
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಫೆ.19): ದೇಶದಲ್ಲಿ ಮೊಟ್ಟ ಮೊದಲು ಟ್ರಾನ್ಸ್‌ಮೀಟರ್ ಬಳಕೆ ಇಲ್ಲದೆ ಆಂಟೆನಾ ಸಹಾಯದಿಂದ ಗಡಿಯಲ್ಲಿ ಅಕ್ರಮವಾಗಿ ನುಸುಳುವ ವಿಮಾನಗಳನ್ನು ಪತ್ತೆ ಮಾಡುವ ‘ಪ್ಯಾಸಿವ್ ಕೊಹೇರೆಂಟ್ ಲೋಕೇಷನ್ ರಡಾರ್’ (ಪಿಸಿಎಲ್‌ಆರ್) ಅನ್ನು ಬೆಂಗಳೂರಿನಲ್ಲಿರುವ ‘ಎಲೆಕ್ಟ್ರಾನಿಕ್ ಆ್ಯಂಡ್ ರೇಡಾರ್ ಅಭಿವೃದ್ಧಿ ಸಂಸ್ಥೆ’ (ಎಲ್‌ಆರ್‌ಡಿಇ) ಅನ್ವೇಷಿಸಿದೆ.
ಸದ್ಯ ಭಾರತ ಸೇರಿದಂತೆ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರದಲ್ಲಿ ಆ್ಯಕ್ಟಿವ್ ರಡಾರ್ ಸಿಸ್ಟಂ ಬಳಕೆ ಮಾಡುತ್ತಾರೆ. ಪ್ಯಾಸಿವ್ ರಡಾರನ್ನು ಇಸ್ರೇಲ್, ಅಮೆರಿಕದಂತಹ ರಾಷ್ಟ್ರಗಳಿಲ್ಲಿ ಬಳಕೆ ಮಾಡಲಾಗುತ್ತಿದೆ. ಆದರೆ, ಅದನ್ನು ಈವರೆಗೆ ಖಚಿತ ಪಡಿಸಿಲ್ಲ. ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಹೊಂದಿರುವ ಪ್ಯಾಸಿವ್ ರಡಾರನ್ನು ಗೌಪ್ಯ ಆಯುಧವಾಗಿ ಬಳಸಲಾಗುತ್ತದೆ.
ಟಾಟಾ ಏರ್‌ಬಸ್ ಖರೀದಿಗೆ ಲಂಡನ್‌ನಲ್ಲಿ ನಡೆದಿತ್ತು ತೆರೆಮರೆ ಡೀಲ್!
ಬಳಕೆಯಲ್ಲಿರುವ ಆ್ಯಕ್ಟಿವ್ ರಡಾರ್‌ಗಳು, ನೂರಾರು ಕಿ.ಮೀ. ದೂರದಲ್ಲಿ ಬರುತ್ತಿರುವ ವಾಹಕದ ಮೇಲೆ ಟ್ರಾನ್ಸ್ ಮೀಟರ್‌ನಿಂದ ತರಂಗಗಳನ್ನು ಕಳುಹಿಸಿ ಪ್ರತಿಯಾಗಿ ಬರುವ ತರಂಗಗಳನ್ನು ಸ್ವೀಕರಿಸಿ ಪತ್ತೆ ಮಾಡುತ್ತವೆ. ಕೆಲವು ಬಾರಿ ತರಂಗಗಳನ್ನು ತಪ್ಪಿಸಿಕೊಂಡು ನುಸುಳುವ ಸಾಧ್ಯತೆ ಇರಲಿದೆ. ಅಲ್ಲದೆ, ಈ ರಡಾರ್ ಸಿಸ್ಟಂ ಅಭಿವೃದ್ಧಿ ಪಡಿಸುವುದು ಅತ್ಯಂತ ದುಬಾರಿ ವೆಚ್ಚವಾಗಿದೆ. 300 ಕಿ.ಮೀ. ದೂರ ವ್ಯಾಪ್ತಿಗೆ ರಡಾರ್ ಸಿಸ್ಟಂ ಅಭಿವೃದ್ಧಿ ಸುಮಾರು .300 ಕೋಟಿ ವೆಚ್ಚವಾಗಲಿದೆ.
ಆದರೆ, ಬೆಂಗಳೂರಿನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಂಗ ಸಂಸ್ಥೆಯಾದ ಎಲ್‌ಆರ್‌ಡಿಇ, ಕೇವಲ ಎಫ್‌ಎಂ ಸಿಗ್ನಲ್ ಬಳಕೆ ಮಾಡಿಕೊಂಡು ಪ್ಯಾಸಿವ್ ರೇಡಾರ್ ಸಿಸ್ಟಂ ಅಭಿವೃದ್ಧಿ ಪಡಿಸಿದೆ. ಬೆಂಗಳೂರು ನಗರದಲ್ಲಿ ನಡೆಸಿದ ಪ್ರಾಯೋಗಿಕ ಪರೀಕ್ಷೆವೂ ಯಶಸ್ವಿಯಾಗಿದೆ.
ಬೆಂಗಳೂರಿನಲ್ಲಿ ಇರುವ ಆಕಾಶವಾಣಿ ಮತ್ತು ದೂರದರ್ಶನ ಟವರ್‌ನಿಂದ ಬಿಡುಗಡೆ ಆಗುವ ಎಫ್‌ಎಂ ಸಿಗ್ನಲ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ನಾಲ್ಕು ಸ್ಥಳದಲ್ಲಿ ಸಿಗ್ನಲ್ ರಿಸೀವ್ ಆಂಟೆನಾ ಸ್ಟೇಷನ್ ನಿಲ್ಲಿಸಲಾಗಿರುತ್ತದೆ. ಆಕಾಶದಲ್ಲಿ ಯಾವುದೇ ವಿಮಾನಗಳು ಬಂದರೆ ಅದರ ಮಾಹಿತಿಯನ್ನು ಸಿಗ್ನಲ್ ಮೂಲಕ ಕಮಾಂಡಿಗ್ ಆ್ಯಂಡ್ ಕಂಟ್ರೋಲ್ ಸ್ಟೇಷನ್‌ಗೆ ತಕ್ಷಣ ಕಳುಹಿಸಲಿವೆ. ಅಲ್ಲಿ ಬಂದ ಸಿಗ್ನಲನ್ನು ಸಂಸ್ಕರಿಸಿಡುತ್ತದೆ.
ಗುಡ್ಡ ಪ್ರದೇಶ, ತಗ್ಗು ಪ್ರದೇಶ ಸೇರಿದಂತೆ ಎಲ್ಲಾ ಕಡೆಯೂ ಸುಲಭವಾಗಿ ಬಳಕೆ ಮಾಡಬಹುದಾಗಿದೆ. ಸಂಚಾರಿ ಸಿಗ್ನಲ್ ರಿಸೀವ್ ಆಂಟೆನಾ ಸ್ಟೇಷನ್ ನಿರ್ಮಿಸಬಹುದಾಗಿದೆ. ನಾಲ್ಕು ಸಿಗ್ನಲ್ ರಿಸೀವ್ ಆಂಟೆನಾ ಸ್ಷೇಷನ್ ಹಾಗೂ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಿರ್ಮಾಣಕ್ಕೆ ಸುಮಾರು .30 ಕೋಟಿ ವೆಚ್ಚ ವಾಗಲಿದೆ. ಇದು ಆ್ಯಕ್ಟಿವ್ ರಡಾರ್‌ಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ವೆಚ್ಚವಾಗಿದೆ.
ವಿಮಾನಯಾನದಲ್ಲಿ ಭಾರತ ಶೀಘ್ರ 3ನೇ ದೊಡ್ಡ ಮಾರುಕಟ್ಟೆ: ಮೋದಿ
ಗ್ರೀನ್ ರೇಡಾರ್ ಹೆಸರು
ಯಾವುದೇ ಎಲೆಕ್ಟ್ರಾನ್‌ಅನ್ನು ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಈ ಪ್ಯಾಸಿವ್ ರಡಾರನ್ನು ಗ್ರೀನ್ ರಡಾರ್ ಎಂದೂ ಕರೆಯಲಾಗುತ್ತದೆ. ವಾಯು ಪಡೆಯ ಉನ್ನತ ಮಟ್ಟದ ಅಧಿಕಾರಿಗಳು ವೀಕ್ಷಣೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಪ್ಯಾಸಿವ್ ರಡಾರ್ ಯೋಜನೆಯ ನಿರ್ದೇಶಕಿ ರೋಸ್ ಅಬ್ರಾಹಾಂ ಮಾಹಿತಿ ನೀಡಿದ್ದಾರೆ.
ಸಾಂಪ್ರದಾಯಿಕ ರಡಾರ್‌ಗಳಿಂತ ಅತ್ಯಂತ ಗುಣಮಟ್ಟದ ತಾಂತ್ರಿಕತೆಯನ್ನು ಪ್ಯಾಸಿವ್ ರಡಾರ್ ಸಿಸ್ಟಂ ಹೊಂದಿದೆ. ದೇಶದ ತುತ್ತತುದಿವರೆಗೆ ಎಫ್‌ಎಂ ಸಿಗ್ನಲ್ ವ್ಯವಸ್ಥೆ ಇದ್ದು, ಅದನ್ನು ಬಳಕೆ ಮಾಡಿಕೊಂಡು ಗಡಿ ನುಸಳುವ ಶತ್ರುಗಳ ವಿಮಾನವನ್ನು ಸುಲಭವಾಗಿ ಪತ್ತೆ ಮಾಡಬಹುದು ಅಂತ ಎಲ್‌ಆರ್‌ಡಿಇ ತಾಂತ್ರಿಕ ಅಧಿಕಾರಿ ತೇಜಸ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ