ದಿಗ್ವಿಜಯ್ ಸಿಂಗ್ ಪಾಕ್‌ಗೆ ಬೇಹುಗಾರಿಗೆ ನಡೆಸುವ ಸ್ಲೀಪರ್ ಸೆಲ್; ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ!

Published : Sep 03, 2021, 09:19 PM IST
ದಿಗ್ವಿಜಯ್ ಸಿಂಗ್ ಪಾಕ್‌ಗೆ ಬೇಹುಗಾರಿಗೆ ನಡೆಸುವ ಸ್ಲೀಪರ್ ಸೆಲ್; ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ!

ಸಾರಾಂಶ

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ನಾಯಕ ಆಕ್ರೋಶ ದಿಗ್ವಿಜಯ್ ಪಾಕಿಸ್ತಾನದ ಸ್ಲೀಪರ್ ಸೆಲ್ ಎಂದು ಮಧ್ಯಪ್ರದೇಶ ಶಾಸಕ ವಿವಾದ ಸೃಷ್ಟಿಸಿದ ಬಿಜೆಪಿ ನಾಯಕನ ಹೇಳಿಕೆ, ಕಾಂಗ್ರೆಸ್ ತಿರುಗೇಟು

ಇಂದೋರ್(ಸೆ.03):  ರಾಜಕೀಯ ನಾಯಕರು ಹಾಗೂ ವಿವಾದಾತ್ಮ ಹೇಳಿಕೆ ಜೊತೆ ಜೊತೆಯಾಗಿ ಸಾಗುವ ಸಹೋದರಿದ್ದಂತೆ. ಹೇಳಿಕೆ ನೀಡಿ ಬಳಿಕ ಕ್ಷಮೆ, ಹೇಳಿಕೆ ವಾಪಸ್ ಪಡೆಯುವುದು ಸರ್ವೇ ಸಾಮಾನ್ಯ. ಪ್ರತಿ ದಿನ ದೇಶದಲ್ಲಿ ಯಾರಾದರೊಬ್ಬ ರಾಜಕಾರಣ ವಿವಾದಾತ್ಮಕ ಹೇಳಿಕೆ ನೀಡದ ದಿನವಿಲ್ಲ ಎಂದರ ತಪ್ಪಾಗಲ್ಲ. ಇಂದು ಮಧ್ಯಪ್ರದೇಶ ಸಚಿವ ವಿಶ್ವಾಸ್ ಸಾರಂಗ್ ಸರದಿ. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸುವ ಸ್ಲೀಪರ್ ಸೆಲ್ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ಮರು ಜಾರಿ: ಸಿಂಗ್ ಹೇಳಿಕೆಗೆ ಬಿಜೆಪಿ ಕಿಡಿ!

ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರ ಆಂದೋಲನ ಪ್ರತಿಭಟನೆ ನಡೆಸು ಕಾಂಗ್ರೆಸ್ ನಿರ್ಧರಿಸಿದೆ. ಇದಕ್ಕೆ ದಿಗ್ವಿಜಯ್ ಸಿಂಗ್‌ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ. ಮೋದಿ ವಿರುದ್ಧ ನಿರಂತರ ಹೋರಾಟದ ಕಾಂಗ್ರೆಸ್ ನಿರ್ಧಾರ ಮಧ್ಯಪ್ರೇದಶ ಸಚಿವ ವಿಶ್ವಾಸ ಸಾರಂಗ್ ಕೆರಳಿಸಿದೆ. 

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ, ಆಂದೋಲನ ಮಾಡುವ ಸಾರಥ್ಯವನ್ನು ದಿಗ್ವಿಜಯ್ ಸಿಂಗ್‌ಗೆ ನೀಡುವುದು ಮತ್ತೊಮ್ಮೆ ಆಲೋಚಿಸಬೇಕಿದೆ. ಇದು ಗಂಭೀರ ವಿಷಯವಾಗಿದೆ. ಕಾರಣ ದಿಗ್ವಿಜಯ್ ಸಿಂಗ್ ಪಾಕಿಸ್ತಾನದ ಸ್ಲೀಪರ್ ಸೆಲ್ ಎಂದಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಇಷ್ಟೇ ಅಲ್ಲ ವಿಶ್ವಾಸ್ ಸಾರಂಗ್ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. 

ಅಂದು ವಿವಾದ, ಇಂದು ರಾಮ ಮಂದಿರಕ್ಕೆ 1 ಲಕ್ಷ ದೇಣಿಗೆ ನೀಡಿದ ದಿಗ್ವಿಜಯ್ ಸಿಂಗ್!

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ, ರಾಷ್ಟ್ರೀಯ ನಗದೀಕರಣ, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಕೇಂದ್ರದ ಯೋಜನೆ ಸೇರಿದಂತೆ ಮೋದಿ ಸರ್ಕಾರವನ್ನು ಹೆಜ್ಜೆ ಹೆಜ್ಜೆಗೂ ಪ್ರತಿಭಟಿಸಲು ಕಾಂಗ್ರೆಸ್ ಸಮಿತಿ ರಚಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ