
ಭೋಪಾಲ್(ಜೂ.19): ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ 64 ವರ್ಷದ ವೃದ್ಧೆಯೊಬ್ಬರಲ್ಲಿ ಕೊರೋನಾ ವೈರಸ್ನ ಡೆಲ್ಟಾಪ್ಲಸ್ ತಳಿ ರೂಪಾಂತರಿ ಸೋಂಕು ಕಂಡುಬಂದಿದೆ. ಇದು ಮಧ್ಯಪ್ರದೇಶದಲ್ಲಿ ದಾಖಲಾದ ಮೊದಲ ಮತ್ತು ದೇಶದಲ್ಲಿ ಪತ್ತೆಯಾದ 7ನೇ ಡೆಲ್ಟಾಪ್ಲಸ್ ಪ್ರಕರಣವಾಗಿದೆ.
ಆದಾಗ್ಯೂ, ಈ ಸೋಂಕು ಕಂಡುಬಂದಿದ್ದ ವೃದ್ಧೆ ಇದೀಗ ಪೂರ್ತಿ ಗುಣಮುಖರಾಗಿದ್ದಾರೆ ಎಂಬುದೇ ಸಮಾಧಾನಕರ.
ದೇಶಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಮತ್ತು ಆಮ್ಲಜನಕ ಸಿಲಿಂಡರ್ಗಳ ಅಭಾವಕ್ಕೆ ಕಾರಣವಾದ ‘ಡೆಲ್ಟಾ’ ತಳಿಯ ರೂಪದಲ್ಲೇ ‘ಡೆಲ್ಟಾಪ್ಲಸ್’ ವೈರಸ್ ಇರುವ ಕಾರಣ ಆತಂಕ ಎದುರಾಗಿದೆ. ಜೊತೆಗೆ ಈ ಮಹಿಳೆಯ ಜೊತೆಗೆ ಸಂಪರ್ಕ ಸಾಧಿಸಿದ 20 ಮಂದಿಯನ್ನು ಹುಡುಕಾಟ ನಡೆಸಿ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೊಳಪಡಿಸುವ ಕಾರ್ಯಕ್ಕೆ ಚುರುಕು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡೆಲ್ಟಾತಳಿ ವಿಶ್ವವ್ಯಾಪಿ: ವಿಶ್ವಸಂಸ್ಥೆ ಎಚ್ಚರಿಕೆ
ಭಾರತದಲ್ಲಿ ಪತ್ತೆ ಆದ ಡೆಲ್ಟಾಕೊರೋನಾ ರೂಪಾಂತರಿ ವೈರಸ್ ತಳಿ ಈಗ ವಿಶ್ವವ್ಯಾಪಿಯಾಗಿ ಆತಂಕ ಉಂಟು ಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, ಡೆಲ್ಡಾ ತಳಿ ಈಗ 80 ದೇಶಗಳಲ್ಲಿ ಕಂಡುಬಂದಿದೆ. ಇನ್ನೂ 12 ದೇಶಗಳಲ್ಲಿ ಇದು ಪತ್ತೆಯಾಗುವ ಆತಂಕ ಇದೆ. ಇದು ವೇಗವಾಗಿ ಸೋಂಕು ಹರಡಿಸಬಲ್ಲ ಸಾಮರ್ಥ್ಯ ಹೊಂದಿದ್ದು ಆತಂಕದ ವಿಚಾರ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ