ಆಸ್ಪತ್ರೆ ದಾಖಲಾದ ಕೊರೋನಾ ಸೋಂಕಿತನ ಮೇಲೆ ವೈದ್ಯನಿಂದಲೇ ಲೈಂಗಿಕ ದೌರ್ಜನ್ಯ!

Suvarna News   | Asianet News
Published : May 04, 2020, 06:28 PM IST
ಆಸ್ಪತ್ರೆ ದಾಖಲಾದ ಕೊರೋನಾ ಸೋಂಕಿತನ ಮೇಲೆ ವೈದ್ಯನಿಂದಲೇ ಲೈಂಗಿಕ ದೌರ್ಜನ್ಯ!

ಸಾರಾಂಶ

ಕೊರೋನಾ ಸೋಂಕಿತರ ಕ್ವಾರಂಟೈನ್, ಆಸ್ಪತ್ರೆ ದಾಖಲು, ಚಿಕಿತ್ಸೆ ವೇಳೆ...ಹೀಗೆ ಹಲವು ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ, ನರ್ಸ್, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆಗಳು ನಡೆದಿದೆ. ಇದೀಗ ಕೊರೋನಾ  ಸೋಂಕಿತನ ಮೇಲೆ ವೈದ್ಯನೊರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಇಲ್ಲಿದೆ ವಿವರ.

ಮುಂಬೈ(ಮೇ.04): ಕೊರೋನಾ ವಾರಿಯರ್ಸ್ ಮೇಲೆ ದಾಳಿ ಮಾಡಿ ಜೈಲು ಸೇರಿದ ಘಟನೆಗಳಿಗೇನು ಕಡಿಮೆ ಇಲ್ಲ. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಇದೀಗ ಆಸ್ಪತ್ರೆ ದಾಖಲಾದ ಕೊರೋನಾ ಸೋಂಕಿತನ ಮೇಲೆ ಮುಂಬೈನ ವೋಕ್‌ಹಾರ್ಡ್ ಆಸ್ಪತ್ರೆ ವೈದ್ಯ ಲೈಂಗಿಕ ದೌರ್ಜನ್ಯ ಎಸೆಗಿರುವ ಘಟನೆ ನಡೆದಿದೆ.  ವೈದ್ಯನ ಮೇಲೆ ಪ್ರಕರಣ ದಾಖಲಾಗಿದ್ದು, ಇದೀಗ ವೈದ್ಯನನ್ನು ಬಂಧಿಸುವ ಬದಲು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ತಬ್ಲೀಘಿ ಅವಾಂತರ: 25 ಮಂದಿ BSF ಯೋಧರಿಗೆ ಕೊರೋನಾ ಸೋಂಕು!

ಮೇ 01 ರಂದು ಈ ಘಟನೆ ನಡೆದಿದೆ. ಕೊರೋನಾ ಸೋಂಕಿನ ಕಾರಣ ಐಸಿಯುಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುರುಷ ಸೋಂಕಿತನನ್ನು 34 ವರ್ಷದ ಡಾಕ್ಟರ್ ಲೈಂಕಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಈ ಕುರಿತು ಅಗ್ರಿಪಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ದಿನ 2530 ಜನರಿಗೆ ಸೋಂಕು: ದೇಶದಲ್ಲಿ 41000 ಗಡಿದಾಟಿದ ಸೋಂಕಿತರು!.

ಪೊಲೀಸರು ವೈದ್ಯನ ಮೇಲೆ ಐಪಿಸಿ ಸೆಕ್ಷನ್ 377, 269 ಹಾಗೂ 270ರ ಅಡಿಯಲ್ಲಿ ಪ್ರಕಣ ದಾಖಲಿಸಿದ್ದಾರೆ. ಇತ್ತ ಕೇಸ್ ದಾಖಲಾಗುತ್ತಿದ್ದಂತೆ ವೋಕ್‌ಹಾರ್ಡ್ ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯನನ್ನು ಅಮಾನತು ಮಾಡಿದೆ. ಕೊರೋನಾ ಸೋಂಕಿತರ ಸಂಪರ್ಕದಲ್ಲಿದ್ದ ಕಾರಣಕ್ಕೆ ವೈದ್ಯನನ್ನು ಥಾಣೆಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಕ್ವಾರಂಟೈನ್ ಮುಹಿದ ಬಳಿಕ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮೇ.4ರಂದು 678 ಹೊಸ ಕೊರೋನಾ ವೈರಸ್ ಪ್ರಕರಣಗಳು ದೃಢವಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12,974ಕ್ಕೆ ಏರಿಕೆಯಾಗಿದೆ. ಇದಲ್ಲಿ 2115 ಮಂದಿ ಗುಣಮುಖರಾಗಿದ್ದರೆ, 548 ಮಂದಿ ಸಾವನ್ನಪ್ಪಿದ್ದಾರೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!