
ನವದೆಹಲಿ (ಜು.13) ದೆಹಲಿ ವಿಶ್ವವಿದ್ಯಾಲಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದ ತ್ರಿಪುರಾ ಮೂಲದ 19 ವರ್ಷದ ವಿದ್ಯಾರ್ಥಿನಿ ಸ್ನೇಹಾ ದೇಬನಾಥ್ ನಾಪತ್ತೆಯಾಗಿ 6 ದಿನಗಳು ಉರುಳಿದೆ. ವಿದ್ಯಾರ್ಥಿನಿ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಇದರ ನಡುವೆ ಈ ಪ್ರಕರಣ ಸಂಬಂಧ ಮಹತ್ವದ ಸುಳಿವು ಲಭ್ಯವಾಗಿದೆ. ಸ್ನೇಹಾ ದೇಬನಾಥ್ ಕೊಠಡಿಯಿಂದ ಆಕೆಯ ಕೈಬರಹದ ನೋಟ್ ಪತ್ತೆಯಾಗಿದೆ. ಈ ಪತ್ರ ಕುಟುಂಬಕ್ಕೆ ಆಘಾತ ನೀಡಿದೆ. ಪತ್ರದಲ್ಲಿ ನಾನು ವಿಫಲಗೊಂಡಿದ್ದೇನೆ. ಎಲ್ಲರಿಗೂ ಭಾರವಾಗಿ ಬದಕಲು ಸಾಧ್ಯವಾಗುತ್ತಿಲ್ಲ. ಜೀವನ ಅಂತ್ಯಗೊಳಿಸುವ ನಿರ್ಧಾರ ಮಾಡಿದ್ದೇನೆ ಎಂದು ಬರೆದಿರುವುದಾಗಿ ವರದಿಯಾಗಿದೆ.
ಇದು ನನ್ನ ನಿರ್ಧಾರ, ಜೀವನದಲ್ಲಿ ನಾನು ಸಂಪೂರ್ಣವಾಗಿ ವಿಫಲಳಾಗಿದ್ದೇನೆ. ಈ ರೀತಿ ಬದುಕುವುದು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಸಿಗ್ನೇಚರ್ ಸೇತುವೆಯಲ್ಲಿ ಬದುಕು ಅಂತ್ಯಗೊಳಿಸುವುದಾಗಿ ನೋಟ್‌ನಲ್ಲಿ ಬರೆದಿರುವುದಾಗಿ ವರದಿಯಾಗಿದೆ. ಈ ಪತ್ರ ಸ್ನೇಹಾ ಕೊಠಡಿಯಿಂದ ಲಭ್ಯವಾಗಿದೆ. ಇದೀಗ ಈ ಪ್ರಕರಣದಲ್ಲಿ ಸ್ನೇಹಾ ರಾಣಾದ ಕುರಿತು ಕೆಲ ಸುಳಿವು ಲಭ್ಯವಾಗಿದೆ. ಆದರೆ ಇದನ್ನು ಪರಿಶೀಲಿಸಲು ಸಿಗ್ನೇಚರ್ ಸೇತುವೆ ಬಳಿರುವ ಬಹುತೇಕ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಇದು ಪೊಲೀಸರಿಗೆ ತೀವ್ರ ಹಿನ್ನಡೆ ತಂದಿದೆ.
ತ್ರಿಪುರದ 19 ವರ್ಷದ ವಿದ್ಯಾರ್ಥಿನಿ ಸ್ನೇಹಾ, ಕೊನೆಯದಾಗಿ ಜುಲೈ 7 ರಂದು ಸಂಪರ್ಕದಲ್ಲಿದ್ದರು ಮತ್ತು ಅಂದಿನಿಂದ ನಾಪತ್ತೆಯಾಗಿದ್ದಾರೆ. ಎನ್‌ಡಿಟಿವಿ ವರದಿ ಮಾಡಿರುವಂತೆ, ಟಿಪ್ಪಣಿಯ ಆವಿಷ್ಕಾರವು ಭಯವನ್ನು ಹೆಚ್ಚಿಸಿದೆ ಮತ್ತು ನಡೆಯುತ್ತಿರುವ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಸ್ನೇಹಾ ಭಾವನಾತ್ಮಕವಾಗಿ ಖಿನ್ನತೆಗೆ ಒಳಗಾಗಿದ್ದರು ಮತ್ತು ಅವರಿಗೆ ಕೆಲವು ಆತಂಕಕಾರಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ ಎಂದು ದೆಹಲಿ ಪೊಲೀಸರು ವರದಿ ಮಾಡಿದ್ದಾರೆ.
ಸ್ನೇಹಾ ಕೋಣೆಯಲ್ಲಿ ಪತ್ತೆಯಾದ ಪತ್ರದ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ
ಸ್ನೇಹಾ ದೇಬ್‌ನಾಥ್ ಅವರ 24 ವರ್ಷದ ಸಹೋದರಿ ಸ್ನೇಹಾ ಅವರ ಕೋಣೆಯಲ್ಲಿ ಪತ್ತೆಯಾದ ಟಿಪ್ಪಣಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಟಿಪ್ಪಣಿಯಲ್ಲಿರುವ ಸಂದೇಶವು ತುಂಬಾ ಚಿಕ್ಕದಾಗಿದೆ ಮತ್ತು ಅಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. ಬದುಕು ಅಂತ್ಯಗೊಳಿಸುವ ಪತ್ರ ಕೇವಲ ನಾಲ್ಕು ಸಾಲುಗಳಾಗಿರಲು ಸಾಧ್ಯವಿಲ್ಲ. ಅವಳನ್ನು ಏನು ತೊಂದರೆಗೊಳಿಸುತ್ತಿದೆ ಎಂಬುದರ ಉಲ್ಲೇಖವಿಲ್ಲ. ಯಾವುದೇ ವಿವರವಿಲ್ಲ. ಕೇವಲ ಒಂದು ಸ್ಥಳ, ಸಿಗ್ನೇಚರ್ ಸೇತುವೆ. ಇದಕ್ಕೆ ಯಾವುದೇ ಅರ್ಥವಿಲ್ಲ," ಎಂದು ಅವರು ಮೆಹ್ರೌಲಿ ಪೊಲೀಸ್ ಠಾಣೆಯ ಹೊರಗೆ ವರದಿಗಾರರಿಗೆ ತಿಳಿಸಿದರು.
'ಅವಳು ಚಿಕ್ಕವಳು, ಪ್ರತಿಭಾವಂತಳು
ಸ್ನೇಹಾ ಅವರ ಸಹೋದರಿ ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ನೇಹಾ ಪ್ರತಿಭಾನ್ವಿತ ವಿದ್ಯಾರ್ಥಿನಿ. ಅತಿಯಾಗಿ ಸಾಧನೆ ಮಾಡುವವರು ಎಂದು ಬಣ್ಣಿಸಿದ್ದಾರೆ. ಯಾರಾದರೂ ಅವಳ ಲಾಭ ಪಡೆದಿರಬಹುದು, ಆಕೆಯನ್ನು ಮೋಸ ಮಾಡಿರುವ ಸಾಧ್ಯತೆ ಇದೆ ಎಂದಿದ್ದಾರೆ. ಅವಳಿಗೆ ಕೇವಲ 19 ವರ್ಷ. ತುಂಬಾ ಬುದ್ಧಿವಂತೆ. ಆದರೆ ಇನ್ನೂ ತುಂಬಾ ಚಿಕ್ಕವಳು. ಯಾರಾದರೂ ಅವಳನ್ನು ಮೋಸಗೊಳಿಸಿರಬಹುದು. ಸಿಕ್ಕಿರುವ ನೋಟ್‌ನಲ್ಲಿ ನಿರ್ದಿಷ್ಟ ಸ್ಥಳವಿತ್ತು ಅದು ಸಿಗ್ನೇಚರ್ ಸೇತುವೆ. ಸ್ಪಷ್ಟವಾಗಿ ಬರೆಯಲಾಗಿದೆ. ಅವಳು ನಿಜವಾಗಿಯೂ ತನ್ನ ಜೀವವನ್ನು ತೆಗೆದುಕೊಳ್ಳಲು ಬಯಸಿದರೆ, 60 ಕ್ಯಾಮೆರಾಗಳು ಕೆಲಸ ಮಾಡದ ಸ್ಥಳಕ್ಕೆ ಏಕೆ ಹೋಗಬೇಕು? ಏನೋ ಸರಿಯಿಲ್ಲ.”
ಸಿಗ್ನೇಚರ್ ಸೇತುವೆಗೆ ಏಕೆ ಹೋಗಬೇಕು?'
ಸ್ನೇಹಾಳನ್ನು ಸುರಕ್ಷತಾ ಕಾಳಜಿಗಳು ಮತ್ತು ಕಳಪೆ ಕಣ್ಗಾವಲಿಗೆ ಹೆಸರುವಾಸಿಯಾದ ಸ್ಥಳದಲ್ಲಿ ಇಳಿಸಲಾಗಿದೆ ಎಂಬ ಅಂಶದ ಬಗ್ಗೆ ಕುಟುಂಬವು ತೀವ್ರವಾಗಿ ಸಂಶಯ ವ್ಯಕ್ತಪಡಿಸಿದೆ. "ಯಾರಾದರೂ ಸಾಯಲು ಬಯಸಿದರೆ, ಹತ್ತಿರದಲ್ಲಿ ಅದನ್ನು ಮಾಡಲು ಹಲವು ಮಾರ್ಗಗಳಿವೆ. ಎಲ್ಲಾ ಸ್ಥಳಗಳಲ್ಲಿ, ಸಿಗ್ನೇಚರ್ ಸೇತುವೆಗೆ ಟ್ಯಾಕ್ಸಿ ತೆಗೆದುಕೊಂಡು ಏಕೆ ಹೋಗಬೇಕು? ಮತ್ತು ಅಲ್ಲಿ ಯಾವುದೇ ಕೆಲಸ ಮಾಡುವ ಸಿಸಿಟಿವಿ ಕ್ಯಾಮೆರಾಗಳಿಲ್ಲವೇ? ಅದು ಸಾಮಾನ್ಯವಲ್ಲ ಎಂದು ಸಹೋದರಿ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ