ಗೃಹ ಪ್ರವೇಶಕ್ಕೂ ಮುಂಚಿನ ದಿನ ಕೋಳಿಯನ್ನು ಬಲಿಕೊಡುವುದು ಸಾಮಾನ್ಯವಾಗಿ ಹಲವು ಭಾಗಗಳಲ್ಲಿನ ಪದ್ಧತಿ. ಮನೆ ಕೆಲಸ ಮಾಡಿದವರು ಬಲಿ ಪೂಜೆ ನೆರವೇರಿಸುತ್ತಾರೆ. ಹೀಗೆ ನಡೆದ ಬಲಿಪೂಜೆಯಲ್ಲಿ ಎಡವಟ್ಟಾಗಿದೆ. ಬಲಿಗೆ ತಂದ ಕೋಳಿ ಸೇಫ್ ಆಗಿದ್ದರೆ, ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.
ಚೆನ್ನೈ(ಅ.28): ಮನೆ ಕಟ್ಟುವುದು ಸುಲಭದ ಮಾತಲ್ಲ. ಸತತ ಪರಿಶ್ರಮ, ಆರ್ಥಿಕತೆ, ಸರಿಯಾದ ಪ್ಲಾನ್, ಉಸ್ತುವಾರಿ ಸೇರಿದಂತೆ ಹಲವು ವಿಭಾಗದಲ್ಲಿ ಅತ್ಯಂತ ಮುತುವರ್ಜಿ ವಹಿಸಿದರೆ ಅಂದುಕೊಂಡ ಮನೆ ನಿರ್ಮಾಣವಾಗಲಿದೆ. ಹೊಸ ಮನೆಯಲ್ಲಿ ಯಾವುದೇ ಸಮಸ್ಯೆಗಳು ಬರಬಾರದು ಎಂದು ಶಾಸ್ತ್ರೋಕ್ತವಾಗಿ ಗೃಹಪ್ರವೇಶ ಮಾಡಲಾಗುತ್ತದೆ. ಗೃಹ ಪ್ರವೇಶಕ್ಕೂ ಮುನ್ನ ಬಲಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಮನೆ ಕೆಲಸ ಮಾಡಿದವರು ಈ ಪೂಜೆಯನ್ನು ಸರಳವಾಗಿ ನಡೆಸಿಕೊಡುತ್ತಾರೆ. ಹೀಗೆ ಚೆನ್ನೈನ ಸಮೀಪದ ಪಲ್ಲವರಂ ಬಳಿಯಲ್ಲಿ ನಡೆದ ಬಲಿಪೂಜೆಯಲ್ಲಿ ಎಡವಟ್ಟವಾಗಿದೆ. ಬಲಿಗಾಗಿ ತಂದ ಕೋಳಿ ಯಾವುದೇ ಗಾಯಗಳಿಲ್ಲದೆ ಬದುಕುಳಿದಿದ್ದರೆ, ಕೋಳಿಯನ್ನು ಬಲಿಕೊಡಲು ಮುಂದಾದ ಮನೆ ಕೆಲಸ ಮಾಡಿದ ರಾಜೇಂದ್ರನ್ ಮೃತಪಟ್ಟ ಘಟನೆ ನಡೆದಿದೆ.
ಪಲ್ಲವರಂದ ಟ48 ವರ್ಷದ ಟಿ ಲೋಕೇಶ್ 3 ಅಂತಸ್ತಿನ ಮನೆ ಕಟ್ಟಿದ್ದಾರೆ. ತಮಗೂ ಹಾಗೂ ಬಾಡಿಗೆ ಮೂಲಕ ಆದಾಯಗಳಿಸಲು ಪ್ಲಾನ್ ಮಾಡಿ ಮನೆ ಕಟ್ಟಿದ್ದಾರೆ. ಕಳೆಗಿನ ಅಂತಸ್ತಿನ ಮನೆ ಕೆಲಸಗಳು ಸಂಪೂರ್ಣವಾಗಿದೆ. ಆದರೆ ಮೇಲಂತಸ್ತಿನ ಮನೆಗಳ ಕಾರ್ಯಗಳು ಸಂಪೂರ್ಣಗೊಂಡಿಲ್ಲ. ಇದರ ನಡುವೆ ಗೃಹ ಪ್ರವೇಶ ಮಾಡಿ ಮುಂದಿನ ಕೆಲಸಗಳನ್ನು ಮುಗಿಸಲು ಮಾಲೀಕ ಟಿ ಲೋಕೇಶ್ ನಿರ್ಧರಿಸಿದ್ದಾರೆ.
ಮುದ್ದೇಬಿಹಾಳ: ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವು
ಗೃಹ ಪ್ರವೇಶಕ್ಕೂ ಮುನ್ನ ಬಲಿ ಪೂಜೆ ಮಾಡುವುದು ಸಾಮಾನ್ಯ, ಕೋಳಿಯನ್ನು ಬಲಿಕೊಟ್ಟು ಮನೆಯಲ್ಲಿ ಯಾವುದೇ ಸಮಸ್ಯೆ ಬರದಂತೆ ಪ್ರಾರ್ಥನೆ ಮಾಡಲಾಗುತ್ತದೆ. ಈ ಬಲಿಪೂಜೆಯನ್ನು ಮನೆ ಕೆಲಸ ಮಾಡಿದವರೇ ಮಾಡುತ್ತಾರೆ. ಇಷ್ಟೇ ಅಲ್ಲ ಕೆಲಸ ಮಾಡಿದವರನ್ನು ಗೌರವಿಸುವ ಕಾರ್ಯವೂ ಇದೇ ದಿನ ನಡೆಯುತ್ತದೆ. ಹೀಗೆ ರಾಜೇಂದ್ರನ್ ಪೂಜಾರಿಯಾಗಿ ಬಲಿ ಪೂಜೆ ನೆರವೇರಿಸಲು ಎಲ್ಲಾ ಸಿದ್ಧತೆ ಮಾಡಿದ್ದಾರೆ. ಬಳಿಕ ಕೋಳಿಯನ್ನು ಬಲಿಕೊಡಲು 3ನೇ ಅಂತಸ್ತಿಗೆ ತೆರಳಲು ಮುಂದಾಗಿದ್ದರೆ. ಈ ವೇಳೆ ಮಾಲೀಕ ಟಿ ಲೋಕೇಶ್ ಲಿಫ್ಟ್ ಬಟನ್ ಒತ್ತಿದ್ದಾರೆ. ಲಿಫ್ಟ್ ಮೂಲಕ ರಾಜೇಂದ್ರನ್ 3ನೇ ಅಂತಸ್ತಿಗೆ ತೆರಳಿದ್ದಾರೆ.
ಮೇಲಿನ ಅಂತಸ್ತಿನ ಕೆಲಸಗಳು ಶೇಕಡಾ 80ರಷ್ಟು ಮಾತ್ರ ಪೂರ್ಣಗೊಂಡಿತ್ತು. ಎಲ್ಲೆಡೆ ಸಿಮೆಂಟ್, ಮರಳು ತುಂಬಿಕೊಂಡಿತ್ತು. ಟೈಲ್ಸ್ ಎಲ್ಲೆಡೆ ಹರಡಲಾಗಿತ್ತು. ಇನ್ನು ಕಟ್ಟದ ಬದಿಗಳನ್ನು ಕಟ್ಟುವ ಕೆಲಸವೂ ಪೂರ್ಣಗೊಂಡಿರಲಿಲ್ಲ. ಕೋಳಿಯನ್ನು ಬಲಿಕೊಡಲು ಮುಂದಾದ ರಾಜೇಂದ್ರನ್ 3ನೇ ಅಂತಸ್ತಿನಲ್ಲಿ ಸಿಮೆಂಟ್ ಇಲ್ಲದ ಜಾಗ ಹುಡುಕಿದ್ದಾರೆ. ಕಟ್ಟದ ಬದಿಯಲ್ಲಿ ನಿಂತು ಕೋಳಿ ಬಲಿಕೊಡಲು ಹೋದಾಗ ಟೈಲ್ಸ್ ಮೇಲೆ ಕಾಲಿಟ್ಟ ಬೆನ್ನಲ್ಲೇ ಜಾರಿದ್ದಾರೆ.
ಚೆನ್ನೈ: ಡಿವೈಡರ್ ದಾಟುವಾಗ ಲೈಟ್ ಕಂಬದ ವಿದ್ಯುತ್ ತಗುಲಿ ಟೆಕ್ಕಿ ಸಾವು
ಜಾರಿದ ಬೆನ್ನಲ್ಲೇ ಆಯತಪ್ಪಿ 3ನೇ ಅಂತಸ್ತಿನಿಂದ ಕೆಳಕ್ಕೆ ಬಿದ್ದಿದ್ದರೆ. ಇತ್ತ ಕೈಯಲ್ಲಿದ್ದ ಕೋಳಿ 3ನೇ ಅಂತಸ್ತಿನಿಂದ ಹಾರುತ್ತಾ ಕೆಳಕ್ಕೆ ಬಂದಿದೆ. ಆದರೆ ರಾಜೇಂದ್ರನ್ ಕೆಳಕ್ಕೆ ಬಿದ್ದ ರಭಸದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ರಾಜೇಂದ್ರನ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ರಾಜೇಂದ್ರನ್ ಬದುಕುಳಿಯಲಿಲ್ಲ. ರಾಜೇಂದ್ರ ತಮ್ಮ ಕುಟುಂಬದಿಂದ ದೂರವಾಗಿ ದಶಕಗಳೇ ಉರುಳಿದೆ. ಹೀಗಾಗಿ ಪೊಲೀಸರಿಗೆ ರಾಜೇಂದ್ರನ್ ಅವರ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಇತ್ತ ರಾಜೇಂದ್ರನ್ ಬಲಿ ಕೊಡಲು ತಂದ ಕೋಳಿ 3ನೇ ಅಂತಸ್ತಿನಿಂದ ಹಾರಿಕೊಂಡು ಕೆಳಕ್ಕೆ ಬಂದಿದೆ. ಬಲಿಕೊಡಲು ತಂದ ಕೋಳಿ ಸೇಫ್ ಆಗಿದ್ದರೆ, ರಾಜೇಂದ್ರನ್ ದುರಂತ ಅಂತ್ಯಕಂಡಿದ್ದಾರೆ.