ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ಮರು ಜಾರಿ: ಸಿಂಗ್ ಹೇಳಿಕೆಗೆ ಬಿಜೆಪಿ ಕಿಡಿ!

By Suvarna NewsFirst Published Jun 12, 2021, 12:48 PM IST
Highlights

* ಎರಡು ವರ್ಷದ ಹಿಂದೆ ರದ್ದಾಗಿದ್ದ ಆರ್ಟಿಕಲ್ 370

* ಆರ್ಟಿಕಲ್ 370 ವಿಚಾರವಾಗಿ ವಿವಾದಾತ್ಮಕ ಹೇಳಿಕೆ ಕೊಟ್ಟ ದಿಗ್ವಿಜಯ್ ಸಿಂಗ್

* ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ರದ್ದು ಹಿಂಪಡೆಯುವ ಮಾತು

* ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

ಭೋಪಾಲ್(ಜೂ.12): ಸಾಮಾನ್ಯವಾಗಿ ತಮ್ಮ ಹೇಳಿಕೆಗಳಿಂದ ಸದ್ದು ಮಾಡುವ ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಹೆಳಿಕೆ ಮತ್ತೊಮ್ಮೆ ವಿವಾದ ಸೃಷ್ಟಿಸಿದೆ. Clubhouse chatನಲ್ಲಿ ಅವರು ಆರ್ಟಿಕಲ್ 370ರ ವಿಚಾರವಾಗಿ ಪಾಕಿಸ್ತಾನಿ ಪತ್ರಕರ್ತ ಕೇಳಿಗೆ ಪ್ರಶ್ನೆಗೆ ಉತ್ತರಿಸಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 37ನ್ನು ಮತ್ತೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಆರ್ಟಿಕಲ್ 370 ರದ್ದು: ಮೊದಲು ಏನಿತ್ತು? ಈಗ ಏನಾಗಿದೆ? ತಿಳಿದುಕೊಳ್ಳಲೇಬೇಕು

ಆಡಿಯೋ ವೈರಲ್

ಕ್ಲಬ್‌ ಹೌಸ್‌ನಲ್ಲಿ ನಡೆಸುತ್ತಿದ್ದ ಸಂಭಾಷಣೆಯಲ್ಲಿ ದಿಗ್ವಿಜಯ್ ಸಿಂಗ್ ಇಂತಹುದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಂವಾದ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಈರ್ವ ಪತ್ರಕರ್ತನೂ ಭಾಗಿಯಾಗಿದ್ದ ಎನ್ನಲಾಗಿದೆ. ವೈರಲ್ ಆಗುತ್ತಿರುವ ಆಡಿಯೋದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್ಟಿಕಲ್ 370ನ್ನು ರದ್ದುಗೊಳಿಸಿದ್ದು ನಿಜಕ್ಕೂ ದುಃಖಕರ ವಿಚಾರ. ದಿಗ್ವಿಜಯ್ ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಪಾಕ್ ಭಾಷೆ ಮಾತನಾಡುತ್ತಿದ್ದಾರೆ ದಿಗ್ವಿಜಯ್

ಬಿಜೆಪಿ ನಾಯಕ ಅಮಿತ್ ಮಾಳವೀಯರವರು ಕಾಂಗ್ರೆಸ್‌ ನಾಯಕ ಆರ್ಟಿಕಲ್ 370ತ್ತು ಮರು ಜಾರಿಗೊಳಿಸುವ ಬಗ್ಗೆ ಕ್ಲಬ್‌ ಹೌಸ್ ಚಾಟ್‌ನಲ್ಲಿ ನೀಡಿರುವ ಹೇಳಿಕೆಯ ಒಂದು ತುಣುಕನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ದಿಗ್ವಿಜಯ್ ಏನು ಬಯಸುತ್ತಾರೋ, ಪಾಕಿಸ್ತಾನ ಅದನ್ನೇ ಬಯಸುತ್ತಿದೆ. ದೇಶದ ಹಿರಿಯ ನಾಯಕರಾಗಿ ಅವರು ಪಾಕಿಸ್ತಾನಿ ಭಾಷೆ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

In a Club House chat, Rahul Gandhi’s top aide Digvijaya Singh tells a Pakistani journalist that if Congress comes to power they will reconsider the decision of abrogating Article 370…

Really? यही तो पाकिस्तान चाहता है… pic.twitter.com/x08yDH8JqF

— Amit Malviya (@amitmalviya)

ಪಾಕ್‌ ಸಹಾಯ ಮಾಡುತ್ತಿದ್ದಾರೆ:

ಅತ್ತ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ದಿಗ್ವಿಜಯ್ ಸಿಂಗ್ ನೀಡಿರುವ ಈ ಹೇಳಿಕೆಯಿಂದ ಅವರ ಹಾಗೂ ಅವರ ಪಕ್ಷ ಕಾಂಗ್ರೆಸ್‌ನ ಮೊದಲ ಪ್ರೀತಿ ಪಾಕಿಸ್ತಾನ ಎಂದು ಸಾಬೀತಾಗುತ್ತದೆ. ಯಾವ ರೀತಿ ಅವರು ರಾಹುಲ್ ಗಾಂಧಿಯ ಸಂದೇಶ ಪಾಕಿಸ್ತಾನಕ್ಕೆ ತಲುಪಿಸಿದ್ದಾರೆ ಎಂಬುವುದು ಆಡಿಯೋದಲ್ಲಿ ಸ್ಪಷ್ಟವಾಗುತ್ತದೆ. ಕಾಶ್ಮೀರದ ವಿಚಾರವಾಗಿ ಕಾಂಗ್ರೆಸ್‌ ಪಾಕಿಸ್ತಾನಕ್ಕೆ ಸಹಾಯ ಮಾಡಲಿಚ್ಛಿಸುತ್ತಿದೆ ಎಂದಿದ್ದಾರೆ.

ಆರ್ಟಿಕಲ್ 370 ರದ್ದು: ‘ಎಂಎಸ್‌ಡಿ’ ಸೀಕ್ರೆಟ್‌ ಆಪರೇಷನ್‌ ಸಕ್ಸಸ್!

ಪಾಕ್ ಪತ್ರಕರ್ತನಿಗೆ ಸಿಂಗ್ ಉತ್ತರ

ದಿಗ್ವಿಜಯ್ ಸಿಂಗ್ ದೇಶ-ವಿದೇಶದ ಅನೇಕ ಪತ್ರಕರ್ತರೊಂದಿಗೆ Clubhouse chat ನಡೆಸುತ್ತಿದ್ದರು. ಈ ವೇಳೆ ಪಾಕಿಸ್ತಾನದ ಪತ್ರಕರ್ತ ಜಿಲ್ಲಾನಿ ಎಂಬವರು ದಿಗ್ವಿಜಯ್ ಸಿಂಗ್ ಬಳಿ ಮೋದಿ ಸರ್ಕಾರ ಪತನಗೊಂಡು, ಹೊಸ ಪಿಎಂ ಬಂದರೆ ಅವರು ಕಾಶ್ಮೀರಕ್ಕೇನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಹೀಗಿರುವಾಗ ದಿಗ್ವಿಜಯ್ ಸಿಂಗ್ ಆರ್ಟಿಕಲ್ 370 ವಿಚಾರವನ್ನೆತ್ತಿದ್ದಾರೆ. ಈ ಮಾತುಕತೆ ವೆಳೆ ಅವರು ಮೋದಿ ಸರ್ಕಾರ ಆರ್ಟಿಕಲ್ 370 ರದ್ದುಗೊಳಿಸಿದೆ, ಆದರೆ ಇಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪಾಲಿಸಿಲ್ಲ. ಅಲ್ಲದೇ ಮಾನವೀಯತೆಯನ್ನೂ ಗಮನದಲ್ಲಿಡಲಿಲ್ಲ. ಅಲ್ಲಿನ ಅನೇಕ ಜನರನ್ನು ಕತ್ತಲ ಕೋಣೆಯಲ್ಲಿ ಬಂಧಿಸಿಡಲಾಗಿತ್ತು. ಆದರೆ ನಾವು ಅಧಿಕಾರಕ್ಕೆ ಬಂದರೆ ಈ ವಿಚಾರದಲ್ಲಿ ಬದಲಾವಣೆ ತರುತ್ತೇವೆ. 

ಆರ್ಟಿಕಲ್‌ 370 ರದ್ದು

ಸ್ವಾತಂತ್ರ್ಯಾನಂತರ ಸಂವಿಧಾನದ ಕಲಂ-370 ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ(2019 ಆಗಸ್ಟ್ 5) ರದ್ದು ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿತು. ಈ ಹಿಂದೆ ರಕ್ಷಣೆ, ಸಂಪರ್ಕ ಮತ್ತು ವಿದೇಶಾಂಗ ವ್ಯವಹಾರ ಹೊರತುಪಡಿಸಿ ಬೇರಾವುದೇ ವಿಷಯಗಳ ಮೇಲೆ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಅಲ್ಲಿನ ರಾಜ್ಯ ಸರ್ಕಾರಕ್ಕೆ ನೀಡಲಾಗಿತ್ತು.

ಆಪರೇಷನ್‌ ಕಾಶ್ಮೀರದ ಸುಳಿವು ನೀಡಿದ 9 ಹೆಜ್ಜೆಗಳು!

ಇದರನ್ವಯ ಜಮ್ಮು-ಕಾಶ್ಮೀರದ ಜನರು ಪ್ರತ್ಯೇಕ ಕಾನೂನಿನಡಿ ಬರುತ್ತಿದ್ದರು. ಭಾರತ ಸರ್ಕಾರ ರೂಪಿಸುವ ಬಹುತೇಕ ಕಾನೂನುಗಳು ಅಲ್ಲಿಗೆ ಅನ್ವಯವಾಗುತ್ತಿರಲಿಲ್ಲ. ಸದ್ಯ ಈ ವಿಶೇಷಾಧಿಕಾರ ರದ್ದಾಗಿ ಇಡೀ ದೇಶಕ್ಕೆ ಒಂದೇ ಕಾನೂನು ಅನ್ವಯವಾಗುತ್ತಿದೆ.

ಇನ್ನು ಆಸ್ತಿ ಮತ್ತು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಕಾನೂನುಗಳಿದ್ದವು. ಆರ್ಟಿಕಲ್‌ 370 ರದ್ದಾದ ಬಳಿಕ ಕಾಶ್ಮೀರದಲ್ಲಿ ಅನ್ಯ ರಾಜ್ಯದವರು ಆಸ್ತಿ ಖರೀದಿಸುವ ಹಕ್ಕನ್ನು ನಿರಾಕರಿಸುತ್ತಿದ್ದ ಕಲಂ-35ಎ ಕೂಡ ರದ್ದಾಗಿದೆ. ಇದು ಚುನಾವಣೆಗೂ ಮುನ್ನ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶವೂ ಇದಾಗಿತ್ತು.

click me!