ಶ್ವಾನಗಳು ಸ್ವಾಮಿನಿಷ್ಠೆಗ ಹೆಸರುವಾಸಿ ಶ್ವಾನಗಳು ಮನುಷ್ಯರನ್ನು ಅಪಾಯದಿಂದ ರಕ್ಷಿಸಿದ, ಅಲ್ಲದೇ ಆಟವಾಡುತ್ತಾ ಮನೋರಂಜನೆ ನೀಡುವ ಅನೇಕ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ನೀವು ನೋಡಿರಬಹುದು. ಇಲ್ಲೊಂದು ಕಡೆ ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಯ ಮರಿಯೊಂದನ್ನು ನಾಯಿಯೂ ರಕ್ಷಣೆ ಮಾಡಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ದೃಶ್ಯವನ್ನು ನಾಯಿಯ ಮಾಲೀಕರು ಚಿತ್ರೀಕರಿಸಿದ್ದು, ಕಪ್ಪು ಬಣ್ಣದ ನಾಯಿಯೊಂದು ನದಿ ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಯ ಮರಿಯನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ಈಜುತ್ತಾ ಬಂದು ಈಚೆ ದಡವನ್ನು ಸೇರುತ್ತದೆ. ಈ ವೇಳೆ ಜಿಂಕೆ ಮರಿ ಕೂಗುತ್ತಿರುವ ಧ್ವನಿ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಇತ್ತ ಸಾಹಸಿ ಕೆಲಸ ಮಾಡಿದ ನಾಯಿಗೆ ನಾಯಿಯ ಮಾಲೀಕ ಗುಡ್‌ಬಾಯ್ ಎಂದು ಹೇಳುತ್ತಿದ್ದಾನೆ.
Dog saves baby deer from Drowning.
A lesson...! pic.twitter.com/FisXAMJmhc
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾಯಿಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಿಗಳು ಈ ವಿಶ್ವದಲ್ಲಿರುವ ಅತ್ಯಂತ ಶ್ರೇಷ್ಠ ಪ್ರಾಣಿಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಶ್ವಾನಗಳು ಮನುಷ್ಯನ ಬೆಸ್ಟ್ ಫ್ರೆಂಡ್ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಂಗ್ಲೆಂಡ್‌ನ ನ್ಯೂ ಹಂಪ್‌ಶೈರ್‌ನಲ್ಲಿ ನಾಯಿಯೊಂದು ತನ್ನ ಮಾಲೀಕ ಅಪಾಯದಲ್ಲಿರುವುದನ್ನು ತಿಳಿದು ಆ ಸ್ಥಳಕ್ಕೆ ಧಾವಿಸಿ ಆತನ ಜೀವ ಉಳಿಸಿದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು.. ಟಿನ್ಸ್‌ಲಿ (Tinsley) ಹೆಸರಿನ ಜರ್ಮನ್ ಶೆಫರ್ಡ್ ನಾಯಿ ಹೀಗೆ ಮಾಲೀಕನ ರಕ್ಷಣೆಗೆ ಧಾವಿಸಿ ಬಂದ ಶ್ವಾನ. ಈ ಶ್ವಾನದ ಮಾಲೀಕ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಪಲ್ಟಿ ಹೊಡೆದಿತ್ತು. ಪರಿಣಾಮ ಮಾಲೀಕ ಅಪಾಯಕ್ಕೊಳಗಾಗಿದ್ದಾರೆ. ಕಾರು ಹಾಗೂ ಟ್ರಕ್‌ನಲ್ಲಿದ್ದವರಿಗೂ ಈ ಅಪಘಾತದಲ್ಲಿ ಗಾಯಗಳಾಗಿತ್ತು. ಆದರೆ ಶ್ವಾನ ಟಿನ್ಸ್‌ಲಿ ನೆರವಿನಿಂದ ಅವರು ಶೀಘ್ರದಲ್ಲೇ ವೈದ್ಯಕೀಯ ಸಹಾಯ ಪಡೆಯುವಂತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶ್ವಾನಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಮನೆ ಇಲ್ಲದ ನಿರ್ಗತಿಕ... ಭಾವುಕ ವಿಡಿಯೋ ವೈರಲ್
ಇತ್ತೀಚೆಗೆ ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯ ಲೋರ್ಮಿಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿತ್ತು. ಇಲ್ಲಿ ನವಜಾತ ಹೆಣ್ಣು ಶಿಶುವನ್ನು ಜನ್ಮ ಕೊಟ್ಟ ತಾಯಿಯೇ ಬೀದಿಗೆಸೆದಿದ್ದಳು. ಆದರೆ ಕಂದನ ಕಂಡ ನಾಯಿಗಳು ಸುತ್ತಲೂ ನಿಂತು ರಕ್ಷಣೆ ನೀಡಿದ್ದವು. ಕೆಲ ಸಮಯದ ಬಳಿಕ ಈ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ನಡುವೆ ಇದ್ದರೂ ಈ ಮುಗ್ಧ ನವಜಾತ ಶಿಶು ಸಂಪೂರ್ಣವಾಗಿ ಆರೋಗ್ಯಕರ ಮತ್ತು ಸುರಕ್ಷಿತವಾಗಿತ್ತು.
ಪ್ರೀತಿಯ ಶ್ವಾನದ ಬರ್ತ್‌ಡೇಗೆ ಅದ್ದೂರಿ ಪಾರ್ಟಿ... ಯುವಕ ಖರ್ಚು ಮಾಡಿದ್ದು ಎಷ್ಟು ಲಕ್ಷ...?
ಲೋರ್ಮಿಯ ಸರಿಸ್ಟಾಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ನವಜಾತ ಹೆಣ್ಣು ಶಿಶುವೊಂದು ಗುಡ್ಡದ ಭಾಗದಲ್ಲಿ ನಾಯಿಗಳ ನಡುವೆ ಅಳುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಹತ್ತಿರದ ನಿವಾಸಿಗಳ ಕಣ್ಣಂಚು ಒದ್ದೆಯಾಗಿದೆ. ಕೂಡಲೇ ಮನೆ ಸದಸ್ಯ ಭೈಯಾಲಾಲ್ ಸಾಹು ಗ್ರಾಮದ ಸರಪಂಚ್‌ಗೆ ಮಾಹಿತಿ ನೀಡಿದ್ದಾರೆ. ಸರಪಂಚ್ ತಡ ಮಾಡದೆ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಷಯ ತಿಳಿದು ಪೊಲೀಸರು ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಕಂದನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.