ಭ್ರಷ್ಟರನ್ನು ಸುಮ್ಮನೆ ಬಿಡಬೇಡಿ, ಸದೆಬಡಿಯಿರಿ: ಸಿಬಿಐ ವಜ್ರಮಹೋತ್ಸವದಲ್ಲಿ ಪ್ರಧಾನಿ ಮೋದಿ

Published : Apr 04, 2023, 07:16 AM IST
ಭ್ರಷ್ಟರನ್ನು ಸುಮ್ಮನೆ ಬಿಡಬೇಡಿ, ಸದೆಬಡಿಯಿರಿ: ಸಿಬಿಐ ವಜ್ರಮಹೋತ್ಸವದಲ್ಲಿ ಪ್ರಧಾನಿ ಮೋದಿ

ಸಾರಾಂಶ

ಯಾವುದೇ ಭ್ರಷ್ಟವ್ಯಕ್ತಿಯನ್ನೂ ಬಿಡದೆ ಸದೆಬಡಿಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ನವದೆಹಲಿ: ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾವುದೇ ಹಿಂಜರಿಕೆ ಇಲ್ಲದೆ ಕ್ರಮ ತೆಗೆದುಕೊಳ್ಳಿ. ಭ್ರಷ್ಟಾಚಾರದ ವಿರುದ್ಧ ಕ್ರಮ ಜರುಗಿಸಲು ದೇಶದಲ್ಲಿ ಈಗ ರಾಜಕೀಯ ಇಚ್ಛಾಶಕ್ತಿಗೆ ಏನೂ ಕೊರತೆ ಇಲ್ಲ. ಹೀಗಾಗಿ ಯಾವುದೇ ಭ್ರಷ್ಟವ್ಯಕ್ತಿಯನ್ನೂ ಬಿಡದೆ ಸದೆಬಡಿಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ)ದ ವಜ್ರ ಮಹೋತ್ಸವ ಸಮಾರಂಭದಲ್ಲಿ ಸೋಮವಾರ ಮಾತನಾಡಿದ ಅವರು, ಪ್ರಜಾಪ್ರಭುತ್ವ, ನ್ಯಾಯಕ್ಕೆ ಭ್ರಷ್ಟಾಚಾರ ಎಂಬುದು ಅತ್ಯಂತ ದೊಡ್ಡ ತಡೆಗೋಡೆಯಾಗಿದೆ. ಅದರಿಂದ ಭಾರತವನ್ನು ಮುಕ್ತಗೊಳಿಸುವುದು ಸಿಬಿಐನ ಮುಖ್ಯ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.

ಯಾವುದೇ ಭ್ರಷ್ಟವ್ಯಕ್ತಿಯನ್ನು ಸುಮ್ಮನೆ ಬಿಡಬಾರದು ಎಂಬುದು ದೇಶದ ಜನರ ಹೆಬ್ಬಯಕೆಯಾಗಿದೆ. ದಶಕಗಳಿಂದ ಭ್ರಷ್ಟಾಚಾರದ ಲಾಭ ಪಡೆದವರು ತನಿಖಾ ಸಂಸ್ಥೆಗಳ ದಾಳಿಗೆ ಒಳಗಾಗುವ ವಾತಾವರಣವನ್ನು ಸೃಷ್ಟಿಮಾಡಿಕೊಂಡಿದ್ದಾರೆ. ಭ್ರಷ್ಟರ ಅಧಿಕಾರ ಹಾಗೂ ಅವರ ವಾತಾವರಣಗಳನ್ನು ಕಂಡು ತನಿಖಾ ಸಂಸ್ಥೆಗಳು ಹಿಂಜರಿಯಬೇಕಿಲ್ಲ. ಈ ವ್ಯಕ್ತಿಗಳೆಲ್ಲಾ ನಿಮ್ಮ ಗಮನವನ್ನು ಬೇರೆ ಸೆಳೆಯುತ್ತಾರೆ. ಆದಾಗ್ಯೂ ನೀವು ನಿಮ್ಮ ಕೆಲಸದ ಮೇಲೆ ಗಮನಹರಿಸಿ. ಯಾವುದೇ ಭ್ರಷ್ಟರನ್ನು ಸುಮ್ಮನೆ ಬಿಡಬೇಡಿ. ನಮ್ಮ ಪ್ರಯತ್ನದಲ್ಲಿ ಕೊರತೆ ಇರಬಾರದು. ದೇಶ ಹಾಗೂ ಜನರ ಬಯಕೆ ಕೂಡ ಇದೆ ಆಗಿದೆ ಎಂದು ಹೇಳಿದರು.

ನಕಲಿ ಕೇಸ್‌ನಲ್ಲಿ ಮೋದಿ ಸಿಲುಕಿಸಲು ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು: ಅಮಿತ್‌ ಶಾ

ಸಿಬಿಐ ಸಂಸ್ಥೆಯ ಹೆಸರು ಈಗ ಪ್ರತಿಯೊಬ್ಬರ ತುಟಿಯ ಮೇಲಿದೆ. ಸತ್ಯ ಹಾಗೂ ನ್ಯಾಯಕ್ಕೆ ಇದೊಂದು ಬ್ರಾಂಡ್‌ ಆಗಿದೆ. ಪಂಚಾಯಿತಿ ಮಟ್ಟದಲ್ಲಿ ಕೂಡ ಯಾವುದೇ ಅಪರಾಧ ನಡೆದರೆ, ಅಲ್ಲಿನ ಜನರು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಹೇಳುತ್ತಾರೆ ಎಂದು ಹೇಳಿದರು. ಇದೇ ವೇಳೆ, ನಾಗಪುರ, ಪುಣೆ ಹಾಗೂ ಶಿಲ್ಲಾಂಗ್‌ನಲ್ಲಿ ನಿರ್ಮಾಣಗೊಂಡಿರುವ ಹೊಸ ಕಚೇರಿಗಳನ್ನು ಮೋದಿ ಅವರು ಉದ್ಘಾಟಿಸಿದರು.

ಸಾಲ ತೀರಿಸುವ ಬದಲು ವಿದೇಶದಲ್ಲಿ ಮೋಜು ಮಸ್ತಿಗೆ ಆಸ್ತಿ ಖರೀದಿಸಿ ಭಾರತದಿಂದ ಪಲಾಯನಗೈದ ಮದ್ಯದ ದೊರೆ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ
ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ