ಇನ್ನೆಷ್ಟು ಗ್ಯಾಸ್ ಇದೆ ಎಂದು ತಿಳಿಸುವ ಸ್ಮಾರ್ಟ್ ಸಿಲಿಂಡರ್ ಬಿಡುಗಡೆ

By Kannadaprabha NewsFirst Published Jul 17, 2021, 9:47 AM IST
Highlights
  • ಇನ್ನು ಮುಂದೆ ಅಡುಗೆ ಅನಿಲದ ಸಿಲಿಂಡರ್‌ನಲ್ಲಿ ಎಷ್ಟುಪ್ರಮಾಣದ ಗ್ಯಾಸ್‌ ಇದೆ ಎಂಬುದು ಗ್ಯಾಸ್‌ ಖಾಲಿಯಾಗುವ ಮುಂಚಿತವೇ ಗ್ರಾಹಕರಿಗೆ ಗೊತ್ತಾಗಲಿದೆ
  • ಸರ್ಕಾರಿ ಸ್ವಾಮ್ಯದ ಇಂಡೇನ್‌ ಕಂಪನಿಯು ಕಾಂಪೋಸಿಟ್‌ ಸಿಲಿಂಡರ್‌ ಎಂಬ ಸ್ಮಾರ್ಟ್‌ ಸಿಲಿಂಡರ್‌ ಬಿಡುಗಡೆ 
  • ದೆಹಲಿ, ಗುರುಗ್ರಾಮ, ಹೈದರಾಬಾದ್‌, ಫರಿದಾಬಾದ್‌ ಮತ್ತು ಲೂಧಿಯಾನದಲ್ಲಿ ಇದನ್ನು ಆರಂಭಿಸಲಾಗಿದೆ

ನವದೆಹಲಿ (ಜು.17): ಇನ್ನು ಮುಂದೆ ಅಡುಗೆ ಅನಿಲದ ಸಿಲಿಂಡರ್‌ನಲ್ಲಿ ಎಷ್ಟುಪ್ರಮಾಣದ ಗ್ಯಾಸ್‌ ಇದೆ ಎಂಬುದು ಗ್ಯಾಸ್‌ ಖಾಲಿಯಾಗುವ ಮುಂಚಿತವೇ ಗ್ರಾಹಕರಿಗೆ ಗೊತ್ತಾಗಲಿದೆ! ಸರ್ಕಾರಿ ಸ್ವಾಮ್ಯದ ಇಂಡೇನ್‌ ಕಂಪನಿಯು ಕಾಂಪೋಸಿಟ್‌ ಸಿಲಿಂಡರ್‌ ಎಂಬ ಸ್ಮಾರ್ಟ್‌ ಸಿಲಿಂಡರ್‌ ಬಿಡುಗಡೆ ಮಾಡಿದ್ದು, ಈ ಸಿಲಿಂಡರ್‌ಗಳಲ್ಲಿ ಇನ್ನೂ ಎಷ್ಟುಪ್ರಮಾಣದ ಗ್ಯಾಸ್‌ ಇದೆ ಎಂಬುದು ಗ್ರಾಹಕರಿಗೆ ಸುಲಭವಾಗಿ ಗೊತ್ತಾಗಲಿದೆ.

ದೆಹಲಿ, ಗುರುಗ್ರಾಮ, ಹೈದರಾಬಾದ್‌, ಫರಿದಾಬಾದ್‌ ಮತ್ತು ಲೂಧಿಯಾನದಲ್ಲಿ ಇದನ್ನು ಆರಂಭಿಸಲಾಗಿದೆ. ನಂತರ ದೇಶದ ಇತರ ಭಾಗಗಳಿಗೆ ಕಾಂಪೋಸಿಟ್‌ ಸಿಲಿಂಡರ್‌ ಭಾಗ್ಯ ವಿಸ್ತರಣೆಯಾಗುವ ನಿರೀಕ್ಷೆಯಿದೆ.

LPG ಗ್ಯಾಸ್‌ ಸಿಲಿಂಡರ್‌ ಮತ್ತಷ್ಟು 'ಭಾರ': ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!

ಆದರೆ ಇದು ಸಬ್ಸಿಡಿ ಸಿಲಿಂಡರ್‌ ಅಲ್ಲ. 10 ಕೇಜಿ ಅನಿಲ ಒಳಗೊಂಡಿರುವ ಈ ಕಾಂಪೋಸಿಟ್‌ ಸಿಲಿಂಡರ್‌ ಬೆಲೆ 3350 ರು. ಇರಲಿದೆ.

ಇಂಡೇನ್‌ ಕಾಂಪೋಸಿಟ್‌ ಸಿಲಿಂಡರ್‌ಗಳು ಹೆಚ್ಚು ಬಲಿಷ್ಠವಾಗಿದ್ದು, ಫೈಬರ್‌ನಿಂದ 3 ಲೇಯರ್‌ಗಳಿವೆ. ಪಾರದರ್ಶಕ ಆಗಿರುವ ಕಾರಣ ಅನಿಲ ಯಾವಾಗ ಖಾಲಿ ಆಗಲಿದೆ ಎಂಬುದು ತಿಳಿಯಲಿದೆ. ಸಾಮಾನ್ಯ ಸಿಲಿಂಡರ್‌ಗಳಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ. ಜೊತೆಗೆ ಸಾಮಾನ್ಯ ಸಿಲಿಂಡರ್‌ಗಳಿಂತ ತುಂಬಾ-ತುಂಬ ಹಗುರವಾಗಿದೆ.ತಮ್ಮ ಮುಂದಿನ ಗ್ಯಾಸ್‌ ಸಿಲಿಂಡರ್‌ ಯಾವಾಗ ಕಾಯ್ದಿರಿಸಿಕೊಳ್ಳಬೇಕು ಎಂದು ನಿರ್ಧರಿಸಲು ನೆರವಾಗಲಿದೆ ಎಂದು ಇಂಡೇನ್‌ ಹೇಳಿದೆ.

click me!