ಕುರ್ತಾ-ಪೈಜಾಮಾ ಹೊಲಿಸಿಕೊಳ್ಳಲು ಕ್ಯೂನಲ್ಲಿ ನಿಂತ ಗಂಡೈಕ್ಳು; ಟ್ರೈಲರ್‌ಗಳು ಫುಲ್ ಬ್ಯುಸಿ

Published : Jan 27, 2025, 07:29 PM IST
ಕುರ್ತಾ-ಪೈಜಾಮಾ ಹೊಲಿಸಿಕೊಳ್ಳಲು ಕ್ಯೂನಲ್ಲಿ ನಿಂತ ಗಂಡೈಕ್ಳು; ಟ್ರೈಲರ್‌ಗಳು ಫುಲ್ ಬ್ಯುಸಿ

ಸಾರಾಂಶ

ಕುರ್ತಾ-ಪೈಜಾಮಾಗಳಿಗೆ ಭಾರೀ ಬೇಡಿಕೆ ಬಂದಿದ್ದು, ಟ್ರೈಲರ್‌ಗಳು 24 ಗಂಟೆ ಕೆಲಸ ಮಾಡುತ್ತಿವೆ. ಜವಾಹರ್ ಕೋಟ್ ಡಿಸೈನ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಒಂದು ಕೋಟ್‌ಗೆ 5,000 ರೂ. ಚಾರ್ಜ್ ಮಾಡಲಾಗುತ್ತಿದೆ.

ನವದೆಹಲಿ: ಸಿನಿಮಾ ತಾರೆಗಳ ಬಟ್ಟೆಗಳನ್ನು ಸಿದ್ಧಪಡಿಸಲು ಡಿಸೈನರ್‌ಗಳು ಇರುತ್ತಾರೆ. ವಿಶೇಷ ಕಾರ್ಯಕ್ರಮಗಳು ಬಂದರಂತೂ ಬಾಲಿವುಡ್ ಕಲಾವಿದರು ಧರಿಸುವ ಉಡುಗೆ-ತೊಡುಗೆ ತುಂಬಾನೇ ಭಿನ್ನ ಮತ್ತು ವಿಶೇಷವಾಗಿರುತ್ತವೆ. ಇದಕ್ಕಾಗಿ ಡಿಸೈನರ್ಸ್ ಸಾಕಷ್ಟು ಶ್ರಮವಹಿಸುತ್ತಾರೆ. ಆದ್ರೆ ರಾಜಕೀಯ ನಾಯಕರ ಬಟ್ಟೆಗಳು ಸಿದ್ಧಪಡಿಸುವ ದೆಹಲಿಯ ಟ್ರೈಲರ್‌ ಅಂಗಡಿಗಳಿಗಿಂದು ಫುಲ್ ಬ್ಯುಸಿಯಾಗಿದ್ದು, ಇಲ್ಲಿಯ ಕಾರ್ಮಿಕರು ಎರಡೆರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ದೆಹಲಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ. ದೆಹಲಿಯ ಪ್ರಮುಖ ಮಾರುಕಟ್ಟೆಗಳಲ್ಲಿರುವ ಟ್ರೈಲರ್‌ ಶಾಪ್‌ಗಳ ಮುಂದೆ ಕ್ಯೂ ನಿಂತಿರುವ  ಪುರುಷರು ಕುರ್ತಾ ಮತ್ತು ಪೈಜಾಮಾಗಳಿಗಾಗಿ ಕಾಯುತ್ತಿದ್ದಾರೆ.

ದೆಹಲಿಯಲ್ಲಿರುವ ಸುಮಾರು 64 ವರ್ಷಗಳಷ್ಟು ಹಳೆಯದಾದ ಟ್ರೈಲರ್ ಅಂಗಡಿಯೊಂದು ಕುರ್ತಾ ಮತ್ತು ಪೈಜಾಮಾ ಸಿದ್ಧಪಡಿಸೋದರಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ. ದೆಹಲಿ ವಿಧಾನಸಭಾ ಚುನಾವಣೆಯಿಂದಾಗಿ ಕುರ್ತಾ- ಪೈಜಾಮಾಗಳಿಗೆ ಹೆಚ್ಚು ಬೇಡಿಕೆಯುಂಟಾಗಿದೆ. ಒಂದು ಸೆಟ್ ಕುರ್ತಾ-ಪೈಜಾಮಾ ರೆಡಿಯಾಗಲು ಮೂರು ದಿನಗಳು ಬೇಕಾಗುತ್ತದೆ. ದಿನದ 24 ಗಂಟೆಯೂ ಕೆಲಸ ಮಾಡಿದರೂ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿಯ ಟ್ರೈಲರ್‌ಗಳು ಹೇಳುತ್ತಾರೆ. 

ಟ್ರೈಲರ್ ಅಂಗಡಿಯೊಂದರ ಮಾಲೀಕರಾಗಿರುವ ನಯೀಂ ರಾಜಾ ಎಂಬವರು ಮಾಧ್ಯಮದ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ಮತದಾನ ಮತ್ತ ಚುನಾವಣೆ ಫಲಿತಾಂಶಕ್ಕೂ ಮೊದಲೇ ಎಲ್ಲಾ ಆರ್ಡರ್‌ಗಳನ್ನು ಕ್ಲಿಯರ್ ಮಾಡುತ್ತೇವೆ. ತುಂಬಾ ಜನರು ಮತದಾನದ ದಿನದಂದು ಧರಿಸಲು ಆರ್ಡರ್ ನೀಡುತ್ತಿದ್ದಾರೆ. ಇನ್ನುಳಿದಂತೆ ಫಲಿತಾಂಶ ಮತ್ತು ಪದಗ್ರಹಣ ಸಂದರ್ಭದಲ್ಲಿಯೂ ಟ್ರೆಡಿಷನಲ್ ಔಟ್‌ಫಿಟ್‌ಗೆ ಹೆಚ್ಚು ಬೇಡಿಕೆ ಇರುತ್ತದೆ. ಹಾಗಾಗಿ ಆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಇಚ್ಛಿಸಿರೋ ರಾಜಕೀಯ ಪಕ್ಷದ ಕಾರ್ಯಕರ್ತರು ಹೊಸದಾಗಿ ಕುರ್ತಾ ಮತ್ತು ಪೈಜಾಮಾ ಹೊಲಿಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ.

ಚುನಾವಣೆಗೂ ಮೊದಲು ಐವರು ಸೇರಿ ಒಂದು ಕುರ್ತಾ ಮತ್ತು ಪೈಜಾಮಾ ಹೊಲೆಯುತ್ತಿದ್ದರು. ಇದೀಗ ಬೇಡಿಕೆ ಹೆಚ್ಚಾಗಿದ್ದರಿಂದ ಓರ್ವ ಕಾರ್ಮಿಕ ದಿನಕ್ಕೆ ಎರಡು ಕುರ್ತಾ-ಪೈಜಾಮಾ ಸ್ಟಿಚ್ ಮಾಡುತ್ತಿದ್ದಾರೆ. ದಿನದ 24 ಗಂಟೆಯೂ ಕೆಲಸ ನಡೆಯುತ್ತಿದೆ. ಜವಾಹರ್ ಕೋಟ್‌ಗೆ ಹೆಚ್ಚು ಡಿಮ್ಯಾಂಡ್ ಇದೆ. ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಜವಾಹರ್ ಕೋಟ್ ಡಿಸೈನ್ ಹೆಚ್ಚು ಇಷ್ಟವಾಗುತ್ತಿದೆ. ಈ ಡಿಸೈನ್ ಯಾವಾಗಲೂ ಟ್ರೆಂಡಿಂಗ್‌ನಲ್ಲಿರುತ್ತೆ ಎಂದು  ನಯೀಂ ರಾಜಾ ಹೇಳುತ್ತಾರೆ. 

ಇದನ್ನೂ ಓದಿ: ಉಚಿತ ಸ್ಕೀಂ ತಪ್ಪಲ್ಲ ಎಂದು ಮೋದಿ ಅರ್ಥ ಮಾಡಿಕೊಳ್ಳಲಿ: ಬಿಜೆಪಿ ಪ್ರಣಾಳಿಕೆಗೆ ಕೇಜ್ರಿವಾಲ್ ಟಾಂಗ್

ಮಾರುಕಟ್ಟೆಯಲ್ಲಿ ಶೇ.30ರಷ್ಟು ವ್ಯಾಪಾರ ಹೆಚ್ಚಳವಾಗಿದ್ದು, ಶೇ.80ರಷ್ಟು ಕೆಲಸ ಅಧಿಕವಾಗಿದೆ. ಒಂದು ಜವಾಹರ್ ಕೋಟ್ ಹೊಲೆಯಲು 5,000 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಸಾಮಾನ್ಯ ಕುರ್ತಾ ಮತ್ತು ಪೈಜಾಮಾ ಸೆಟ್‌ಗೆ 2,000 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಮದುವೆ ಸೀಸನ್ ಆರಂಭವಾಗಿದ್ದರೂ ಪೈಜಾಮಾ-ಕುರ್ತಾಗಳ ಆರ್ಡರ್ ಹೆಚ್ಚಾಗಿ ಬರುತ್ತಿವೆ ಎಂದು ದೆಹಲಿಯ ಟ್ರೈಲರ್‌ಗಳು ಹೇಳುತ್ತಾರೆ.

ದೆಹಲಿ ಚುನಾವಣೆ ದಿನಾಂಕ
ದೆಹಲಿ 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆ.5 ರಂದು ಮತದಾನ ನಡೆಯಲಿದೆ. 1.55 ಕೋಟಿಗೂ ಹೆಚ್ಚು ದೆಹಲಿ ಮತದಾರರು ಮತ ಚಲಾಯಿಸಲಿದ್ದಾರೆ ಮತ್ತು ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ. 70 ಕ್ಷೇತ್ರಗಳಲ್ಲಿ 2 ಮೀಸಲು ಕ್ಷೇತ್ರಗಳಾಗಿವೆ. 13,033 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.

ಇದನ್ನೂ ಓದಿ: ಕಾಂಗ್ರೆಸ್‌ ಫಲಿತಾಂಶದ ಮೇಲೆ ದೆಹಲಿ ಚುನಾವಣೆ ನಿಂತಿದ್ಯಾ? | Delhi Assembly Election | News Talk Suvarna News

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್