ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: 24ಕ್ಕೆ ಮೋದಿ ಸಭೆ!

Published : Jun 19, 2021, 12:31 PM ISTUpdated : Jun 19, 2021, 12:33 PM IST
ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: 24ಕ್ಕೆ ಮೋದಿ ಸಭೆ!

ಸಾರಾಂಶ

* ಜಮ್ಮು-ಕಾಶ್ಮೀರ ವಿಚಾ​ರಕ್ಕೆ ಪುನಃ ರಾಜ್ಯ ಸ್ಥಾನಮಾನ ನೀಡುವ ಮಾತುಕತೆ * ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: 24ಕ್ಕೆ ಮೋದಿ ಸಭೆ? * 2019ರಲ್ಲಿ ಜಮ್ಮು-ಕಾಶ್ಮೀ​ರ​ಕ್ಕಿದ್ದ ವಿಶೇಷ ಸ್ಥಾನ​ಮಾನ ರದ್ದು​, ಕೇಂದ್ರಾಡಳಿತ ಪ್ರದೇಶ ಅಸ್ತಿತ್ವ

ಶ್ರೀನ​ಗ​ರ(ಜೂ.19): ಜಮ್ಮು-ಕಾಶ್ಮೀರ ವಿಚಾ​ರಕ್ಕೆ ಪುನಃ ರಾಜ್ಯ ಸ್ಥಾನಮಾನ ನೀಡುವ ಸಂಬಂಧ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ 24ರಂದು ಸರ್ವ​ಪ​ಕ್ಷ​ಗಳ ಸಭೆ ಕರೆ​ಯುವ ಸಾಧ್ಯ​ತೆ​ಯಿದೆ.

2019ರಲ್ಲಿ ಜಮ್ಮು-ಕಾಶ್ಮೀ​ರ​ಕ್ಕಿದ್ದ ವಿಶೇಷ ಸ್ಥಾನ​ಮಾನ ರದ್ದು​ಗೊ​ಳಿಸಿದ ಬಳಿಕ ರಾಜ್ಯ ಸ್ಥಾನಮಾನ ರದ್ದಾಗಿತ್ತು ಹಾಗೂ ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆ ಬಂದಿತ್ತು.

ಈ ಬಗ್ಗೆ ಖಾಸಗಿ ಮಾಧ್ಯ​ಮ​ವೊಂದಕ್ಕೆ ಪ್ರತಿ​ಕ್ರಿಯೆ ನೀಡಿದ ಜಮ್ಮು-ಕಾಶ್ಮೀ​ರದ ಹಿರಿಯ ಮುಖಂಡ​ರೊ​ಬ್ಬರು, ‘ಮುಂದಿನ ವಾರ ಸರ್ವ​ಪ​ಕ್ಷ​ಗಳ ಸಭೆ ಇದೆ ಎಂಬ ಮಾಹಿತಿಯನ್ನು ನಮ​ಗೆ ನೀಡ​ಲಾ​ಗಿದೆ. ಇದೀಗ ಆಹ್ವಾನ ಪತ್ರಿ​ಕೆಯ ನಿರೀ​ಕ್ಷೆ​ಯ​ಲ್ಲಿ​ದ್ದೇ​ವೆ’ ಎಂದಿ​ದ್ದಾರೆ.

ಈ ಹಿನ್ನೆ​ಲೆ​ಯಲ್ಲಿ ಜಮ್ಮು-ಕಾಶ್ಮೀ​ರ​ ಮತ್ತು ಲಡಾಖ್‌ ಎಂಬ 2 ಕೇಂದ್ರಾ​ಡ​ಳಿತ ಪ್ರದೇ​ಶ​ಗ​ಳ​ನ್ನಾಗಿ ವಿಂಗ​ಡಿ​ಸಲಾ​ಗಿ​ರುವ ಜಮ್ಮು-ಕಾಶ್ಮೀ​ರಕ್ಕೆ ಮತ್ತೆ ರಾಜ್ಯ ಸ್ಥಾನ​ಮಾನ ಕಲ್ಪಿ​ಸಲು ಕೇಂದ್ರ ಸರ್ಕಾರ ಚರ್ಚೆ ನಡೆ​ಸ​ಬ​ಹುದೇ ಎಂಬ ವರ​ದಿ​ಗ​ಳಿಗೆ ರೆಕ್ಕೆ ಪುಕ್ಕ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!