
ನವದೆಹಲಿ (ಜು.13) ರಾಷ್ಟ್ರಪತಿ ದ್ರೌಪತಿ ಮುರ್ಮು ಬಿಜೆಪಿಯ ನಾಲ್ವರು ಪ್ರಮುಖರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿದ್ದಾರೆ. ಮುಂಬೈ ಬ್ಲಾಸ್ಟ್, ಮುಂಬೈ ಉಗ್ರ ದಾಳಿ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ಉಗ್ರರಿಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ವಕೀಲ ಉಜ್ವಲ್ ನಿಖಂ, ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗಾಲ, ಇತಿಹಾಸ ತಜ್ಞೆ ಮೀನಾಕ್ಷಿ ಹಾಗೂ ಶಾಲಾ ಶಿಕ್ಷಕ, ಬಿಜೆಪಿ ಸದಸ್ಯ ಸದಾನಂದ ಮೇಷ್ಟ್ರು ಇದೀಗ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ನಾಲ್ವರ ಹೆಸರನ್ನು ರಾಷ್ಟ್ರಪತಿ ಮುರ್ಮು ನಾಮನಿರ್ದೇಶನ ಮಾಡಿದ್ದಾರೆ. ಈ ಪೈಕಿ ಒಬ್ಬೊಬ್ಬ ಹೋರಾಟ ಮಾದರಿಯಾಗಿದೆ. ಇಷ್ಟೇ ಅಲ್ಲ ಒಬ್ಬೊಬ್ಬರ ಬದಕು ಸ್ಪೂರ್ತಿಯಾಗಿದೆ. ಈ ಪೈಕಿ ಜೀವಂತ ಹುತಾತ್ಮ ಎಂದೇ ಗುರುತಿಸಿಕೊಂಡಿರುವ ಸದಾನಂದ ಮೇಷ್ಟ್ರ ಕಣ್ಣೀರ ಬದುಕು ದಾಳಿ ಕರಾಳ ಮುಖ ತೆರೆದಿಡುತ್ತಿದೆ.
1994ರ ಕಣ್ಣೂರು ದಾಳಿಯಲ್ಲಿ ಕಾಲು ಕಳೆದುಕೊಂಡ ಮೇಷ್ಟ್ರು
ಸದಾನಂದ ಮೇಷ್ಟ್ರು ಕೇರಳ ಮೂಲದವರು. ತ್ರಿಶೂರ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಸದಾನಂದ ಮೇಷ್ಟ್ರು 1994ರಲ್ಲಿ ನಡೆದ ಕಣ್ಣೂರು ದಾಳಿ ಹಾಗೂ ಗಲಭೆಯಲ್ಲಿ ಸದಾನಂದ ಮೇಷ್ಟ್ರು ತಮ್ಮ ಎರಡು ಕಾಲು ಕಳೆದುಕೊಂಡರು. ಇದು ಕೇವಲ ದಾಳಿಯಲ್ಲಿ ಅಚಾನಕ್ಕಾಗಿ ಕಾಲು ಕಳೆದುಕೊಂಡಿದ್ದಲ್ಲ. ಆರ್‌ಎಸ್ಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸದಾನಂದ ಮೇಷ್ಟ್ರು ಮೇಲೆ ಕೇರಳ ಸಿಪಿಎಂ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಕಾಲು ಕಳೆದುಕೊಂಡಿದ್ದಾರೆ.
ಎರಡು ಕಾಲು ಕತ್ತರಿಸಿದ್ದ ಆರೋಪಿಗಳು
ಸದಾನಂದ ಮೇಷ್ಟ್ರು ಆರ್‌ಎಸ್‌ಎಸ್ ಸದಸ್ಯನಾಗಿದ್ದ ಕಾರಣ ಸೈದ್ದಾಂತಿಕವಾಗಿ ಹಲವರ ವಿರೋದ ಕಟ್ಟಿಕೊಳ್ಳಬೇಕಾಯಿತು. ತಮ್ಮ ವೃತ್ತಿಯಲ್ಲಿ ಯಾವತ್ತೂ ಆರ್‌ಎಸ್ಎಸ್ ವಿಚಾರಧಾರೆಯನ್ನು ಎಳೆದು ತಂದವರಲ್ಲ. ಆದರೆ ಆರ್‌ಎಸ್ಎಸ್ ಕಾರ್ಯಕರ್ತರ ಮೇಲೆ ನಿರಂತರ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಸದಾನಂದ ಮೇಷ್ಟ್ರ ಮೇಲೂ ದಾಳಿ ನಡೆದಿತ್ತು. ಸದಾನಂದ ಮೇಷ್ಟ್ರ ಎರಡೂ ಕಾಲನ್ನು ಕತ್ತರಿಸಿ ಎಸೆಯಲಾಗಿತ್ತು. ಅತ್ಯಂತ ಕ್ರೂರ ದಾಳಿಯಲ್ಲಿ ಸದಾನಂದ ಮೇಷ್ಟ್ರು ಜೀವ ಉಳಿದಿದ್ದೆ ಪವಾಡ.
ಮೇಷ್ಟ್ರಿಗೆ ರಾಜ್ಯಸಭೆ ಗೌರವ
ಆಸ್ಪತ್ರೆಯಲ್ಲಿ ಸುದೀರ್ಘ ವರ್ಷಗಳ ಕಾಲ ಚಿಕಿತ್ಸೆ ಪಡೆದ ಸದಾನಂದ ಮೇಷ್ಟ್ರು ಚೇತರಿಸಿಕೊಂಡರು. ಆದರೆ ಎರಡೂ ಕಾಲು ಇರಲಿಲ್ಲ. ಹೀಗಾಗಿ ಶಿಕ್ಷಕ ವೃತ್ತಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಿಜೆಪಿಯ ಕಾರ್ಯಕರ್ತನಾಗಿ, ಆರ್‌ಎಸ್ಎಸ್ ಸದಸ್ಯನಾಗಿ ಕೆಲಸ ಮುಂದುವರಿಸಿದ್ದರು. ಹಂತ ಹಂತವಾಗಿ ಕೇರಳದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ, ಆರ್‌ಎಸ್ಎಸ್ ತಳಮಟ್ಟದಲ್ಲಿ ಬೇರೂರುವಂತೆ ಮಾಡಲು ಸದಾನಂದ ಮೇಷ್ಟ್ರು ನಿರಂತರ ಶ್ರಮವಹಿಸಿದ್ದಾರೆ. ಇದೀಗ ಕೇರಳ ಬಿಜೆಪಿಯ ಉಪಾಧ್ಯಕ್ಷ ಜವಾಬ್ದಾರಿ ನಿರ್ವಹಿಸುತ್ತಿರುವ ಸದಮಾಂದ ಮೇಷ್ಟ್ರಿಗೆ ಬಿಜಿಪಿ ರಾಜ್ಯಸಭೆ ಸ್ಥಾನ ನೀಡಿದೆ.
ಅಧಿಕೃತ ಘೋಷಣೆಗೂ ಮೊದಲು ಕರೆ ಮಾಡಿದ್ದ ಪ್ರಧಾನಿ ಮೋದಿ
ಸದಾನಂದ ಮೇಷ್ಟ್ರು ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ಅಧಿಕೃತ ಘೋಷಣೆ ಮೊದಲೇ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಸದಾನಂದ ಮೇಷ್ಟ್ರಿಗೆ ಕರೆ ಮಾಡಿ ಮಾತನಾಡಿದ್ದರು. ಕೇರಳ ಅಭಿವೃದ್ಧಿಯ ಪಥದಲ್ಲಿ ಸಾಗಬೇಕು. ಕೇರಳದಲ್ಲಿ ರಾಜಕೀಯ ದ್ವೇಷ, ಹಿಂಸಾಚಾರಗಳು ನಿಲ್ಲಬೇಕು. ಕೇರಳ ಭಾರತದ ಭೂಪಟದಲ್ಲಿ ಮತ್ತೆ ನಳನಳಿಸುವಂತೆ ಮಾಡಲು ನಿಮ್ಮ ಸಹಕಾರ, ಕೊಡುಗೆ ಅಗತ್ಯ ಎಂದು ಪ್ರಧಾನಿ ಮೋದಿ ಕರೆ ಮಾಡಿ ಹೇಳಿದ್ದರು ಎಂದು ಸದಾನಂದ ಮೇಷ್ಟ್ರು ಹೇಳಿದ್ದಾರೆ. ಇಷ್ಟೇ ಅಲ್ಲ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುತ್ತಿರುವ ಈ ಸಂದರ್ಭದಲ್ಲಿ ಅಭಿನಂದನೆ ತಿಳಿಸಿದರು ಎಂದಿದ್ದಾರೆ. ಕೇರಳ ಹಿಂಸೆ ಹಾಗೂ ಅತೀಯಾದ ರಾಜಕೀಯ ದ್ವೇಷಗಳಿಂದ ಹೊರಬರಬೇಕು ಎಂದು ಸದಾನಂದ ಮೇಷ್ಟ್ರು ಹೇಳಿದ್ಾದರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ