ಬಕ್ರೀದ್‌ಗೆ ಕುರಿ ಬಲಿ ನಿಲ್ಲಿಸಿದರೆ, ದೀಪಾವಳಿಗೆ ಪಟಾಕಿ ಸಂಪೂರ್ಣ ನಿಷೇಧ: ಬಿಜೆಪಿ ನಾಯಕ!

Published : Nov 08, 2020, 06:29 PM IST
ಬಕ್ರೀದ್‌ಗೆ ಕುರಿ ಬಲಿ ನಿಲ್ಲಿಸಿದರೆ, ದೀಪಾವಳಿಗೆ ಪಟಾಕಿ ಸಂಪೂರ್ಣ ನಿಷೇಧ: ಬಿಜೆಪಿ ನಾಯಕ!

ಸಾರಾಂಶ

ದೀಪಾವಳಿ ಹಬ್ಬಕ್ಕೆ ತಯಾರಿ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹಲವು ರಾಜ್ಯಗಳು ಈ ಬಾರಿ ದೀಪಾವಳಿ ಹಬ್ಬಕ್ಕೆ ಪಟಾಕಿ ಸಂಪೂರ್ಣ ನಿಷೇಧಿಸಿದೆ. ಇದು ಪರ ವಿರೋಧಕ್ಕೆ ಎಡೆಯಾಗಿದೆ. ಇದರ ನಡುವೆ ಬಕ್ರೀದ್ ಹಬ್ಬಕ್ಕೆ ಕುರಿ ಬಲಿ ನಿಲ್ಲಿಸಿದರೆ, ದೀಪಾವಳಿಗೆ ಪಟಾಕಿ ನಿಲ್ಲಿಸುತ್ತೇವೆ ಎಂದು ಬಿಜೆಪಿ ನಾಯಕನ ಹೇಳಿಕೆ ಇದೀಗ ಮತ್ತೆ ವಿವಾದದ ಕಿಡಿ ಹೊತ್ತಿಸಿದಿದೆ

ಉತ್ತರ ಪ್ರದೇಶ(ನ.08): ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು  ಈ ಬಾರಿಯ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿದೆ. ಕೊರೋನಾ ವೈರಸ್ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದರೆ, ಮತ್ತೆ ಹಲವರು ವಿರೋಧಿಸಿದ್ದಾರೆ.  ಇದರ ನಡುವೆ ಉತ್ತರ ಪ್ರದೇಶದ ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹರಾಜ್ ಖಾರವಾದ ಹೇಳಿಕೆ ನೀಡಿದ್ದಾರೆ.

ಸಿಎಂ ಮಹತ್ವದ ಘೋಷಣೆ: ಈ ಬಾರಿ ದೀಪಾವಳಿ ಪಟಾಕಿ ಠುಸ್..!

ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸಲು ನಾವು ಸಿದ್ದರಿದ್ದೇವೆ, ಆದರೆ ಬಕ್ರೀದ್ ಹಬ್ಬಕ್ಕೆ ಕುರಿ ಬಲಿ ನಿಲ್ಲಿಸಿದರೆ ಮಾತ್ರ ಸಾಧ್ಯ ಎಂದು ಸಾಕ್ಷಿ ಮಹರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಕೊರೋನಾ ವೈರಸ್ ತಗುಲಿರುವ ಕಾರಣ ಐಸೋಲೇಶನ್‌ನಲ್ಲಿರುವ ಸಾಕ್ಷಿ ಮಹರಾಜ್ ಬರಹಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.

ಪಟಾಕಿ ನಿಷೇಧ ಬೇಡ: ವಿವಿಧ ರಾಜ್ಯಗಳಿಗೆ ಸಿಎಂ ಮನವಿ!

ಯಾವ ವರ್ಷ ಬಕ್ರೀದ್ ಹಬ್ಬವನ್ನು ಕುರಿ ಬಲಿ ಇಲ್ಲದೆ ಆಚರಿಸುತ್ತಾರೋ ಅದೇ ವರ್ಷ ದೀಪಾವಳಿ ಹಬ್ಬವನ್ನು ಪಟಾಕಿ ಇಲ್ಲದೆ ಆಚರಿಸುತ್ತೇವೆ ಎಂದಿದ್ದಾರೆ. ಸಾಕ್ಷಿ ಮಹರಾಜ್ ಹೇಳಿಕೆಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸಂಬಂಧವಿಲ್ಲದ  ಹೇಳಿಕೆ. ಇದಕ್ಕೆ ಮಹತ್ವ ನೀಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.

ಬಿಜೆಪಿ ನಾಯಕ ಸಾಕ್ಷಿ ಮಹರಾಜ್ ದೀಪಾವಳಿ ಹಬ್ಬದ ಪೋಸ್ಟ್‌ಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ವೈರಸ್ ತಗುಲಿರುವ ಪೋಸ್ಟ್ ಹಾಕಿದ್ದರು. ಬಳಿಕ ವಿಶ್ರಾಂತಿಯಲ್ಲಿದ್ದ ಸಾಕ್ಷಿ ಮಹಾರಾಜ್ ಇದೀಗ ಖಾರವಾದ ಪೋಸ್ಟ್ ಹಾಕಿ ಸಂಚಲನ ಮೂಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್