ಗಂಗಾಸ್ನಾನದಿಂದ ಬಡತನ ಹೋಗುತ್ತಾ? ಬಿಜೆಪಿ ನಾಯಕರ ವಿರುದ್ಧ ಖರ್ಗೆ ವಾಗ್ದಾಳಿ!

Published : Jan 27, 2025, 07:34 PM ISTUpdated : Jan 27, 2025, 08:25 PM IST
ಗಂಗಾಸ್ನಾನದಿಂದ ಬಡತನ ಹೋಗುತ್ತಾ? ಬಿಜೆಪಿ ನಾಯಕರ ವಿರುದ್ಧ ಖರ್ಗೆ ವಾಗ್ದಾಳಿ!

ಸಾರಾಂಶ

ಗಂಗಾಸ್ನಾನ ಮಾಡುವುದರಿಂದ ದೇಶದಲ್ಲಿ ಬಡತನ ಹೋಗುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್‌ನವರನ್ನು ದೇಶದ್ರೋಹಿಗಳು ಎಂದು ಬಣ್ಣಿಸಿದ ಅವರು, ಧರ್ಮದ ಹೆಸರಿನಲ್ಲಿ ಬಡವರ ಶೋಷಣೆಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.

ಮಧ್ಯಪ್ರದೇಶ (ಜ.27): ಗಂಗಾಸ್ನಾನ ಮಾಡುವುದರಿಂದ ದೇಶದಲ್ಲಿ ಬಡತನ ಹೋಗುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶದ ಮೋವ್‌ನಲ್ಲಿ ಸೋಮವಾರ(ಜ.27)ದಂದು 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ರಾಲಿ ಉದ್ದೇಶಿಸಿ ಮಾತನಾಡಿದರು. ಗಂಗಾಸ್ನಾನ ಮಾಡಲು ಬಿಜೆಪಿ ನಾಯಕರಲ್ಲಿ ಪೈಪೋಟಿ ಇದೆ, ಗಂಗಾಸ್ನಾನ ಮಾಡುವುದರಿಂದ ಬಡತನ ದೂರವಾಗುವುದಿಲ್ಲ, ಆದರೆ ಯಾರ ನಂಬಿಕೆಗೂ ಧಕ್ಕೆ ತರಲು ಬಯಸುವುದಿಲ್ಲ. ಬಿಜೆಪಿ-ಆರ್‌ಎಸ್‌ಎಸ್‌ನವರನ್ನು ದೇಶದ್ರೋಹಿಗಳು ಎಂದು ಬಣ್ಣಿಸಿದ ಅವರು, ಧರ್ಮದ ಹೆಸರಿನಲ್ಲಿ ಬಡವರ ಶೋಷಣೆಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕುಟುಂಬ ಸಮೇತ ಕುಂಭಸ್ನಾನಕ್ಕೆ ಪ್ರಯಾಗ್‌ರಾಜ್‌ಗೆ ಆಗಮಿಸಿದ ಸಂದರ್ಭದಲ್ಲಿ ಖರ್ಗೆಯವರು ಅಪಹಾಸ್ಯ ಮಾಡಿದ್ದಾರೆ. 2025 ರ ಪ್ರಯಾಗರಾಜ್ ಮಹಾಕುಂಭದಲ್ಲಿ ಅಮಿತ್ ಶಾ ಅವರು ತಮ್ಮ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅನೇಕ ಋಷಿಮುನಿಗಳು ಮತ್ತು ಸಂತರು ಸಹ ಅವರೊಂದಿಗೆ ಇದ್ದರು. ಇದಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸ್ನಾನಕ್ಕೆ ಆಗಮಿಸಿದ್ದರು. ಅದೇ ಸಮಯದಲ್ಲಿ, ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪ್ರಯಾಗರಾಜ್ ತಲುಪಿ ಸ್ನಾನ ಮಾಡಲಿದ್ದಾರೆ.ಇಂಥ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿಮೋದಿ-ಅಮಿತ್‌ ಶಾ ಅದೆಷ್ಟೇ ತೀರ್ಥಸ್ನಾನ ಮಾಡಿದ್ರೂ ಅವರು ಹೋಗೋದು ನರಕಕ್ಕೆ: ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ನಾಯಕರಿಗೆ ಸಂಬಿತ್ ಪಾತ್ರ ಸವಾಲು:

ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, 'ಮಹಾಕುಂಭವು ಕೋಟ್ಯಂತರ ವರ್ಷಗಳಿಂದ ಹಿಂದೂಗಳ ನಂಬಿಕೆಯ ಪ್ರತೀಕವಾಗಿದೆ. ಪ್ರಪಂಚದಾದ್ಯಂತ ಭಕ್ತಿಯ ಭಾವನೆ ಇದೆ, ಅದೇ ಸಮಯದಲ್ಲಿ ರಾಜಕೀಯ ಪಕ್ಷವೊಂದು ಅದನ್ನು ಲೇವಡಿ ಮಾಡುತ್ತಿದೆ. ಇಂದು ಖರ್ಗೆ ಜೀ ಹೇಳಿದ ಮಾತುಗಳಿಂದ ನನಗೆ ತುಂಬಾ ನೋವಾಗಿದೆ. ಹಜ್ ಮಾಡಲು ಸಾವಿರಾರು ಜನರು ಹೋಗಬಹುದೇ? ಎಂದು ಪ್ರಶ್ನಿಸಿದ್ದಾರೆ.

ಸಂವಿಧಾನ ರಕ್ಷಣೆಗೆ ಹೋರಾಟ ಅನಿವಾರ್ಯ: ಮಲ್ಲಿಕಾರ್ಜುನ ಖರ್ಗೆ ಕರೆ

ರಾಹುಲ್ ಗಾಂಧಿ ಇಟಲಿಯ ಈಜುಕೊಳದಲ್ಲಿ ಸ್ನಾನ ಮಾಡಲಿ:

 ಸನಾತನ ಧರ್ಮದ ವಿರುದ್ಧ ಖರ್ಗೆ ಮಾತನಾಡುತ್ತಿರುವುದು ಇದೇ ಮೊದಲಲ್ಲ, ಸರ್ಕಾರಕ್ಕೆ ಬಂದರೆ ಸನಾತನ ಧರ್ಮವನ್ನೇ ಕೊನೆಗಾಣಿಸುತ್ತೇವೆ ಎಂದು ಈ ಹಿಂದೆಯೂ ಹೇಳಿದ್ದರು ಇದೊಂದು ನಾಚಿಕೆಗೇಡಿನ ಸಂಗತಿ. ಬೇಕಾದರೆ ರಾಹುಲ್ ಗಾಂಧಿ, ನೀವು ಇಟಲಿಗೆ ಹೋಗಿ ಈಜುಕೊಳದಲ್ಲಿ ಆದರೆ ಗಂಗಾಮಾತೆಯ ಬಗ್ಗೆ ಇಂತಹ ಟೀಕೆ ಮಾಡಬೇಡಿ. ದೇಶದ ಜನರ ನಂಬಿಕೆ ಬಗ್ಗೆ ಟೀಕಿಸುತ್ತಿರುವ ನೀವು ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌