ತಮಿಳುನಾಡಿನ ಧರ್ಮಪುರಿಯಲ್ಲಿ ರಸ್ತೆಕಾಮಗಾರಿಯ ಭೂಮಿ ಪೂಜೆಗೆ ಕೇವಲ ಹಿಂದೂ ಅರ್ಚಕರು ಮಾತ್ರ ಇದ್ದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಡಿಎಂಕೆ ಸಂಸದ ಎಸ್.ಸೆಂಥಿಲ್ ಕುಮಾರ್, ಚರ್ಚ್‌ನ ಪಾದ್ರಿ, ಇಮಾಮ್‌ಗಳು ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ, ಕೊನೆಗೆ ಭೂಮಿ ಪೂಜೆ ಮಾಡದೇ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಚೆನ್ನೈ (ಜುಲೈ 16): ರಸ್ತೆ ಕಾಮಗಾರಿ ಯೋಜನೆಯ ಭೂಮಿ ಪೂಜೆಗೆ ಹಿಂದು ಅರ್ಚಕರನ್ನು ಮಾತ್ರ ಕರೆಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಡಿಎಂಕೆಯ ಲೋಕಸಭಾ ಸಂಸದ ಎಸ್.ಸೆಂಥಿಲ್ ಕುಮಾರ್, ಇದು ಸರ್ಕಾರಿ ಕಾರ್ಯಕ್ರಮ ಇಂಥ ಕಾಮಗಾರಿಗಳ ಯೋಜನೆಯೆ ಚಾಲನೆಗೆ ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದು ಹೇಳಿದ್ದಾರೆ. ಧರ್ಮಪುರಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಸೆಂಥಿಲ್ ಕುಮಾರ್, ಶನಿವಾರ ತಮ್ಮ ತವರು ಜಿಲ್ಲೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಸ್ತೆ ಕಾಮಗಾರಿಗೆ ಅವರು ಭೂಮಿ ಪೂಜೆಗೆ ಹಿಂದು ಅರ್ಚಕರನ್ನು ಮಾತ್ರ ಕರೆಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದರು ಸರ್ಕಾರಿ ಕಾರ್ಯಕ್ರಮ. ಕೇವಲ ಒಂದು ನಿರ್ದಿಷ್ಟ ಧರ್ಮವನ್ನು ಆರಾಧನೆ ಮಾಡುವ ಕಾರ್ಯಕ್ರಮವನ್ನು ನಡೆಸಬಾರದು ಎನ್ನುವುದು ನಿಮಗೆ ತಿಳಿದಿಲ್ಲವೇ ಎಂದು ಅಲ್ಲೇ ಇದ್ದ ಇನ್ನೊಬ್ಬ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದಾರೆ. "ಸರ್, ಸರ್ಕಾರಿ ಕಾರ್ಯಕ್ರಮಗಳು ಹೀಗೆ ನಡೆಯಬಾರದು ಎಂಬ ಸೂಚನೆ ಇದೆಯೇ ಇಲ್ಲವೇ. ನಿಮಗೆ ಅರಿವಿದೆಯೋ ಇಲ್ಲವೋ" ಎಂದು ಪ್ರಶ್ನೆ ಮಾಡಿದ್ದಾರೆ. ಕೇಸರಿ ವಸ್ತ್ರ ತೊಟ್ಟಿದ್ದ ಹಿಂದೂ ಧರ್ಮಗುರುಗಳತ್ತ ಕೈ ತೋರಿಸಿ, ಸಂಸದರು ಅಧಿಕಾರಿಯನ್ನು ಪ್ರಶ್ನಿಸಿದರು: "ಇದೇನು? ಎಲ್ಲಿ ಬೇರೆ ಧರ್ಮಗಳು?, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮದವರು ಎಲ್ಲಿದ್ದಾರೆ? ಚರ್ಚ್ ಫಾದರ್, ಇಮಾಮ್ ಅವರನ್ನು ಆಹ್ವಾನಿಸಿ, ಯಾವುದೇ ಧರ್ಮವನ್ನು ಹೇಳದವರನ್ನು ಆಹ್ವಾನಿಸಿ. ನಾಸ್ತಿಕರಾಗಿರುವ ದ್ರಾವಿಡರ್ ಕಳಗಂ (ಪ್ರತಿನಿಧಿಗಳು) ಅವರನ್ನು ಆಹ್ವಾನಿಸಿ," ಅವರು ಹೇಳಿದರು. ಸಾಮಾಜಿಕ ನ್ಯಾಯದ ಐಕಾನ್ ಪೆರಿಯಾರ್ ಇ ವಿ ರಾಮಸಾಮಿ ಸ್ಥಾಪಿಸಿದ ವಿಚಾರವಾದಿ ಸಂಘಟನೆಯಾದ ದ್ರಾವಿಡರ್ ಕಳಗಂ ಆಡಳಿತಾರೂಢ ಡಿಎಂಕೆಯ ಮಾತೃಸಂಸ್ಥೆಯಾಗಿದೆ.
ಇದು ದ್ರಾವಿಡ ಮಾದರಿಯ ಆಡಳಿತ: ಸಂಸದರ (Dharmapuri Lok Sabha MP) ಪ್ರಶ್ನೆಗೆ, ಅಧಿಕಾರಿ ತಮ್ಮನ್ನು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ (Public Works Department Executive Engineer) ಎಂದು ಹೇಳಿಕೊಂಡಿದ್ದಲ್ಲದೆ, ಈ ಕುರಿತು ಸಂಸದರಿಗೆ ಕ್ಷಮೆಯಾಚಿಸಿದರು. "ಇದು ದ್ರಾವಿಡ ಮಾದರಿಯ ಆಡಳಿತವಾಗಿದೆ. ಸರ್ಕಾರವು ಎಲ್ಲಾ ಧರ್ಮಗಳಿಗೆ ಸೇರಿದ ಜನರಿಗಾಗಿ" ಎಂದು ಸಂಸದರು (S Senthilkumar) ಅಧಿಕಾರಿಗೆ ತಿಳಿಸಿದರು.
ஒரு அளவுக்கு மேல் என் பொறுமையை சோதிக்கிறார்கள்.
Trying to Keep my cool.
At times they make me to lose my patience. pic.twitter.com/l1gHdhYkQa
ಇದನ್ನೂ ಓದಿ: ಹಿಂದಿ ತಮಿಳರನ್ನು ಶೂದ್ರರನ್ನಾಗಿ ಮಾಡುತ್ತೆ: ಡಿಎಂಕೆ ನಾಯಕ ವಿವಾದ!
ಬರೀ ಹಿಂದೂಗಳನಲ್ಲ ಎಲ್ಲರನ್ನೂ ಆಹ್ವಾನಿಸಿ: ಪೂಜೆಯನ್ನು (Bhoomi Puja) ಮಾಡಲು ನನಗೆ ಯಾವುದೇ ವಿರೋಧವಿಲ್ಲ. ಆದರೆ, ಇಂಥ ಕಾರ್ಯಕ್ರಮಗಳು ನಡೆಯುವಾಗ ಎಲ್ಲಾ ಧರ್ಮದವರನ್ನು ಆಹ್ವಾನಿಸಬೇಕು. "ಎಲ್ಲರಲ್ಲೂ ಆಹ್ವಾನಿಸುವ ಮೂಲಕ ಈ ಕಾರ್ಯಕ್ರಮ ಮಾಡಿ' ಎಂದು ಹೇಳಿದರು. ಸೆಂಥಿಲ್‌ಕುಮಾರ್ ತಮ್ಮ ಮತ್ತು ಅಧಿಕಾರಿಯ ನಡುವಿನ ಸಂಭಾಷಣೆಯ ಕಿರು ವೀಡಿಯೊವನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. "ನಾನು ಕೂಲ್ ಆಗಿರಲು ಪ್ರಯತ್ನಿಸುತ್ತೇನೆ. ಆದರೆ, ಕೆಲವೊಮ್ಮೆ ಕೆಲವರು ನಾನು ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತಾರೆ' ಎಂದು ಸಂಸದರು ವಿಡಿಯೋ ಜೊತೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ತಮಿಳುನಾಡಿಗೆ ಸ್ವಾಯತ್ತೆ ಕೇಳಿದ ಡಿಎಂಕೆ ರಾಜಾ!
ಭೂಮಿಪೂಜೆ ಇಲ್ಲದೆ ಚಾಲನೆ: ಧರ್ಮಪುರಿ ಜಿಲ್ಲೆಯ ರಸ್ತೆ ಯೋಜನೆಗಾಗಿ ಕೇವಲ ಹಿಂದೂ ಅರ್ಚಕರಿಂದಲೇ ಭೂಮಿಪೂಜೆ ನಡೆಸಲು ಸಿದ್ಧತೆ ನಡೆಸಿದ್ದನ್ನು ಉಲ್ಲೇಖಿಸಿದ ಸಂಸದರು, ಎಲ್ಲವನ್ನೂ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಿಟ್ಟಿನಿಂದಲೇ ಮಾತನಾಡಿದ ಸಂಸದ, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (chief Minister M K Stalin) ಭಾಗವಹಿಸುವ ಸರ್ಕಾರಿ ಕಾರ್ಯಕ್ರಮಗಳಲ್ಲಿ (government events) ಇಂತಹ ಪ್ರಾರ್ಥನೆಗಳನ್ನು ಎಂದೂ ಮಾಡುವುದಿಲ್ಲ ಎಂದು ಹೇಳಿದರು. ನಿರ್ದಿಷ್ಟ ಧರ್ಮದ ಪ್ರಾರ್ಥನೆಗಳನ್ನು ಒಳಗೊಂಡ ಇಂತಹ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಬೇಡಿ ಎಂದು ಸೆಂಥಿಲ್‌ಕುಮಾರ್ ( DMK ) ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳೊಂದಿಗೆ ಸಂವಾದದ ನಂತರ, ಸಂಸದರು ಯೋಜನೆಯನ್ನು ಉದ್ಘಾಟಿಸಿದರು ಮತ್ತು ಮೂಲತಃ ನಿಗದಿಪಡಿಸಿದಂತೆ ಯಾವುದೇ ಭೂಮಿಪೂಜೆಯ ಕಾರ್ಯಕ್ರಮಗಳು ನಡೆಯಲಿಲ್ಲ.