ಮೊದಲ ಮಳೆಗೆ ಕುಣಿದು ಕುಪ್ಪಳಿಸಿದ ನಾಯಿ... ವೈರಲ್ ವಿಡಿಯೋ

By Anusha Kb  |  First Published May 7, 2023, 2:31 PM IST

ಇಳೆಯ ಕೊಳೆ ತೊಳೆಯುವ ಮಳೆ ಎಲ್ಲರಲ್ಲಿ ಹೊಸ ಹುರುಪು ನೀಡುತ್ತದೆ. ಆದರೆ ಮಳೆಗೆ ಶ್ವಾನ ಖುಷಿ ಪಡುವುದನ್ನು ಎಲ್ಲಾದರು ನೋಡಿದ್ದೀರಾ? ಇಲ್ಲ ಎಂದಾದಲ್ಲಿ ಇಲ್ಲಿದೆ ನೋಡಿ ವೈರಲ್ ವೀಡಿಯೋ (viral video) 


ಬೆಂಗಳೂರು: ಈ ವರ್ಷದ ಬೇಸಿಗೆಯ ಬಿರು ಬಿಸಿಲಿಗೆ ಮನುಷ್ಯರು ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳು ಕೂಡ ದಣಿದು ಹೋಗಿವೆ.  ಬಿಸಿಲಿನ ದಾಹ ತಡೆಯಲಾಗದೇ ಪ್ರಾಣಿ ಪಕ್ಷಿಗಳು ನೀರಿರುವ ಜಾಗ ಅರಸಿ ಸಾಗಿವೆ. ಹೀಗಿರುವಾಗ ರಾಜ್ಯಾದ್ಯಂತ ಅಲ್ಲಲ್ಲಿ ಮಳೆಯಾಗಿದ್ದು, ಮನುಷ್ಯರು ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳಿಗೆ ವರ್ಷಧಾರೆ ತಂಪೆರೆದಿದೆ. ಮಳೆಯಿಂದಾಗಿ ವಾತಾವರಣವೂ ತಂಪಾಗಿದ್ದು, ಜನ ನಿಟ್ಟುಸಿರು  ಬಿಟ್ಟಿದ್ದಾರೆ. 

ಇಳೆಗೆ ತಂಪೆರೆಯುವ ಮಳೆ ಎಂದರೆ ಎಲ್ಲರಿಗೂ ಏನೋ ಸಂತಸ. ಬಿಸಿಲಿನ ಧಗೆಗೆ ಕಾದ ಭೂಮಿತಾಯಿ ವರ್ಷದ ಮೊದಲ ಮಳೆ ಮೈಗೆ ಬೀಳುತ್ತಿದ್ದಂತೆ, ಖುಷಿಯಿಂದ ತಂಪಾಗುತ್ತಾಳೆ. ಹಾಗೆಯೇ ಮನುಷ್ಯರು ಕೂಡ ಮೊದಲ ಮಳೆ ಬರುತ್ತಿದ್ದಂತೆ ಅನೇಕರು ಮಳೆಯಲ್ಲಿ ನೆನದು ಡಾನ್ಸ್ ಮಾಡಿ ಕುಣಿದು ಕುಪ್ಪಳಿಸುವುದುಂಟು. ಇಳೆಯ ಕೊಳೆ ತೊಳೆಯುವ ಮಳೆ ಎಲ್ಲರಲ್ಲಿ ಹೊಸ ಹುರುಪು ನೀಡುತ್ತದೆ. ಆದರೆ ಮಳೆಗೆ ಶ್ವಾನ ಖುಷಿ ಪಡುವುದನ್ನು ಎಲ್ಲಾದರು ನೋಡಿದ್ದೀರಾ? ಇಲ್ಲ ಎಂದಾದಲ್ಲಿ ಇಲ್ಲಿದೆ ನೋಡಿ ವೈರಲ್ ವೀಡಿಯೋ (viral video) 

Tap to resize

Latest Videos

ಮಳೆ ಜೋರಾಗಿ ಸುರಿದು ಮನೆ ಮುಂದಿನ ಅಂಗಳದಲ್ಲಿ ನೀರು ತುಂಬಿ ಉಕ್ಕಿ ಹರಿಯುತ್ತಿದ್ದರೆ, ಇತ್ತ ಮಳೆಯಿಂದ ಖುಷಿಯಾದ ಶ್ವಾನ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media)ಸಖತ್ ವೈರಲ್ ಆಗಿದೆ. 30 ಸೆಕೆಂಡ್‌ಗಳ ವೀಡಿಯೋದಲ್ಲಿ ಶ್ವಾನ ಸುತ್ತ ಸುತ್ತ ತಿರುಗಿ ಹಾರಿ ಹಾರಿ ಕುಣಿಯುವುದನ್ನು ನೋಡಬಹುದು. ಮನೆಯ ಮಹಡಿಯಿಂದ ಬೀಳುತ್ತಿರುವ ಮಳೆಗೆ  ಎಗರಿ ಎಗರಿ ಶ್ವಾನ ಕುಣಿಯುತ್ತಿದೆ. ಈ ವಿಡಿಯೋ ಈಗ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ.

ಬೀದರ್‌ನಲ್ಲಿ ಭಾರಿ ಮಳೆ: ಹಳ್ಳ ದಾಟಲು ಹೋಗಿ ಮಕ್ಕಳು ಸೇರಿ ಕುಟುಂಬದ ಮೂವರು ನೀರುಪಾಲು

ಮೊದಲ ಮಳೆಗೆ ಮನುಷ್ಯರು ಮಾತ್ರವಲ್ಲ, ಹಕ್ಕಿ ಪ್ರಾಣಿಗಳು ಕೂಡ ಸಂತಸ ವ್ಯಕ್ತಪಡಿಸುತ್ತವೆ ಎಂಬುದನ್ನು ಸಾಬೀತುಪಡಿಸುತ್ತಿವೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಾಮಾನ್ಯವಾಗಿ ಮಳೆ ಮೋಡ ಆವರಿಸಿದಾಗ ನವಿಲುಗಳು ಗರಿ ಬಿಚ್ಚಿ ಕುಣಿಯುತ್ತವೆ. ಕೋಗಿಲೆಗಳು ಉಲಿಯಲು ಶುರು ಮಾಡುತ್ತವೆ. ವಾತಾವರಣದ ಬದಲಾವಣೆ ಪ್ರಾಣಿಗಳಲ್ಲೂ ಸಂತಸ ತರುತ್ತಿರುವುದಂತೂ ಸುಳ್ಳಲ್ಲ. 

ಸೀಸನ್ ನ ಮೊದಲ ಮಳೆ (first rain of the season) ಯಾವಾಗಲೂ ವಿಶೇಷವಾಗಿರುತ್ತೆ ಅಲ್ವಾ? ಆ ತುಂತುರು ಮಳೆ, ಮಳೆ ನೆಲಕ್ಕೆ ಬಿದ್ದಾಗ ಎದ್ದೇಳುವ ಪರಿಮಳ, ವಾವ್ ಎನಿಸುತ್ತದೆ. ಅಷ್ಟೇ ಯಾಕೆ ಬಿಸಿಲಿನ ಶಾಖ ಕಳೆದು ಮೊದಲ ಮಳೆ ಬೀಳುವಾಗ, ಆ ಮಳೆಯಲ್ಲಿ ನೆನೆಯುವುದು ವಾವ್ ಎನ್ನುವಂತಹ ಭಾವನೆ ಮೂಡಿಸುತ್ತೆ. ಏಕೆಂದರೆ ಇದು ಸುಡುವ ಶಾಖದಿಂದ ನಮಗೆ ಪರಿಹಾರವನ್ನು ನೀಡುತ್ತದೆ.  ಮಳೆಗಾಲ ಅಲ್ಲದೇ ಬೇರೆ ಸೀಸನ್ ನಲ್ಲಿ ಬರೋ ಮಳೆಯನ್ನು ಎಂಜಾಯ್ ಮಾಡೋದು ತಪ್ಪು.

ಹೌದು, ಮಳೆಗಾಲದ (Monsoon) ಅಲ್ಲದ ಮಳೆಯಲ್ಲಿ (Off season rain), ನೆನೆಯುವುದನ್ನು ತಪ್ಪಿಸಿ ಎಂದು ನಿಮ್ಮ ಹಿರಿಯರು ಪದೇ ಪದೇ ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಯಾಕೆ ಅವರು ಇದನ್ನೇ ಹೇಳುತ್ತಾರೆ? ಇದರಿಂದ ಏನಾಗುತ್ತೆ ಎಂದು ಯೋಚನೆ ಮಾಡಿದ್ದೀರಾ? ಮೊದಲ ಮಳೆಯಲ್ಲಿ ಒದ್ದೆಯಾಗುವುದನ್ನು ನೀವು ಏಕೆ ತಪ್ಪಿಸಬೇಕು ಎನ್ನುವುದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಕಾರಣಗಳು ಇಲ್ಲಿವೆ:

ಮೊದಲನೆಯದಾಗಿ, ಮಳೆಯ ಮೊದಲು ಮತ್ತು ನಂತರ ತಾಪಮಾನದಲ್ಲಿನ ಭಾರಿ ವ್ಯತ್ಯಾಸ ಉಂಟಾಗುತ್ತೆ. ಈ ತಾಪಮಾನದ ವ್ಯತ್ಯಾಸದಿಂದಾಗಿ ರೋಗ ನಿರೋಧಕ (Immunity Power) ಶಕ್ತಿಯ ಮೇಲೆ ಪರಿಣಾಮ ಬೀರುತ್ತೆ. ಅಲ್ಲದೆ, ನೀವು ಒದ್ದೆಯಾದಾಗ, ದೇಹದ ತಾಪಮಾನವು (Body Temperature) ತೀವ್ರವಾಗಿ ಕುಸಿಯುತ್ತದೆ, ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ. ಇದರಿಂದ ನೀವು ಬೇಗನೆ ಜ್ವರ (Fever), ಶೀತ (Cold), ಕೆಮ್ಮು (Cought) ಮೊದಲಾದ ಸಮಸ್ಯೆಗಳಿಗೆ ಈ ಮಳೆ ಕಾರಣವಾಗುತ್ತೆ. 

ದೇಹವು ಪ್ರತಿ ಸೀಸನ್ ಗೆ ಅನುಗುಣವಾಗಿ ತಾಪಮಾನಕ್ಕೆ (Tempreture)ಹೊಂದಿಕೊಳ್ಳುತ್ತದೆ ಆದರೆ ನೀವು ತೇವಗೊಂಡಾಗ, ತಾಪಮಾನದ ಹಠಾತ್ ಕುಸಿತವು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಸಮತೋಲನವನ್ನು ದುರ್ಬಲಗೊಳಿಸುತ್ತದೆ. ಇಷ್ಟು ಕಡಿಮೆ ಸಮಯದಲ್ಲಿ, ದೇಹವು ಈ ಭಾರಿ ತಾಪಮಾನದ ವ್ಯತ್ಯಾಸಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳ್ಳುತ್ತೆ.

ರಾಜ್ಯದಲ್ಲಿ ಮಳೆ: ಚಿಕ್ಕಮಗಳೂರಲ್ಲಿ ಉಷ್ಣಾಂಶ ದಿಢೀರ್‌ 10 ಡಿಗ್ರಿ ಕುಸಿತ..!

ಅನೇಕ ಜನರು ಮಳೆಯಲ್ಲಿ ಒದ್ದೆಯಾದ ನಂತರ ಕೆಮ್ಮು ಮತ್ತು ಶೀತ ಮೊದಲಾದ ಸಮಸ್ಯೆಗಳಿಗೆ ಒಳಗಾಗುತ್ತಾರೆ. ವಿಪರೀತ ಬಿಸಿಲಿನ ಬಳಿಕ ಮಳೆ ಹನಿ ಸೋಕಿದಾಗ ದೇಹದ ಶಾಖ (Body Temperature))ಸಂಪೂರ್ಣ ಇಳಿದು ಹೋಗುತ್ತದೆ. ವಿಶೇಷವಾಗಿ ಮೊದಲ ಮಳೆಯಲ್ಲಿ ಒದ್ದೆಯಾದ ನಂತರ, ಶೀತ ಅಥವಾ ಶ್ವಾಸನಾಳದ ಸೋಂಕಿಗೆ (Lungs Infection) ಒಳಗಾಗುವ ಸಾಧ್ಯತೆಗಳು ಹೆಚ್ಚು. ಒದ್ದೆಯಾಗುವುದರಿಂದ ನಿಮ್ಮ ದೇಹ ಮತ್ತು ಬಟ್ಟೆಗಳು ಒದ್ದೆಯಾಗುತ್ತವೆ. ಇದು ಶೀತ, ಸೋಂಕುಗಳು ಮತ್ತು ಸೀಸನಲ್ ಅಲರ್ಜಿಗಳಿಗೆ (Seasonal Allergy) ಕಾರಣವಾಗಬಹುದು. ಈ ಸಮಯದಲ್ಲಿ ಉಂಟಾಗುವ ಶೀತವು ಮಾನ್ಸೂನ್ (Monsoon) ಶೀತಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. 

ಈ ಮಳೆಯಲ್ಲಿ ನೆನೆದ ನಂತರ ಏನು ಮಾಡಬೇಕು?

ನೀವು ತೇವಗೊಂಡರೆ, ನಿಮ್ಮ ತಲೆ ಮತ್ತು ದೇಹವನ್ನು ತಕ್ಷಣ ಒರೆಸಿಕೊಳ್ಳಿ. ಒದ್ದೆಯಾಗಿರಲು ಬಿಡಬೇಡಿ. ದೇಹದ ತಾಪಮಾನವನ್ನು (Body Tempreture) ಸಾಮಾನ್ಯಗೊಳಿಸಲು ಸಾಮಾನ್ಯ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ನಿಮ್ಮ ಬಟ್ಟೆ ಒದ್ದೆಯಾಗಿದ್ದರೆ, ತಕ್ಷಣವೇ ಅದನ್ನು ಬದಲಾಯಿಸಿ. ಬಿಸಿಯಾದ ಏನನ್ನಾದರೂ ಕುಡಿಯಿರಿ. ಚಹಾ, ಕಾಫಿ (Coffee) ಏನಾದರೂ ಬಿಸಿ ಬಿಸಿಯಾಗಿ ಸೇವಿಸಿದರೆ ಉತ್ತಮ. 

click me!