ಡಿಎಂಕೆ ಕಾರ್ಯಕರ್ತರ ಎಡವಟ್ಟು: ಸ್ಟಾಲಿನ್‌ಗೆ ಪ್ರೈಡ್ ಬದಲು ಬ್ರೈಡ್ ಆಫ್ ತಮಿಳುನಾಡು ಎಂದು ವಿಶ್

By Anusha KbFirst Published Mar 5, 2024, 2:15 PM IST
Highlights

ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಎಂಬ ಗಾದೆಯಂತೆ ಈಗ ಸ್ಟಾಲಿನ್ ಅಭಿಮಾನಿಗಳು ಕೂಡ ತಮ್ಮ ಪೋಸ್ಟರ್‌ನಲ್ಲಿ ದೊಡ್ಡ ಎಡವಟ್ಟು ಮಾಡಿದ್ದು,  ಇದು ಈಗ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲೀಗೀಡಾಗುತ್ತಿದೆ. ಜೊತೆಗೆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

ಚೆನ್ನೈ: ತಮಿಳುನಾಡು ಸರ್ಕಾರ ಇಸ್ರೋದ ರಾಕೆಟ್ ಉಡಾವಣಾ ಕೇಂದ್ರದ ಶಂಕುಸ್ಥಾಪನೆ ವೇಳೆ ಚೀನಾ ಧ್ವಜ ಬಳಸಿ ಎಡವಟ್ಟು ಮಾಡಿಕೊಂಡು ವಿವಾದಕ್ಕೀಡಾಗಿದ್ದು, ಎಲ್ಲರಿಗೂ ಗೊತ್ತೆ  ಇದೆ. ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಎಂಬ ಗಾದೆಯಂತೆ ಈಗ ಸ್ಟಾಲಿನ್ ಅಭಿಮಾನಿಗಳು ಕೂಡ ತಮ್ಮ ಪೋಸ್ಟರ್‌ನಲ್ಲಿ ದೊಡ್ಡ ಎಡವಟ್ಟು ಮಾಡಿದ್ದು,  ಇದು ಈಗ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲೀಗೀಡಾಗುತ್ತಿದೆ. ಜೊತೆಗೆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

ಅಂಥದ್ದೇನಾಯ್ತು? 

ತಮಿಳುನಾಡು ಸಿಎಂ ಸ್ಟಾಲಿನ್ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಡಿಎಂಕೆ ಪಕ್ಷದ ಕಾರ್ಯಕರ್ತರು ಎಲ್ಲಾ ಕಡೆ ಅವರ ಪೋಸ್ಟರ್‌ಗಳನ್ನು ಹಾಕಿ ತಮ್ಮ ನಾಯಕನಿಗೆ ಶುಭ ಹಾರೈಸಿದರು. ಆದರೆ ಹೀಗೆ ಶುಭ ಹಾರೈಸುವ ವೇಳೆ ಕಾರ್ಯಕರ್ತರ ಅಜ್ಞಾನವೋ ಅಥವಾ ಪೋಸ್ಟರ್ ಮಾಡಿದವನ ಎಡವಟ್ಟೋ ತಿಳಿಯದು, ಸ್ಟಾಲಿನ್‌ ಅವರನ್ನು ಪ್ರೈಡ್ ಆಫ್ ತಮಿಳುನಾಡು ಎಂದು ಕರೆಯುವ ಬದಲು ಬ್ರೈಡ್‌(ವಧು) ಆಫ್ ತಮಿಳುನಾಡು ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಅಂದರೆ ತಮಿಳುನಾಡಿನ ಹೆಮ್ಮೆ ಎಂದು ಬರೆಯಲು ಹೋಗಿ ತಮಿಳುನಾಡಿನ ವಧು ಎಂದು ಬರೆಯಲಾಗಿದ್ದು, ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು,  ಡಿಎಂಕೆ ಪಕ್ಷ ಹಾಗೂ ಸಿಎಂ ಸ್ಟಾಲಿನ್ ಅವರಿಗೆ ಮುಜುಗರವುಂಟು ಮಾಡುತ್ತಿದೆ. 

ತಮಿಳುನಾಡು ಸರ್ಕಾರದ ಚೈನೀಸ್ ಪ್ರೀತಿಗೆ ಬಿಜೆಪಿ ತಿರುಗೇಟು: ಚೀನಿ ಭಾಷೆಯಲ್ಲಿ ಸಿಎಂಗೆ ಬರ್ತ್‌ಡೇ ವಿಶ್

ಇತ್ತೀಚೆಗೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ದೇಶದ 2ನೇ ರಾಕೆಟ್ ಉಡಾವಣಾ ಕೇಂದ್ರಕ್ಕೆ ಪ್ರಧಾನಿ ಶಂಕು ಸ್ಥಾಪನೆ ನೆರವೇರಿಸಿದರು.  ತಮಿಳುನಾಡಿನಲ್ಲಿ ಈ ಇಸ್ರೋ ಉಡಾವಣಾ ಕೇಂದ್ರದ ಸ್ಥಾಪನಾ ಕಾರ್ಯ ಆದುದ್ದರಿಂದ ತಮಿಳುನಾಡು ಸರ್ಕಾರ ಇಸ್ರೋ  ಉಪಗ್ರಹ ಉಡಾವಣೆ ಕೇಂದ್ರದ ಶಿಲನ್ಯಾಸದ ಕುರಿತು ಪತ್ರಿಕಾ ಜಾಹೀರಾತು ನೀಡಿತ್ತು.  ಆದರೆ ಈ ಜಾಹೀರಾತಿನಲ್ಲಿ ಇಸ್ರೋ ಉಪಗ್ರಹದ ಮೇಲೆ ಚೀನಾ ಧ್ವಜವನ್ನು ಪ್ರಕಟಿಸಲಾಗಿತ್ತು.  ಇದಕ್ಕೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತಮಿಳುನಾಡು ಬಿಜೆಪಿ ಘಟಕವೂ ಕೂಡ ಇದೇ ಹಿನ್ನೆಲೆಯನ್ನು ಇರಿಸಿಕೊಂಡು ಸ್ಟಾಲಿನ್ ಹುಟ್ಟುಹಬ್ಬದಂದು ಡಿಎಂಕೆ ಸರ್ಕಾರದ ಕಾಲೆಳೆದಿತ್ತು. 

ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಹುಟ್ಟುಹಬ್ಬದ ಈ ಹಿನ್ನೆಲೆಯಲ್ಲಿ ಡಿಎಂಕೆ ಹಿರಿಯ ನಾಯಕನಿಗೆ ಬಿಜೆಪಿ ಮಂದಾರಿಯನ್ ಅಂದರೆ ಚೀನಾ ಭಾಷೆಯಲ್ಲಿ ವಿಶ್ ಮಾಡುವ ಮೂಲಕ ಕಾಲೆಳೆದಿತ್ತು. ತಮಿಳುನಾಡು ಬಿಜೆಪಿ ಪರವಾಗಿ ತಮಿಳುನಾಡಿನ ಗೌರವನ್ವಿತ ಸಿಎಂ ತಿರು ಎಂ.ಕೆ. ಸ್ಟಾಲಿನ್ ಅವರಿಗೆ ಅವರ ಇಷ್ಟದ ಭಾಷೆಯಲ್ಲಿ  ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದು ವಿಶ್ ಮಾಡಿರುವ ತಮಿಳುನಾಡು ಬಿಜೆಪಿಯ ಟ್ವಿಟ್ಟರ್ ಪೇಜ್, ಕೆಳಗೆ ಸ್ಟಾಲಿನ್ ಫೋಟೋವನ್ನು ಹಾಕಿದ್ದರು. ಅದರಲ್ಲಿ ಚೀನಾದ ಮಂದಾರಿಯನ್ ಭಾಷೆಯಲ್ಲಿ ಸಿಎಂ ಸ್ಟಾಲಿನ್ ಅವರಿಗೆ ವಿಶ್ ಮಾಡಲಾಗಿದೆ. ವೈರಲ್ ಆದ ಸ್ವಲ್ಪ ಹೊತ್ತಿನಲ್ಲೇ ಈ ಪೋಸ್ಟನ್ನು 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದರ ಜೊತೆ ಕೆಳಭಾಗದಲ್ಲಿ ಯಾರು ತಮಿಳುನಾಡು ಸಿಎಂ ಅವರಿಗೆ ಮಂದರಿಯನ್‌ ಭಾಷೆಯಲ್ಲಿ ವಿಶ್ ಮಾಡಲು ಬಯಸುವಿರೋ ಅವರೆಲ್ಲಾ ಸಿಎಂ ಅವರಿಗೆ ಈ ಕೆಳಗೆ ಇರುವ ಮಂದರಿಯನ್ ಭಾಷೆಯ ಶುಭಾಶಯವನ್ನು ಬಳಸಿಕೊಳ್ಳಿ ಎಂದು ಪೋಸ್ಟ್ ಮಾಡಿತ್ತು.

ಇಸ್ರೋ ಉಪಗ್ರಹ ಮೇಲೆ ಚೀನಾ ಧ್ವಜ, ಡಿಎಂಕೆ ಜಾಹೀರಾತು ಬಂಡವಾಳ ಬಯಲು ಮಾಡಿದ ಅಣ್ಣಾಮಲೈ!

Stalin supporters post "Bride of Tamilnadu" instead of "Pride of Tamilnadu", video goes viral pic.twitter.com/OjX4jHQ1bc

— Megh Updates 🚨™ (@MeghUpdates)

 

click me!