
ಬೆಂಗಳೂರು (ಜು.13): ಆಧಾರ್ ಕಾರ್ಡ್ ಲಿಸ್ಟ್‌ನಲ್ಲಿ ಸತ್ತವರು ಹಾಗೂ ತಪ್ಪಾಗಿ ಹೆಸರು ನಮೂದಾಗಿರುವವರ ಕಾರ್ಡ್‌ಗಳನ್ನು ತೆಗೆದುಹಾಕಲು ಲಕ್ಷಾಂತರ ಆಧಾರ್ ಕಾರ್ಡ್‌ಗಳನ್ನು UIDAI ರದ್ದುಗೊಳಿಸಿದೆ. ನಿಮ್ಮ ಆಧಾರ್ ಕಾರ್ಡ್ ಕೂಡ ರದ್ದಾಗಿದ್ದರೆ ನೀವು ಕೂಡಲೇ ಈ ವಿಧಾನ ಅನುಸರಿಸಿ ರಿ-ಆಕ್ಟಿವೇಟ್ ಮಾಡಿಕೊಳ್ಳಿ.
ದೇಶದಲ್ಲಿ ಆಧಾರ್ ಕಾರ್ಡ್ ಜಾರಿಗೆ ಬಂದ ಬಳಿಕ ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬೇಕು. ಆದರೆ, ಹೀಗೆ ಯಾವುದೇ ಅಪ್ಡೇಟ್ ಮಾಡದಿದ್ದರೆ ಅಥವಾ ಆಧಾರ್ ಕಾರ್ಡ್ ಅನ್ನು ಯಾವುದೇ ಸರ್ಕಾರಿ ಯೋಜನೆಗಳಿಗೆ ಬಳಕೆ ಮಾಡದಿದ್ದರೆ ಅಂಥವರ ಆಧಾರ್ ಕಾರ್ಡ್ ಅದನ್ನು ಡಿಆಕ್ಟಿವೇಟ್ ಮಾಡಲಾಗಿರುತ್ತದೆ. ಇನ್ನು ಸತ್ತವರ ಹೆಸರುಗಳನ್ನು ತೆಗೆಯುವ ಉದ್ದೇಶದಿಂದ ಮತ್ತು ತಪ್ಪಾದ ಹೆಸರಿನ ತಿದ್ದುಪಡಿ ಉದ್ದೇಶಕ್ಕಾಗಿಯೂ ಆಧಾರ್ ಕಾರ್ಡ್ ಅನ್ನು ರದ್ದು ಮಾಡಲಾಗಿರುತ್ತದೆ. ಹಾಗಾದರೆ, ನಿಮ್ಮ ಆಧಾರ್ ಕಾರ್ಡ್‌ಗಳನ್ನು ಹೇಗೆ ಪುನಃ ಸಕ್ರಿಯ ಮಾಡಿಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ಸಕ್ರಿಯಗೊಳಿಸುವ ವಿಧಾನಗಳು:
ಅರ್ಜಿ ಸಲ್ಲಿಸಿ: ಆಧಾರ್ ಸಂಖ್ಯೆ ಹೊಂದಿರುವವರು ಆಧಾರ್ ಮರುಸಕ್ರಿಯಗೊಳಿಸುವಿಕೆಗಾಗಿ ಅರ್ಜಿಯನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಹತ್ತಿರದ ಪ್ರಾದೇಶಿಕ ಕಚೇರಿ/ರಾಜ್ಯ ಕಚೇರಿಗೆ ಅಂಚೆ, ಇಮೇಲ್ ಅಥವಾ ವೈಯಕ್ತಿಕವಾಗಿ ಸಲ್ಲಿಸಬೇಕು.
ಬಯೋಮೆಟ್ರಿಕ್ ಮಾಹಿತಿ ಕೊಡಿ: ನೀವು ಭರ್ತಿ ಮಾಡಿ ಕಳುಹಿಸಿದ ಅರ್ಜಿಯನ್ನು , ಸಂಬಂಧಪಟ್ಟ ಕಚೇರಿಯು ಅರ್ಜಿಯನ್ನು ಪರಿಶೀಲಿಸುತ್ತದೆ, ನಿಮಗೆ ಎರಡು ವಾರಗಳಲ್ಲಿ, ಆಧಾರ್ ಹೊಂದಿರುವವರನ್ನು ಆಧಾರ್ ಕೇಂದ್ರಕ್ಕೆ ಕರೆ ಮಾಡಿ ಸಂಪೂರ್ಣ ಬಯೋಮೆಟ್ರಿಕ್ ಮಾಹಿತಿಯನ್ನು (ಮುಖ, ಐರಿಸ್, ಬೆರಳಚ್ಚುಗಳು) ಸಲ್ಲಿಸಲು ಕೇಳುತ್ತದೆ.
ಅರ್ಜಿ ನಿರ್ಧಾರ: ಬಯೋಮೆಟ್ರಿಕ್ ಮಾಹಿತಿ ಕೊಟ್ಟ 30 ದಿನದ ಒಳಗೆ ಅರ್ಜಿ ಬಗ್ಗೆ ನಿರ್ಧಾರ ಆಗುತ್ತದೆ. ಆಗ SMS ಸಂದೇಶದ ಮೂಲಕ ಅಥವಾ 'myAadhaar' ಪೋರ್ಟಲ್‌ನಲ್ಲಿ ನೀವು ಲಾಗಿನ್ ಆಗಿ ಅರ್ಜಿಯ ಸ್ಥಿತಿಯನ್ನು ತಿಳಿಯಬಹುದು.
ಜನನ-ಮರಣ ನೋಂದಣಿಗೆ ಮಾಹಿತಿ: ನೀವು ಅರ್ಜಿ ಸಲ್ಲಿಸಿ ಎಲ್ಲ ಮಾಹಿತಿಗಳನ್ನು ಒದಗಿಸಿಬಂದ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಪುನಃ ಸಕ್ರಿಯಗೊಳಿಸಲಾಗುತ್ತದೆ. ನಂತರ, ನಿಮ್ಮ ಮಾಹಿತಿಯನ್ನು ಜನನ ಮತ್ತು ಮರಣ ನೋಂದಣಿ ಅಧಿಕಾರಿಗಳು, ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಆಧಾರ್ ಹೊಂದಿರುವವರೊಂದಿಗೆ ಹಂಚಿಕೊಳ್ಳಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ