ಹುಲಿಗಿರುವ ಬುದ್ಧಿ ಮನುಷ್ಯರಿಗಿಲ್ವೆ? ರಾಷ್ಟ್ರೀಯ ಪ್ರಾಣಿಯ ರಾಷ್ಟ್ರ ಮೆಚ್ಚುವ ಕಾರ್ಯ

By Anusha KbFirst Published Feb 14, 2024, 4:14 PM IST
Highlights

ವನ್ಯಜೀವಿ ಛಾಯಾಗ್ರಾಹಕರೊಬ್ಬರು ಸೆರೆ ಹಿಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೆರೆಯಾಗಿದೆ. ಚಾರಣಗಿರಣ ಅಂತ ಕಾಡು ಬೆಟ್ಟ ಗುಡ್ಡಗಳನ್ನು ಸುತ್ತುತ್ತಾ ಅಲ್ಲೆಲ್ಲಾ ಪ್ಲಾಸ್ಟಿಕ್ ಕವರ್‌ಗಳು ಬಾಟಲ್‌ಗಳನ್ನು ತೂರಾಡುತ್ತಾ ಪರಿಸರದ ವಿನಾಶಕ್ಕೆ ಕೊಡುಗೆ ನೀಡುತ್ತಿರುವ ಮನುಷ್ಯರಿಗೆ ವನ್ಯಜೀವಿಯಾಗಿರುವ ಹುಲಿಯೊಂದು ಬುದ್ದಿ ಹೇಳುವಂತೆ ಇದೆ ಈ ವೀಡಿಯೋ...

ಕಾಡುಗಳಲ್ಲಿ ನದಿ ತೊರೆ ಮುಂತಾದ ನದಿ ಮೂಲಗಳಲ್ಲಿ ಪ್ಲಾಸ್ಟಿಕ್ ತೊಟ್ಟೆಗಳು, ಬಾಟಲ್‌ಗಳು ಮುಂತಾದವನ್ನು ಬಿಸಾಡುವ ಮೂಲಕ ಮಾನವರು ತಮ್ಮಷ್ಟಕ್ಕೆ ತಾವೇ ಯಾರಿಗೂ ತೊಂದರೆ ನೀಡದೇ ಬದುಕುವ ಕಾಡುಪ್ರಾಣಿಗಳ ಜೀವಕ್ಕೆ ಎರವಾಗುತ್ತಿದ್ದಾರೆ. ವನ್ಯಜೀವಿ ಛಾಯಾಗ್ರಾಹಕರೊಬ್ಬರು ಸೆರೆ ಹಿಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೆರೆಯಾಗಿದೆ. ಚಾರಣಗಿರಣ ಅಂತ ಕಾಡು ಬೆಟ್ಟ ಗುಡ್ಡಗಳನ್ನು ಸುತ್ತುತ್ತಾ ಅಲ್ಲೆಲ್ಲಾ ಪ್ಲಾಸ್ಟಿಕ್ ಕವರ್‌ಗಳು ಬಾಟಲ್‌ಗಳನ್ನು ತೂರಾಡುತ್ತಾ ಪರಿಸರದ ವಿನಾಶಕ್ಕೆ ಕೊಡುಗೆ ನೀಡುತ್ತಿರುವ ಮನುಷ್ಯರಿಗೆ ವನ್ಯಜೀವಿಯಾಗಿರುವ ಹುಲಿಯೊಂದು ಬುದ್ದಿ ಹೇಳುವಂತೆ ಇದೆ ಈ ವೀಡಿಯೋ...

ವೀಡಿಯೋದಲ್ಲಿ ನೀರಿನ ಮೂಲವೊಂದರಲ್ಲಿ ಬಿದ್ದಿದ್ದ ನೀರಿನ ಬಾಟಲ್‌ ಒಂದನ್ನು ಹುಲಿಯೊಂದು ಬಾಗಿ ಕುಳಿತು ಬಾಯಿಯಲ್ಲಿ ಕಚ್ಚಿಕೊಂಡು ಬರುತ್ತಿರುವ ವೀಡಿಯೋ ಇದಾಗಿದ್ದು, ವೀಡಿಯೋ ಪೋಸ್ಟ್ ಆದ ಸ್ವಲ್ಪ ಹೊತ್ತಿನಲ್ಲೇ ಸಾವಿರಾರು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಹುಲಿಯ ಪರಿಸರ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವನ್ಯಜೀವಿ ಛಾಯಾಗ್ರಾಹಕ ಹಾಗೂ ಪರಿಸರ ಪ್ರೇಮಿ ದೀಪಕಥಿಕರ್ ಅವರು ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ. 

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು: ತಪ್ಪಿಸಿಕೊಂಡ ಬಳಿಕ ಮತ್ತೆ ತಾಯಿ ಮಡಿಲು ಸೇರಿ ಸುಖನಿದ್ದೆಗೆ ಜಾರಿದ ಮರಿಯಾನೆ

ಹುಲಿಯೊಂದರ ಸಿಹಿಯಾದ ನಡವಳಿಕೆ,  ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಇದು ಮಹಾರಾಷ್ಟ್ರದ ರಾಮ್ದೇಗಿ ಹಿಲ್‌ ವ್ಯಾಪ್ತಿಯಲ್ಲಿ ಬರುವ ಭನುಸ್ಕಿಂಡಿಯ ಹುಲಿ ಮರಿ ಎಂದು ಅವರು ಮಾಹಿತಿ ನೀಡಿದ್ದಾರೆ. ವೀಡಿಯೋ ನೋಡಿದ ಅನೇಕರು ಇದೊಂದು ತುಂಬಾ ಶಕ್ತಿಶಾಲಿಯಾದ ವೀಡಿಯೋ ಆಗಿದ್ದು, ಕಾಡು ಸೇರಿದಂತೆ ರಕ್ಷಿತಾರಣ್ಯಗಳಲ್ಲಿ ಪ್ಲಾಸ್ಟಿಕ್ ಅನ್ನು ನಿಷೇಧಗೊಳಿಸುವುದು ಎಷ್ಟು ಅಗತ್ಯ ಎಂಬುದನ್ನು ಹೇಳುತ್ತಿರುವ ವೀಡಿಯೋ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.  ಈ ವೀಡಿಯೋ ಚೆನ್ನಾಗಿದೆ, ಜೊತೆಗೆ ಬೇಸರವೂ ಆಗುತ್ತಿದೆ. ನಮ್ಮ ಪರಿಸರಕ್ಕೆ ನಾವು ವಿವೇಚನೆ ಇಲ್ಲದೇ ಮಾಡುವ ಹಾನಿ ಇಲ್ಲಿ ಎದ್ದು ಕಾಣುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹುಲಿಗಳಿರುವ ಸ್ಥಳಕ್ಕೆ ಈ ಪ್ಲಾಸ್ಟಿಕ್ ಹೇಗೆ ಹೋಯ್ತು? ನಾವು ಭೂಮಿಯನ್ನು ಹೇಗೆ ದುರಂತಮಯವಾಗಿ ಬಳಸುತ್ತಿದ್ದೇವೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಬಾಟಲ್ ಪ್ಲಾಸ್ಟಿಕ್ ಮುಂತಾದವುಗಳನ್ನು ಕಾಡುಗಳಲ್ಲಿ ಎಸೆಯುವವರಿಗೆ ದೊಡ್ಡ ಶಿಕ್ಷೆಯಾಗಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಮಗೆ ಅರಿತುಕೊಳ್ಳುವವರಿಗೆ ಈ ವೀಡಿಯೋಗಿಂತ ದೊಡ್ಡ ಸಂದೇಶ ಬೇಡ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮನುಷ್ಯರು ಪರಿಸರ ನಾಶ ಮಾಡ್ತಿದ್ರೆ, ಪ್ರಾಣಿಗಳು ಪರಿಸರವನ್ನು ರಕ್ಷಿಸುತ್ತಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮಾನವರ ಈ ಬೇಜವಾಬ್ದಾರಿತನ ಎಷ್ಟು ಅಪಾಯಕಾರಿ ಎಂಬುದನ್ನು ಈ ವೀಡಿಯೋ ತೋರಿಸುತ್ತಿದೆ. 

Viral Video: ಹುಲಿಯನ್ನ ವಾಕ್‌ ಮಾಡಿಸೋ ಬಾಲಕ, ಕೊನೆಗೆ ಆಗಿದ್ದೇನು? ಮೈ ಝಲ್‌ ಅನ್ನುತ್ತೆ!
 

 

click me!