ನವಾಬ್ ಮಲಿಕ್‌ಗೆ ಭೂಗತ ಪಾತಕಿ ನಂಟು, ದೀಪಾವಳಿ ಬಳಿಕ ದಾಖಲೆ ಬಹಿರಂಗ ಎಂದ ಫಡ್ನವಿಸ್!

Published : Nov 01, 2021, 05:36 PM IST
ನವಾಬ್ ಮಲಿಕ್‌ಗೆ ಭೂಗತ ಪಾತಕಿ ನಂಟು, ದೀಪಾವಳಿ ಬಳಿಕ ದಾಖಲೆ ಬಹಿರಂಗ ಎಂದ ಫಡ್ನವಿಸ್!

ಸಾರಾಂಶ

ಡ್ರಗ್ಸ್ ಪ್ರಕರಣ ಹಾಗೂ ತನಿಖೆಯಲ್ಲಿ ಇದೀಗ ಮತ್ತೊಂದು ಬಾಂಬ್ NCB ಅಧಿಕಾರಿ ಮೇಲೆ ಡೀಲ್ ಆರೋಪ ಹೊರಿಸಿದ ನವಾಬ್ ವಿರುದ್ದ ಆರೋಪ ನವಾಬ್ ಮಲಿಕ್‌ ಭೂಗತ ಪಾತಕಿಗಳ ಜೊತೆ ನಂಟು ಹೊಂದಿದ್ದಾರೆ ದೀಪಾವಳಿ ಬಳಿಕ ಮಿಲಿಕ್ ಪುರಾಣ ದಾಖಲೆ ಸಹಿತ ಸ್ಫೋಟ ಎಂದ ಫಡ್ನವಿಸ್  

ಮುಂಬೈ(ನ.01): ಬಾಲಿವುಡ್ ಡ್ರಗ್ಸ್ ಪ್ರಕರಣದ(Bollywood Drug case) ತನಿಖೆ ನಡೆಯುತ್ತಿದೆ. ಆದರೆ ಆರೋಪ, ಪ್ರತ್ಯಾರೋಪ, ರಾಜಕೀಯ ಕೆಸರೆರೆಚಾಟವೂ ಮುಂದುವರಿದಿದೆ. ಇದರ ನಡುವೆ NCB ಅಧಿಕಾರಿ ಸಮೀರ್ ವಾಂಖೆಡೆ(Sameer Wankhede) ವಿರುದ್ಧ ಸತತ ಆರೋಪ ಮಾಡಿದ್ದ NCP ನಾಯಕ ನವಾಬ್ ಮಲಿಕ್(Nawab Malik), ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್(Devendra Fadnavis) ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿರುವ ಫಡ್ನವಿಸ್ ಇದೀಗ ನವಾಬ್ ಮಿಲಿಕ್‌ಗೆ ಭೂಗತ ಪಾತಕಿಗಳ ಜೊತೆ ನಂಟಿದೆ. ದೀವಾಪಳಿ ಬಳಿಕ ನವಾಬ್ ಮಲಿಕ್ ಪಾತಕಿಗಳ ಜೊತೆಗಿನ ನಂಟಿನ ವಿವರನ್ನು ದಾಖಲೆ ಸಮೇತ ಬಹಿರಂಗ ಪಡಿಸುವುದಾಗಿ ಎಚ್ಚರಿಸಿದ್ದಾರೆ.

ಮುಂಬೈಯಿಂದ ಬಾಲಿವುಡ್‌ ಹೊರ ಹಾಕಲು ಬಿಜೆಪಿ ಸಂಚು: ನವಾಬ್ ಮಲಿಕ್‌

ನವಾಬ್ ಮಲಿಕ್ ಆರೋಪಕ್ಕೆ ತಿರುಗೇಟು ನೀಡಿದ ಫಡ್ನವಿಸ್, ಭೂಗತ ಪಾತಕಿಗಳ(Underworld link) ಜೊತೆ ನಂಟು ಹೊಂದಿದರ ಕುರಿತು ಮಾತನಾಡುವುದಿಲ್ಲ. ಆದರೆ ಈ ದೀಪಾವಳಿ(Diwali) ಮುಗಿಯಲಿ ಎಂದು ಕಾಯುತ್ತಿದ್ದೇನೆ. ದೀಪಾವಳಿ ಬಳಿಕ ನವಾಬ್ ಮಲಿಕ್‌ಗೆ ಇರುವ ಭೂಗತ ಪಾತಕಿಗಳ ಜೊತೆಗಿನ ನಂಟಿನ ವಿವರವನ್ನು ದಾಖಲೆ ಸಮೇತ ಬಿಚ್ಚಿಡುತ್ತೇನೆ ಎಂದು ಫಡ್ನವಿಸ್ ಹೇಳಿದ್ದಾರೆ.

ದೇವೇಂದ್ರ ಫಡ್ನಿವಿಸ್ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ. NCB ವಿರುದ್ಧ ಹಗೆತನ ಸಾಧಿಸುತ್ತಿರುವ ನವಾಬ್ ಮಲಿಕ್ ಆರೋಪ ಹಾಗೂ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ನವಾಬ್ ಮಲಿಕ್ ಅಳಿಯ ವಿರುದ್ಧ ಪ್ರಕರಣ ದಾಖಲಿಸಿರುವ NCBಯನ್ನು ಒತ್ತಡಕ್ಕೆ ಸಿಲುಕಿಸಲು ನವಾಬ್ ಮಲಿಕ್ ಯತ್ನಿಸುತ್ತಿದ್ದಾರೆ. ಅಳಿಯ ಮೇಲಿರುವ ಚಾರ್ಜ್‌ಶೀಟ್ ಹಿಂತೆಗೆದುಕೊಳ್ಳುವಂತೆ ಮಾಡಲು ನವಾಬ್ ಮಲಿಕ್ ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದು ಫಡ್ನಿವಿಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ವಿವಾದದ ಮಧ್ಯೆ ಸಮೀರ್‌ ವಾಂಖೇಡೆ 'ನಿಖಾ' ಫೋಟೋ ಶೇರ್ ಮಾಡಿದ ಸಚಿವ ಮಲಿಕ್!

ದೀಪಾವಳಿಗೂ ಮೊದಲು ನವಾಬ್ ಮಲಿಕ್ ಹಳೆ ವಿಡಿಯೋವನ್ನು ಹರಿಬಿಟ್ಟು ಸಣ್ಣ ಪಟಾಕಿಗೆ ಬೆಂಕಿ ಹಚ್ಚಿದ್ದಾರೆ. ಆದರೆ ದೀಪಾವಳಿ ಬಳಿಕ ದೊಡ್ಡ ಪಟಾಕಿಗೆ ಬೆಂಕಿ ಹಚ್ಚುತ್ತೇನೆ ಎಂದು ನವಾಬ್ ಮಲಿಕ್ ವಿರುದ್ಧ ದೇವೇಂದ್ರ ಫಡ್ನಿವಸ್ ಹೇಳಿದ್ದಾರೆ. ಈ ಮೂಲಕ ಇದೀಗ ನವಾಬ್ ಮಲಿಕ್ ಹಾಗೂ ಫಡ್ನಿಸ್ ಆರೋಪ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

NCB ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ 25 ಕೋಟಿ ರೂಪಾಯಿ ಡೀಲ್ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ ನವಾಬ್ ಮಲಿಕ್ ಇದೀಗ ದೇವೇಂದ್ರ ಫಡ್ನವಿಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ಫಡ್ನವಿಸ್‌ಗೆ ಮಾದಕ ದ್ರವ್ಯ ಸಾಗಾಟಗಾರರ ಜೊತೆ ಸಂಪರ್ಕವಿದೆ. ಜೈಲು ಸೇರಿರುವ ಡ್ರಗ್ ಪೆಡ್ಲರ್ ಜಯದೀಪ್ ರಾಣಾ ಜೊತೆ ಫಡ್ನವಿಸ್‌ಗೆ ನಕಟ ಸಂಪರ್ಕವಿದೆ. ಡ್ರಗ್ಸ್ ಪೆಡ್ಲರ್ ಜೊತೆಗಿನ ಸಂಪರ್ಕದಿಂದ ಫಡ್ನವಸಿ ಆಡಳಿತದಲ್ಲಿ ಮುಂಬೈ ಹಾಗೂ ಮಹರಾಷ್ಟ್ರದಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ. ಇದೀಗ ನಮ್ಮ ಮೈತ್ರಿ ಸರ್ಕಾರ ಡ್ರಗ್ಸ್ ದಂಧೆಯನ್ನು ನಿಯಂತ್ರಿಸುತ್ತಿದೆ ಎಂದು ಮಲಿಕ್ ಆರೋಪಿಸಿದ್ದರು.

'ನನ್ನ ತಂದೆ ಹಿಂದು..ತಾಯಿ ಮುಸ್ಲಿಂ... ಸಮೀರ್ ವಾಂಖೆಡೆ ತಿರುಗೇಟು!

ಅಕ್ಟೋಬರ್ ತಿಂಗಳ ಆರಂಭದಲ್ಲಿ ಮುಂಬೈ ಕರಾವಳಿಯಿಂದ ಹೊರಡ ಕ್ರ್ಯೂಸ್ ಹಡಗಿನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆ ಬಳಕೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಎನ್‌ಸಿಬಿ ಅಧಿಕಾರಿಗಳು ಮುಫ್ತಿಯಲ್ಲಿ ದಾಳಿ ನಡೆಸಿದ್ದರು. ದಾಳಿ ವೇಳೆ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಷ್ಟೇ ಅಲ್ಲ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು.

ಆರ್ಯನ್ ಖಾನ್ ಬಂಧನದ ಬೆನ್ನಲ್ಲೇ ಕೆಲವರು ಎನ್‌ಸಿಬಿ ದಾಳಿಯನ್ನೇ ಪ್ರಶ್ನಿಸಿದ್ದರು. ಹೀಗೆ ಪ್ರಶ್ನೆ ಮಾಡಿದ ಪ್ರಮುಖರಲ್ಲಿ NCP ನಾಯಕ ನವಾಬ್ ಮಲಿಕ್ ಕೂಡ ಒಬ್ಬರು. ಸಮೀರ್ ವಾಂಖೆಡೆಯನ್ನು ಟಾರ್ಗೆಟ್ ಮಾಡಿದ ನವಾಬ್ ಮಲಿಕ್, ಆರ್ಯನ್ ಖಾನ್‌ನ್ನು ಬಲಿಪಶು ಮಾಡಲಾಗಿದೆ. ಆರ್ಯನ್ ಖಾನ್ ಕೇಸ್ ಮುಚ್ಚಿಹಾಕಲು ಅಧಿಕಾರಿ ಸಮೀರ್ ವಾಂಖೆಡೆ 25 ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂದು ಆರೋಪಿಸಿದ್ದರು. ಇದಾದ ಬಳಿಕ ಸಮೀರ್ ವಾಂಖೆಡೆ ಧರ್ಮ, ಪತ್ನಿ ಸೇರಿದಂತೆ ವೈಯುಕ್ತಿಕ ವಿಚಾರಗಳ ಮೇಲೆ ಮಲಿಕ್ ಆರೋಪಗಳ ಸುರಿಮಳೆಗೈದಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!