ಪುಟ್ಟ ಬಾಲಕನನ್ನು ಮರಕ್ಕೆ ಕಟ್ಟಿಹಾಕಿ ವಿಕೃತಿ ಮೆರೆದ ದುರುಳರು; ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾರಿಹಬ್ಬ ಶುರು!

Published : Jan 27, 2025, 07:19 PM IST
ಪುಟ್ಟ ಬಾಲಕನನ್ನು ಮರಕ್ಕೆ ಕಟ್ಟಿಹಾಕಿ ವಿಕೃತಿ ಮೆರೆದ ದುರುಳರು; ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾರಿಹಬ್ಬ ಶುರು!

ಸಾರಾಂಶ

ಮಕ್ಕಳ ಗುಂಪೊಂದು ಪೈಪ್ ಮುರಿದ ಆರೋಪದ ಮೇಲೆ ಬಾಲಕನನ್ನು ಮರಕ್ಕೆ ಕಟ್ಟಿ ಹಿಂಸಿಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಕ್ಕಳು ಗುಂಪಾಗಿ ಆಟವಾಡುತ್ತಿರುವಾಗ ಪೈಪ್ ಮುರಿದಿದ್ದಕ್ಕೆ 90ರ ದಶಕದ ಸಿನಿಮಾ ಸ್ಟೈಲ್‌ನಲ್ಲಿ ಚಿಕ್ಕ ಬಾಲಕನನ್ನು ಮರಕ್ಕೆ ಕಟ್ಟಿಹಾಕಿ ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಆ ಪುಟ್ಟ ಬಾಲಕ ರಕ್ಷಣೆಗಾಗಿ ಜೋರಾಗಿ ಕೂಗುತ್ತಿದ್ದರೂ ಅದನ್ನು ಲೆಕ್ಕಿಸದೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದಾರೆ. ಈ ವೀಡಿಯೋ ಪೊಲೀಸರಿಗೂ ಸಿಕ್ಕಿದ್ದು, ನಂತರ ಗೂಂಡಾಗಳಿಗೆ ಕೊಟ್ಟ ಶಿಕ್ಷೆ ಏನಿರಬಹುದು ನೀವೇ ಊಹಿಸಿ..

ಈ ಘಟನೆ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಕರಾರಿ ಪೊಲೀಸ್ ಥಾಣಾ ವ್ಯಾಪ್ತಿಯ ಸಲ್ಲಾ ಗುವಾರಾ ತೈಯಬ್‌ಪುರ ಗ್ರಾಮದಲ್ಲಿ ನಡೆದಿದೆ.  ಇಲ್ಲಿ 15 ವರ್ಷದ ಹುಡುಗನನ್ನು ಮರಕ್ಕೆ ಕಟ್ಟಿ, ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದರ ಬೆನ್ನಲ್ಲಿಯೇ ಬಾಲಕನ ತಂದೆ ಫೂಲ್ ಚಂದ್ರ ಪಾಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜನವರಿ 9 ರಂದು ಬೆಳಿಗ್ಗೆ ತಮ್ಮ ಮಗ ಸ್ನೇಹಿತರೊಂದಿಗೆ ಪಕ್ಕದ ಖರ್ಗು ಗ್ರಾಮಕ್ಕೆ ಆಟವಾಡಲು ಹೋಗಿದ್ದನು. ಆಗ ಗ್ರಾಮದ ಕೆಲವು ಗೂಂಡಾಗಳು ಆತನ ಮೇಲೆ ಕೊಳವೆ ಮುರಿದ ಆರೋಪ ಹೊರಿಸಿ, ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಅವನನ್ನು ಸುಖಾ ಸುಮ್ಮನೆ ಮರಕ್ಕೆ ಕಟ್ಟಿಹಾಕಿ ಥಳಿಸಿ ಅವಮಾನಿಸಿ ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ವಿಕೃತಿ ಮೆರೆದಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಬಾಲಕನ ತಂದೆ ದೂರು ಕೊಟ್ಟಿದ್ದಾರೆ.

ಇದನ್ನೂ ಓದಿ: ಕುಂಭಮೇಳದ ಸುಂದರಿ ಮೊನಾಲಿಸಾ 10 ದಿನದಲ್ಲಿ ಗಳಿಸಿದ್ದೆಷ್ಟು? ವೈರಲ್ ಪೋಸ್ಟ್ ನೋಡಿ ಎಲ್ಲರೂ ಶಾಕ್!

ಸಹಾಯಕ್ಕಾಗಿ ಬೇಡಿಕೊಂಡ ಬಾಲಕ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕನನ್ನು ಹಗ್ಗದಿಂದ ಮರಕ್ಕೆ ಕಟ್ಟಿರುವುದು, ಸಹಾಯಕ್ಕಾಗಿ ಕಿರುಚುತ್ತಿರುವುದು ಕಂಡುಬರುತ್ತದೆ. ಆರೋಪಿಗಳಲ್ಲಿ ಪರಿಪರಿಯಾಗಿ ಬೇಡುತ್ತಾ ತಾನು ಯಾವುದೇ ಪೈಪ್ ಅನ್ನು ಒಡೆದುಹಾಕಿಲ್ಲ. ನಾನು ತಪ್ಪು ಮಾಡಿಲ್ಲ, ನಿರಪರಾಧಿ ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಆದರೂ ಆ ಬಾಲಕ ಅಳುವುದನ್ನು ನೋಡುತ್ತಾ ವಿಕೃತ ಖುಷಿ ಅನುಭವಿಸಿದ್ದಾರೆ. ಈ ಅಮಾನವೀಯ ಘಟನೆಯನ್ನು ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ.

ಇದೀಗ ಪೊಲೀಸ್ ಅಧಿಕಾರಿ ಸದರ್ ಶಿವಾಂಕ್ ಸಿಂಗ್ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದಾರೆ. ಅವರ ವಿರುದ್ಧ ಬಾಲಕನ ತಂದೆಯೂ ದೂರು ನೀಡಿದ್ದು, ಪ್ರಕರಣದ ವಿಚಾರನೆ ಮಾಡಿದ್ದಾರೆ. ಇಲ್ಲಿ ಬಾಲಕನ ವಿರುದ್ಧ ಸಿನಿಮಾದ ಸ್ಟೈಲ್‌ನಲ್ಲಿ ಕಿರುಕುಳ ಕೊಟ್ಟವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ ಎನ್ನುವುದೇ ರೋಚಕ ತಿರುವು ಆಗಿದೆ.

ಇದನ್ನೂ ಓದಿ: ಪ್ರೀತಿಗಾಗಿ ಲಿಂಗ ಬದಲಿಸಿದ ಪ್ರೇಮಿಗಳು; ಇದು ಸವಿತಾ ಎಂಬ ಹುಡುಗಿ ಲಿಲಿತ್ ಆಗಿ ಪೂಜಾ ಮದುವೆಯಾದ ಕಥೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್