ನವದೆಹಲಿ(ಡಿ.29): ಹೂವಿನ ಮಾಲೆ ಹಾಕುವ ಮೊದಲು ತನಗೆ ಮುತ್ತಿಡುವಂತೆ ವರನೊಬ್ಬ ವಧುವಿಗೆ ಕಾಡಿಸಿದ ಕ್ಯೂಟ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ (Wedding) ಮನೆಯೆಂದರೆ ಅಲ್ಲಿ ತಮಾಷೆ, ಮಜಾ, ಜೋಕ್‌ಗೇನೂ (Jokes) ಬರವಿರಲ್ಲ. ಬಂಧು- ಬಾಂಧವರಿಗೆ ಸಡಗರ, ಸಂಭ್ರಮ, ಸ್ನೇಹಿತರಿಗೆ ಎಲ್ಲರೂ ಸಿಗುವ ಖುಷಿ, ಎರಡೂ ಹೊಸ ಕುಟುಂಬಗಳ ನಡುವಿನ ನೆಂಟಸ್ತಿಕೆ ಎಲ್ಲವೂ ಸಂತಸವನ್ನು ಇಮ್ಮಡಿಗೊಳಿಸುತ್ತದೆ. ಇನ್ನು ವಧು-ವರರ (Bride Groom) ನಡುವೆ ನಡೆಯುವ ತಮಾಷೆ ಪ್ರಸಂಗ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತದೆ. ಅಂತಹದೇ ಒಂದು ಪ್ರಸಂಗ ಇಲ್ಲಿ ನಡೆದಿದೆ.
ದೇಶಿ ವರನೊಬ್ಬ ಹೂವಿನ ಮಾಲೆಗಳ ಪರಸ್ಪರಬದಲಾವಣೆ ವೇಳೆ ಹೂವಿನ ಮಾಲೆಯನ್ನು ವಧುವಿನ ಕೊರಳಿಗೆ ಹಾಕುವ ಮೊದಲು ಮುತ್ತನ್ನಿಡುವಂತೆ ತನ್ನ ಬಾಳ ಸಂಗಾತಿಯಾಗುವಾಕೆಗೆ ಕೇಳುತ್ತಾನೆ. ಇದಕ್ಕೆ ನಾಚುತ್ತಲೇ ನಿರಾಕರಿಸುವ ವಧು ಕೊನೆಗೂ ಆತನ ಕೆನ್ನೆಗೆ ಮುತ್ತನಿಡುತ್ತಾಳೆ. ಈ ವಿಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, 2 ಲಕ್ಷಕ್ಕೂ ಅಧಿಕ ಜನ ಇದನ್ನು ವೀಕ್ಷಿಸಿದ್ದಾರೆ.
ಈ ವಿಡಿಯೋ ವಿಟ್ಟಿ ವೆಡ್ಡಿಂಗ್ (Witty Wedding) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಆಗಿದೆ. ವೇದಿಕೆ ಮೇಲೆ ಹಾರ ಹಿಡಿದು ನಿಂತಿರುವ ವರನ ಕೆನ್ನೆಗೆ ವಧು ಮುತ್ತನ್ನಿಡುತ್ತಿದ್ದಂತೆ ವರ ಆಕೆಯ ಕೊರಳಿಗೆ ಹಾರ ಹಾಕುತ್ತಾನೆ. ನನ್ನ ವರಮಾಲೆ ಕಾರ್ಯಕ್ರಮದಲ್ಲಿ ಟ್ವಿಸ್ಟ್ ಇದೆ. ನಿಮ್ಮ ಕಾಲೇಜು ಸಮಯದ ಪ್ರೀತಿಯನ್ನು ನೀವು ವಿವಾಹವಾಗುವುದಾದರೆ ಎಂದು ಕ್ಯಾಪ್ಷನ್ ನೀಡಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ನೋಡಿದ ಪ್ರತಿಯೊಬ್ಬರು ಲೈಕ್ ಮಾಡಿದ್ದು, ಪ್ರೀತಿ ವ್ಯಕ್ತಪಡಿಸುವ ಎಮೋಜಿ ಬಳಸಿ ಕಾಮೆಂಟ್ ಮಾಡಿದ್ದಾರೆ.
ಮಂಟಪದಲ್ಲೇ ನಿದ್ದೆಗೆ ಜಾರಿದ ವಧು
ಭಾರತೀಯ ಮದುವೆಗಳೇ ಹಾಗೆ ವಿವಿಧ ವೈವಿಧ್ಯ ಸಂಪ್ರದಾಯಗಳನ್ನು ಹೊಂದಿರುವ ಭಾರತೀಯ ಮದುವೆಗಳು ನವ ವಧುವರರನ್ನು ನಿಂತೇ ಸುಸ್ತಾಗಿಸುವಂತೆ ಮಾಡುತ್ತಿದೆ. ಕೆಲವು ಸಮುದಾಯಗಳಲ್ಲಿ ಮುಂಜಾನೆಯಿಂದ ಆರಂಭವಾಗುವ ಹಲವು ಸಂಪ್ರದಾಯಗಳು ರಾತ್ರಿ ಕಳೆದು ಮರು ದಿನ ಬೆಳಗ್ಗಿನ ಜಾವದವರೆಗೂ ಮುಂದುವರೆಯುತ್ತವೆ. ಹೀಗೆ ಮದುವೆಯಲ್ಲಿ ನಡೆಸುವ ಸಂಪ್ರದಾಯ ದಿನ ಕಳೆದು ರಾತ್ರಿ ಕಳೆದು ಬೆಳಗ್ಗಿನ ಜಾವದವರೆಗೂ ಮುಂದುವರೆದ ಪರಿಣಾಮ ವಧುವೊಬ್ಬಳು ಮದುವೆ ಮಂಟಪದಲ್ಲೇ ನಿದ್ದೆಗೆ ಜಾರಿದ ಘಟನೆ ಇತ್ತೀಚೆಗೆ ನಡೆದಿತ್ತು. ತನ್ನ ಮದುವೆಯ ಮಂಟಪದಲ್ಲೇ ವಧು ನಿದ್ದೆಯಿಂದ ತೂಕಾಡಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಕ್ಷಕರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
Viral News: ಗಂಡನ ಮನೆಗೆ ಹೋಗಲ್ಲ ಎಂದು ನವವಧು ಗೋಳಾಟ, ಕಳುಹಿಸುವಷ್ಟರಲ್ಲಿ ಮನೆಯವರು ಸುಸ್ತೋ ಸುಸ್ತು..!
Battered Suitcase ಹೆಸರಿನ ಇನ್ಸ್ಟ್ರಾಮ್ ಖಾತೆಯಿಂದ ವಧು ನಿದ್ರಿಸುತ್ತಿರುವ ವಿಡಿಯೋವನ್ನು ಫೋಸ್ಟ್ ಮಾಡಲಾಗಿದೆ. 'ಇಲ್ಲಿ ನೋಡಿ ನಿದ್ರಿಸುತ್ತಿರುವ ವಧುವನ್ನು. ಈಗಾಗಲೇ ಸಮಯ ಬೆಳಗ್ಗೆ 6.30 ಆಗಿದೆ ಆದರೂ ಮದುವೆಯ ಸಂಪ್ರದಾಯ ಇನ್ನು ಮುಗಿದಿಲ್ಲ' ಎಂದು ಬರೆದು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವಧು ಸುಂದರವಾದ ಕೆಂಪು ಹಾಗೂ ಕೇಸರಿ ಮಿಶ್ರಿತ ಬಣ್ಣದ ಲೆಹೆಂಗಾ ಧರಿಸಿ ಸೋಫಾದಲ್ಲಿ ಕುಳಿತಿದ್ದಾರೆ. ಇವರ ಪಕ್ಕದಲ್ಲೇ ವರನ್ನು ಇದ್ದಾನೆ. ಈ ವೇಳೆ ವಧು ಕುಳಿತಲ್ಲಿಂದಲೇ ಬರುವ ನಿದ್ದೆಯನ್ನು ತಡೆದುಕೊಳ್ಳಲಾಗದೇ ತೂಕಾಡಿಸುತ್ತಿದ್ದಾಳೆ. ವಧು ಲೋಕದ ಪಾರವೇ ಇಲ್ಲದೇ ನಿದ್ದೆಗೆ ಜಾರಿದ ಈ ವೇಳೆ ಆಕೆಯ ಸ್ನೇಹಿತರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.
Marriage Age: ಹರ್ಯಾಣ, ಪಂಜಾಬ್, ರಾಜಸ್ಥಾನದಲ್ಲಿ ಮದುವೆ ತರಾತುರಿ!
ಇದು ವಧುವಿನ ತಪ್ಪಲ್ಲ ಬಿಡಿ ಭಾರತೀಯ ಮದುವೆ(Indian Wedding) ಸಂಪ್ರದಾಯಗಳೇ ಹಾಗಿರುತ್ತವೆ. ಮಣ ಭಾರದ ಲೆಹೆಂಗಾ ಅಥವಾ ಸೀರೆಯನ್ನು ಉಡುವುದರ ಜೊತೆ ಅದಕ್ಕೆ ತಕ್ಕಂತಹ ಸಾಕಷ್ಟು ಆಭರಣಗಳನ್ನು ಧರಿಸಿರಬೇಕು. ಅದರ ಜೊತೆಗೆ ಮೇಕಪ್‌ನ ಕಿರಿಕಿರಿಯೂ ಇದ್ದು, ಬೆಳಗ್ಗಿನಿಂದ ಮದುವೆ ಸಂಪ್ರದಾಯ ಮುಗಿಯುವವರೆಗೂ ವಧು ಸ್ಥಳವನ್ನು ಬಿಟ್ಟು ಕದಲ್ಲದೇ ಅಲ್ಲೇ ನಿಂತಿರಬೇಕು ಅಥವಾ ಕೂತಿರಬೇಕು.