ದೆಹಲಿ(ಜು.17): ಕೊರೋನಾ ಬಂದಾಗಿನಿಂದ ಜನರು ಸೋಷಿಯಲ್ ಮೀಡಿಯಾದ ಫನ್ನಿ ವಿಡಿಯೋಳನ್ನೇ ಮನರಂಜನೆ ದಾರಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ ನಕ್ಕು, ಇತರರಿಗೂ ಶೇರ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಈ ಮಧ್ಯೆ ಅದೆಷ್ಟು ಫನ್ನಿ ವಿಡಿಯೋಗಳನ್ನು ಬಂದು ಹೋದವೋ...
ಮದುವೆ ಅಂದ್ರೆ ವರ-ವಧುವಿಗೆ ಸುಸ್ತು ಸಾಮಾನ್ಯ. ಶಾಸ್ತ್ರ, ಗದ್ದಲ, ಸಂಭ್ರಮ ಎಲ್ಲ ಸೇರಿ ನಿದ್ದೆಗೆಟ್ಟಿರುತ್ತಾರೆ ಜೋಡಿ. ಸದ್ಯ ಎಲ್ಲಾ ಆಯ್ತು, ಇನ್ನು ಮದುವೆ ಒಂದೇ ಬಾಕಿ ಅಲ್ವ ಅಂತ ನಿರಾಳನಾದ ವರ ಗಮ್ಮತ್ತಾಗಿ ನಿದ್ದೆ ಮಾಡಿದ್ದಾನೆ.
ತನ್ನ ಮದುವೆಗೆ ಕುಡಿದು ಬಂದವ ಡ್ಯಾನ್ಸ್ ಮಾಡು ಎಂದ.. ವಿವಾಹ ಕ್ಯಾನ್ಸಲ್!
ವರನಿಗೆ ಮಗ್ಗಿ ಬರಲ್ಲ ಎಂದು ಮದುವೆ ಮುರಿದಿದ್ದು, ವಧುವನ್ನು ಎತ್ತಿದ್ದಕ್ಕೆ ವಧು ವ್ಯಕ್ತಿಗೆ ಕಪಾಳ ಮೂಕ್ಷ ಮಾಡಿದ್ದು ಇಂತಹ ಹಲವು ವಿಡಿಯೋ ಸಾಲಿಗೆ ಈಗ ಮತ್ತೊಂದು ಸೇರಿದೆ. ಅದೇನೆಂದರೆ ವರನ ನಿದ್ರೆಯ ವಿಡಿಯೋ.
ಹಾರ ಹಾಕಲು ಎತ್ತಿದಾತನಿಗೆ ಕೂಡಲೇ ಕಪಾಳ ಮೋಕ್ಷ ಮಾಡಿದ ವಧು!
ಮದುವೆ ಮಧ್ಯೆಯೇ ಮದುಮಗನಾಗಿ ಅಲಂಕರಿಸಿಕೊಂಡಿರೋ ವರ ನಿದ್ದಗೆ ಜಾರಿದ್ದಾನೆ. ಅದೂ ತನ್ನ ಮುದ್ದಾಗ ವಧುವಿನ ಪಕ್ಕದಲ್ಲಿಯೇ. ನಿರಂಜನ್ ಮಹಾಪಾತ್ರ ಶೇರ್ ಮಾಡಿದ ವಿಡಿಯೋದಲ್ಲಿ ಜೋಡಿ ವೇದಿಕೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಆಕ್ಟಿವ್ ಆಗಿದ್ದು ವಧು ಸಂಬಂಧಿಕರ ಜೊತೆ ಆರಾಮವಾಗಿ ಹರಟುತ್ತಿದ್ದರೆ ವರ ಇದಕ್ಕೆ ತದ್ವಿರುದ್ಧವಾಗಿದ್ದ.
ಮಟನ್ ಊಟವಿಲ್ಲವೆಂದು ಮದುವೆ ಮುರಿದು, ಬೇರೊಬ್ಬಾಕೆಗೆ ತಾಳಿ ಕಟ್ಟಿದ 'ಮದುಮಗ'!
ವರ ಗಮ್ಮತ್ತಾಗಿ ಕುಳಿತು ನಿದ್ರಿಸಿದ್ದಾನೆ. ವಧುವಿನ ಭುಜದ ಮೇಲೆ ತಲೆ ಇಟ್ಟು ಮಲಗಿದ ವರ, ಸೀಟಿನಿಂದ ಜಾರಿದ ಸ್ಥಿತಿಯಲ್ಲಿದ್ದ. ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ತಾಗಿ ಶೇರ್ ಆಗುತ್ತಿದೆ.