
ಅಹಮ್ಮದಾಬಾದ್(ಸೆ.1) ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಗಡಿ ಭಾಗದ ಜಿಲ್ಲೆಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಗುಜರಾತ್‌ನ ಹಲವು ಜಿಲ್ಲೆಗಳು ಜಲಾವೃತಗೊಂಡಿದೆ. ಹಲವು ಅಪಾರ್ಟ್‌ಮೆಂಟ್‌ನ ಕೆಳ ಭಾಗ ಜಲಾವೃತಗೊಂಡಿದೆ. ಹೀಗೆ ಜಲಾವೃತಗೊಂಡ ಪ್ರದೇಶ ಹಲುವ ಅಂತಸ್ತುಗಳ ಮೇಲಿನಿಂದ ಫುಡ್ ಆರ್ಡರ್ ಮಾಡಲಾಗಿದೆ. ಡೆಲಿವರಿ ಬಾಯ್ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಜಲಾವೃತಗೊಂಡಿರುವ ನೀರಿನಲ್ಲಿ ಹರಸಾಹಸದಿದಂ ನಡೆದುಕೊಂಡು ಸಾಗಿ ಪಾರ್ಸೆಲ್ ತಲುಪಿಸಿದ ಘಟನೆ ಸೆರೆಯಾಗಿದೆ.
ಅಹಮ್ಮದಾಬಾದ್‌ನಲ್ಲಿ ಈ ಘಟನೆ ನಡದಿದೆ. ಅಹಮ್ಮದಾಬಾದ್‌ನ ಬಹುತೇಕ ಪ್ರದೇಶಗಳು ಜಲಾೃತಗೊಂಡಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಸ್ತೆಗಳು, ತಗ್ಗು ಪ್ರದೇಶಗಳಲ್ಲಿ ಆಳೆತ್ತರಕ್ಕೆ ನೀರು ನಿಂತುಕೊಂಡಿದೆ. ಅಹಮ್ಮದಾಬಾದ್‌ನ ಅಪಾರ್ಟ್‌ಮೆಂಟ್ ಏರಿಯಾ ಕೂಡ ಮುಳುಗಡೆಯಾಗಿದೆ. ಇಳಿದು ಹೋಗುವಂತಿಲ್ಲ. ಕಾರಣ ಸುತ್ತಲೂ ನೀರು. ಹಾಗಂತೆ ತಿನ್ನದೇ ಇರಲು ಆಗಲ್ಲ. ಹೀಗಾಗಿ ಆನ್‌ಲೈನ್ ಮೂಲಕ ಆಹಾರ ಆರ್ಡರ್ ಮಾಡಲಾಗಿದೆ.
ಡೆಲಿವರಿ ಬಾಯ್ ಕಣ್ಣೀರಿಗೆ ಕರಗಿದ ಕಟುಕರ ಮನಸ್ಸು, ದೋಚಿದ ವಸ್ತುಗಳಿಂದ ಮಾಡಿದ್ದೇನು?
ಕೆಲವೇ ಹೊತ್ತಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ ಪಾರ್ಸೆಲ್ ಹಿಡಿದು ಈ ಪ್ರದೇಶಕ್ಕ ಆಗಮಿಸಿದ್ದಾನೆ. ಆದರೆ ಎಲ್ಲಿ ನೋಡಿದರೂ ನೀರು. ಮೊಣಕಾಲಿನ ಮೇಲೆ ನೀರು ನಿಂತುಕೊಂಡಿದೆ. ಈ ಜಲಾವೃತಗೊಂಡಿರುವ ಸ್ಥಳದಲ್ಲಿ ಪಾರ್ಸೆಲ್ ಹಿಡಿದು ನಡೆದುಕೊಂಡು ಸಾಗಿಬಂದ ಡೆಲಿವರಿ ಬಾಯ್ ಬುಕಿಂಗ್ ಮಾಡಿದ ಗ್ರಾಹಕರಿಗೆ ನೀಡಿದ್ದಾನೆ. ಈ ವಿಡಿಯೋವನ್ನು ವಿಕುಂಜ್ ಶಾ ಹಂಚಿಕೊಂಡಿದ್ದಾರೆ. ಡೆಲಿವರಿ ಬಾಯ್ ಸಾಹಸ ಹಾಗೂ ಕರ್ತವ್ಯ, ನಿಷ್ಠೆ, ಬದ್ಧತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ವಿಡಿಯೋ ವೈರಲ್ ಆಗುತ್ತದ್ದಂತೆ ಜೊಮ್ಯಾಟೋ ಸ್ಪಂದಿಸಿದ. ಈ ಸೂಪರ್ ಹೀರೋ ಎಂದು ಕರೆದಿರುವ ಜೊಮ್ಯಾಟೋ ಡೆಲಿವರಿ ಬಾಯ್‌ಗೆ ಭರ್ಜರಿ ಉಡುಗೊರೆ ಘೋಷಿಸಿದೆ. ಟ್ವೀಟ್ ಮೂಲಕ ಈ ಮಾಹಿತಿಯನ್ನು ಜೋಮ್ಯಾಟೋ ಹಂಚಿಕೊಂಡಿದೆ. ಈ ವಿಡಿಯೋ ಹಂಚಿಕೊಂಡಿರುವುದಕ್ಕೆ ಧನ್ಯವಾದಗಳು. ಅಪಾಯಾಕಾರಿ ಸಂದರ್ಭ, ಹವಾಮಾನ ವೈಪರಿತ್ಯದಲ್ಲೂ ಪಾರ್ಸೆಲ್ ತಲುಪಿಸಿದ ಸೂಪರ್ ಹೀರೋ. ಈ ಮೂಲಕ ಈ ಡೆಲಿವರಿ ಬಾಯ್‌ಗೆ ನಮ್ಮ ಕಡೆಯಿಂದ ಅರ್ಹವಾದ ಉಡುಗೊರೆಯೊಂದು ಕಾದಿದೆ ಎಂದು ಜೊಮ್ಯಾಟೋ ಹೇಳಿದೆ.
ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಈ ರೀತಿಯ ಉದ್ಯೋಗಿ ಕುರಿತು ಕಾಳಜಿ ವಹಿಸಿ. ಶ್ರದ್ಧ, ಬದ್ಧತೆ, ಪರಿಶ್ರಮದ ಮೂಲಕ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಉಡುಗೊರೆ ಮೂಲಕ ನೆರವು ನೀಡಿ ಎಂದು ಹಲವರು ಸೂಚಿಸಿದ್ದಾರೆ.
Viral Post : ಮಳೆಯಲ್ಲಿ ಜೊಮಾಟೋ ಡೆಲಿವರಿ ಬಾಯ್ಸ್ AI ಡಾನ್ಸ್ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ