ಇದು ಚೇಸಿಂಗ್ ದೃಶ್ಯವಲ್ಲ: ನವ ಜೋಡಿಯ ಮದುವೆ ಫೋಟೋಶೂಟ್ ವೈರಲ್

Published : Oct 28, 2022, 04:17 PM IST
ಇದು ಚೇಸಿಂಗ್ ದೃಶ್ಯವಲ್ಲ: ನವ ಜೋಡಿಯ ಮದುವೆ ಫೋಟೋಶೂಟ್ ವೈರಲ್

ಸಾರಾಂಶ

ಮದುವೆಗೆ ಮುನ್ನ ನಡೆದ ನವ ಜೋಡಿಗಳ ಫೋಟೋ ಶೂಟ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಿಬ್ಬೆರಗಾಗುವಂತೆ ಮಾಡುತ್ತಿದೆ.   

ನವದೆಹಲಿ: ಫೊಟೋಶೂಟ್ ಎಂಬುದು ಮದುವೆ ಕಾರ್ಯಕ್ರಮದ ಪ್ರಮುಖ ಭಾಗ. ಮದುವೆಗೆ ಮೊದಲು ನಡೆಯುವ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಅಂತು ಒಂದು ಬೇರೆಯದೇ ಹಂತದಲ್ಲಿದೆ. ಮದುವೆಯಾಗುವ ನೂತನ ವಧುವರರು ಈ ಫೋಟೋ ಶೂಟ್‌ಗಾಗಿ ಎಲ್ಲಾ ಎಲ್ಲೆಗಳನ್ನು ಮಿತಿಗಳನ್ನು ಮೀರಿ ಮುನ್ನಡೆಯುತ್ತಿದ್ದು, ತಮ್ಮ ಮದುವೆಯ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ನ್ನು ವಿಭಿನ್ನವಾಗಿಸಲು ಹರ ಸಾಹಸ ಪಡುತ್ತಾರೆ. ಅದೇ ರೀತಿ ಈಗ ಮದುವೆಗೆ ಮುನ್ನ ನಡೆದ ನವ ಜೋಡಿಗಳ ಫೋಟೋ ಶೂಟ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಿಬ್ಬೆರಗಾಗುವಂತೆ ಮಾಡುತ್ತಿದೆ. 

ಯಾವುದೇ ಸಿನಿಮಾದ ಫೈಟ್ ಶೂಟ್‌ಗೆ (fight Shoot) ಕಡಿಮೆ ಇಲ್ಲದಂತೆ ಈ ಮದುವೆಯ ಫೋಟೋ ಶೂಟ್‌ನ್ನು ಮಾಡಲಾಗಿದೆ. ಈ ವಿಡಿಯೋದಲ್ಲಿ ಕಾಣಿಸುವಂತೆ ವಧು(Bride) ವರರು (Groom) ಬೈಕ್‌ ಮೇಲೆ ಕುಳಿತಿದ್ದು, ಒಮ್ಮೆಗೆ ಅವರಿದ್ದ ಬೈಕ್ ರಸ್ತೆ ಮೇಲೆ ಹಾರಿದ್ದು ಅಡ್ಡ ನಿಂತಿದ್ದ ವಾಹನವನ್ನು ಮೇಲಿನಿಂದಲೇ ದಾಟಿ ನಿಧಾನಕ್ಕೆ ಕೆಳಗಿಳಿಯುತ್ತಿದೆ. 

ಈ ಜೋಡಿಯ ಬೈಕ್ ಸಾಗುವ ದಾರಿಯಲ್ಲಿ ಸರಿ ಎದುರಿಗೆ ರಸ್ತೆಯಲ್ಲಿ ಗಾಡಿಯೊಂದನ್ನು ಅಡ್ಡ ನಿಲ್ಲಿಸಲಾಗಿತ್ತು. ನವ ಜೋಡಿಯಿದ್ದ ಬೈಕ್‌ನ್ನು ಕ್ರೇನ್‌ಗೆ ಕಟ್ಟಲಾಗಿದ್ದು, ಕ್ರೇನ್ ಮೂಲಕ ಬೈಕ್ ಕ್ವಾಲಿಸ್ ಗಾಡಿಯ ಮೇಲೆ ಹಾರಿ ರಸ್ತೆಗಿಳಿಯುವಂತೆ ಮಾಡಲಾಗಿದೆ. ಸಿನಿಮಾಗಳಲ್ಲಿ ವಿಲನ್‌ಗಳು ಚೇಸ್ (Chassing) ಮಾಡಿಕೊಂಡು ಬರುತ್ತಿರುವಾಗ ಹೀರೋ ಹಿರೋಯಿನ್ ಕರೆದುಕೊಂಡು ಬೈಕ್‌ನಲ್ಲಿ ಆಕೆಯನ್ನು ಹಾರಿಸಿಕೊಂಡು ಎದುರಿರುವ ರಸ್ತೆಯ ಮೇಲಿರುವ ವಾಹನದ ಮೇಲೆ ಹೋಗುವ ಸೀನ್‌ನಂತೆ ಈ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ಫೋಟೋ ಶೂಟ್‌ಗೂ ಜನ ಈ ರೀತಿ ವೆಚ್ಚ ಮಾಡುತ್ತಿರುವುದು ಅನೇಕರನ್ನು ಅಚ್ಚರಿಗೆ ದೂಡಿದೆ.

wedding photoshoot: ಮದುವೆ ಫೋಟೋಶೂಟ್ ಮಾಡಲು ಹೋಗಿ ಕೆಸರಿಗೆ ಬಿದ್ದ ಜೋಡಿ

ಈ ವಿಡಿಯೋವನ್ನು ಒಂಭತ್ತು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ಬಳಕೆದಾರರೊಬ್ಬರು ಈ ರೀತಿಯ ಫೋಟೋಶೂಟ್ ಮಾಡಿಸದೇ ತಾನು ಮದುವೆಯಾಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ನನ್ನ ಮದುವೆಯಲ್ಲೂ ಇಂತಹ ಫೋಟ್ರೋಗ್ರಾಫರ್ (Photographer) ಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನೋಡಿದ ನಂತರ ನನಗೆ ಮಾತೇ ಹೊರಡದಾಗಿದೆ. ಇದನ್ನು ಮಾಡಲು ನಿಜವಾಗಿಯೂ ಧೈರ್ಯ ಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಡಿಫರೆಂಟಾಗಿ ಫೋಟೋಶೂಟ್ ಮಾಡಿಸ್ಕೊಳೋಕೆ ಹೋಗಿ ಎಡವಟ್ಟು ಮಾಡ್ಕೊಂಡು ನವಜೋಡಿ!

ಮದುವೆಯ ಫೋಟೋ ಶೂಟ್‌ಗಳು ವೈರಲ್ ಆಗಿದ್ದು, ಇದೇ ಮೊದಲಲ್ಲ. ಈ ಹಿಂದೆಯೂ ಹಲವು ವೆಡ್ಡಿಂಗ್ ಫೋಟೋಶೂಟ್‌ಗಳು (Wedding Photoshoot) ವೈರಲ್ ಆಗಿವೆ. ಕೆಲ ದಿನಗಳ ಹಿಂದೆ ಕೇರಳದಲ್ಲಿ ವಧುವೊಬ್ಬರು ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಮದುವೆ ಮೊದಲಿನ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಅದು ಸಾಕಷ್ಟು ವೈರಲ್ ಆಗಿತ್ತು. 

ಸಾಮಾನ್ಯವಾಗಿ ಮದುವೆಯ ಫೋಟೋಗಳಿಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಇನ್ನು ಈ ರೀತಿಯ ಸಾಹಸ ಪ್ರದರ್ಶನದ ಫೋಟೋ ಶೂಟ್‌ಗೆ  ಕನಿಷ್ಟ ಲಕ್ಷವಾದರೂ ತೆಗೆದಿಡಬೇಕಾಗಬಹುದೇನೋ. ಒಟ್ಟಿನಲ್ಲಿ ಫೋಟೋಗ್ರಾಫಿ ಕೂಡ ಕಾಲದಿಂದ ಕಾಲಕ್ಕೆ ತುಂಬಾ ಬದಲಾಗಿದ್ದು, ಕಪ್ಪು ಬಿಳುಪಿನಿಂದ ಆರಂಭವಾದ ಈ ಫೋಟೋಗ್ರಾಫಿ ಇಂದು ಕಲರ್ ಕಲರ್ ಬಣ್ಣದ ಜೊತೆ ಲಭ್ಯವಾಗಿದ್ದು, ಕ್ರಿಯೇಟಿವಿಟಿಯನ್ನು ಇಷ್ಟಪಡುವ ಜನರ ಪಾಲಿಗೆ ಹೊಸ ಪ್ರಪಂಚವನ್ನೇ ರೂಪಿಸಿದೆ. ಕ್ರಿಯೇಟಿವಿಟಿಗೆ ತಕ್ಕಂತೆ ಫೋಟೋಗ್ರಾಫರ್‌ಗಳು ಕೂಡ ಬೇಡಿಕೆ ಪಡೆಯುತ್ತಿದ್ದಾರೆ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ