡ(Team India) ವಿಶ್ವಕಪ್‌ ಗೆದ್ದು ಮರಳಿದಾಗ, ಚಿನ್ನದ ಟ್ರೋಪಿಗೆ ವಿದೇಶಿ ಸುಂಕ ಕಟ್ಟುವವರೆಗೂ ಅದನ್ನು ಮುಂಬೈ ಏರ್‌ಪೋರ್ಟ್‌ನಿಂದ ಹೊರಗೆ ಕೊಂಡೊಯ್ಯಲು ಬಿಟ್ಟಿರಲಿಲ್ಲ. 2013ರಲ್ಲಿ ಬಾಲಿವುಡ್‌ನ ಖ್ಯಾತ ಹಾಡುಗಾರ ಮಿಖಾ ಸಿಂಗ್‌(Mikha Singh) ವಿದೇಶಿ ಹಣದೊಂದಿಗೆ ಬಂದಿದ್ದಕ್ಕೆ ಬಂಧಿಸಿದ್ದರು. ಅಲ್ಲದೇ ಅನುರಾಗ್‌ ಕಶ್ಯಪ್‌, ವಿವೇಕ್‌ ಒಬೆರಾಯ್‌(Vivek Oberoi), ರಾಮ್‌ ಗೋಪಾಲ್‌ ವರ್ಮ ಅವರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದರು.

ಶಾರುಖ್ ಪುತ್ರನ ಬಳಿ 13 ಗ್ರಾಂ ಕೊಕೆನ್, 21 ಗ್ರಾಂ ಚರಾಸ್ ಪತ್ತೆ; ಆರ್ಯನ್ ಖಾನ್‌ಗೆ ಹೆಚ್ಚಾಯ್ತು ಸಂಕಷ್ಟ!

ಕಸ್ಟಮ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ, ಬಾಲಿವುಡ್‌ ಕಲಾವಿದರು ವಿದೇಶದಿಂದ ತರುತ್ತಿದ್ದ ವಸ್ತುಗಳಿಗೆ ತಪ್ಪದೇ ತೆರಿಗೆ ವಸೂಲಿ ಮಾಡುತ್ತಿದ್ದರು. ತೆರೆಗೆ ಕಟ್ಟುವವರೆಗೂ ಆ ವಸ್ತಗಳನ್ನು ಸೆಲೆಬ್ರಿಟಿಗಳಿಗೆ ನೀಡುತ್ತಿರಲಿಲ್ಲ. ಕಳೆದ 2 ವರ್ಷದಲ್ಲಿ ಇವರ ನೇತೃತ್ವದ ತಂಡ ಅಂದಾಜು 17,000 ಕೋಟಿ ರು. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದೆ. ಜೊತೆಗೆ ಇತ್ತೀಚಿನ ನಟ ಸುಶಾಂತ್‌ ಸಿಂಗ್‌(Sushant Singh Rajput) ಪ್ರಕರಣದಲ್ಲಿ ನಟಿ ರೇಖಾ ಚಕ್ರವರ್ತಿ ಪಾತ್ರದ ಕುರಿತು ತನಿಖೆ ನಡೆಸಿದ್ದು ಇವರೇ.

click me!