ಕೊರೋನಾ ನಡುವೆ ಮೊಹರಂ ಭರ್ಜರಿ ಮೆರವಣಿಗೆ, ಆದೇಶ ಅನ್ವಯಿಸಲ್ಲ!

Published : Aug 31, 2020, 05:34 PM IST
ಕೊರೋನಾ ನಡುವೆ ಮೊಹರಂ ಭರ್ಜರಿ ಮೆರವಣಿಗೆ, ಆದೇಶ ಅನ್ವಯಿಸಲ್ಲ!

ಸಾರಾಂಶ

ನ್ಯಾಯಾಲಯದ ಆದೇಶಕ್ಕೆ  ಕವಡೆ ಕಾಸಿನ ಕಿಮ್ಮತ್ತು ಇಲ್ಲ/ ಕೊರೋನಾ ಎಚ್ಚರಿಕೆ ಇಲ್ಲಿ ಕೇಳಲೇಬೇಡಿ/ ಹೈದರಾಬಾದಿನಲ್ಲಿ ಮೊಹರಂ ಮೆರವಣಿಗೆ/  ಎಲ್ಲೆಲ್ಲೂ ಜನಜಂಗುಳಿ

ಹೈದರಾಬಾದ್(ಆ. 31) ಕೊರೋನಾ ಕಾರಣಕ್ಕೆ  ಹಬ್ಬ ಆಚರಣೆ ಹೆಸರಿನಲ್ಲಿ ಮೆರವಣಿಗೆ ಮಾಡಬಾರದು, ಜನ ಒಂದೇ ಕಡೆ ಸೇರಬಾರದು ಎಂದು ತೆಲಂಗಾಣ ಹೈ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದಕ್ಕೆ ಜನ ಮಾತ್ರ ಕಿಮ್ಮತ್ತು ನೀಡಿದಂತೆ ಕಂಡಿಲ್ಲ. 

'ಬಿಬಿ ಕಾ ಆಲಂ' ಮೆರವಣಿಗೆ ಹೈದರಾಬಾದ್ ನಲ್ಲಿ ನಡೆದಿದ್ದು ಜನಜಂಗುಳಿ ಎಲ್ಲೆಲ್ಲೂ ಇತ್ತು.  ನಾಲ್ಕು ನೂರು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ ಆನೆ ಬದಲು ಟ್ರಕ್  ಒಂದನ್ನು ಮೆರವಣಿಗೆಯಲ್ಲಿ ಬಳಸಲಾಗಿತ್ತು. 

ಮೊಹರಂ ಹಬ್ಬದ ಮಹತ್ವವೇನು?

ದಬೇರ್‌ಪುರಾ ದಿಂದ ಛದೇರ್ ಘಾಟ್ ತನಕ ಮೆರವಣಿಗೆ ಸಾಗಿದ್ದು ಸಾಮಾಜಿಕ ಅಂತರದ ಮಾತು ಇಲ್ಲಿ ಕೇಳಲೇಬಾರದು ಎಂಬ ಸ್ಥಿತಿ ಇತ್ತು.   ಹಬ್ಬದ ಹೆಸರಿನಲ್ಲಿ ಮೆಡರವಣಿಗೆ ಅವಕಾಶ ಇಲ್ಲ ಎಂದು ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿದ್ದರೂ ಆದೇಶ ಮಾತ್ರ ಪಾಲನೆಯಾಗಿಲ್ಲ. ಪೊಲೀಸರು  ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!