ರೈಲು ನಿಲ್ದಾಣದಲ್ಲಿ 43 ಕೋಟಿ ರೂ. ಮೌಲ್ಯದ 504 ಚಿನ್ನದ ಬಿಸ್ಕತ್‌ ವಶ!

By Suvarna News  |  First Published Aug 31, 2020, 4:56 PM IST

ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬೃಹತ್‌ ಚಿನ್ನ ಕಳ್ಳ ಸಾಗಣೆ ಜಾಲ ಪತ್ತೆ| ದಿಲ್ಲಿ ರೈಲು ನಿಲ್ದಾಣದಲ್ಲಿ 43 ಕೋಟಿ ಮೌಲ್ಯದ 504 ಚಿನ್ನದ ಬಿಸ್ಕತ್‌ ವಶ


ನವದೆಹಲಿ(ಆ.31): ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬೃಹತ್‌ ಚಿನ್ನ ಕಳ್ಳ ಸಾಗಣೆ ಜಾಲವೊಂದನ್ನು ದೆಹಲಿ ರೈಲು ನಿಲ್ದಾಣದಲ್ಲಿ ಭೇದಿಸಿದ್ದಾರೆ.

ಅಸ್ಸಾಂನ ದಿಬ್ರುಗಢದಿಂದ ನವದೆಹಲಿಗೆ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದಿಳಿದ 8 ಮಂದಿಯ ಬಳಿ 504 ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 83.6 ಕೆ.ಜಿ. ತೂಕದ ಈ ಬಿಸ್ಕತ್‌ಗಳ ಮೌಲ್ಯ 43 ಕೋಟಿ ರು. ಮ್ಯಾನ್ಮಾರ್‌ನಿಂದ ಭಾರತಕ್ಕೆ ಈ ಚಿನ್ನವನ್ನು ಸಾಗಣೆ ಮಾಡಲಾಗಿತ್ತು. ಇದಕ್ಕಾಗಿ ವಿಶೇಷ ವಿನ್ಯಾಸದ ಧಿರಿಸನ್ನು 8 ಮಂದಿ ಧರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಆಯುರ್ವೇದ ಔಷಧ ನೆಪದಲ್ಲಿ ಸಾಗಿಸುತ್ತಿದ್ದ 1000 ಕೋಟಿ ರೂ. ಮೌಲ್ಯದ ಹೆರಾಯಿನ್‌ ವಶ!

ಚಿನ್ನ ಕಳ್ಳ ಸಾಗಣೆಗಾಗಿ ಅಮಾಯಕರನ್ನು ಗುರುತಿಸಿ ಅವರನ್ನು ಸಾಗಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇಂ

ಇನ್ನು ಕಳೆದ ತಿಂಗಳಷ್ಟೇ ರಾಜತಾಂತ್ರಿಕ ರಕ್ಷಣೆ ಹೊಂದಿರುವ ‘ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌’ನಲ್ಲಿ ಸಾಗಿಸಲಾಗುತ್ತಿದ್ದ 15 ಕೋಟಿ ರು. ಮೌಲ್ಯದ 30 ಕೇಜಿ ಚಿನ್ನವನ್ನು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ಈ ಪ್ರಕರಣ ಭಾರೀ ಸಂಚಲನ ಹುಟ್ಟು ಹಾಕಿದ್ದು, ಕೇರಳ ಮಾಹಿತಿ ತಂತ್ರಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಸ್ವಪ್ನಾ ಸುರೇಶ್‌ ವಿರುದ್ಧ ದೂರು ದಾಖಲಾಗಿತ್ತು.

 

click me!