ಶಿಕ್ಷಕಿಯೊಬ್ಬರು ಎತ್ತರ ಅಳೆಯುವ ಹೊಸ ವಿಧಾನ ಕಂಡು ಹಿಡಿದಿದ್ದಾರೆ. ಗೋಡೆ ಬದಿ ನಿಲ್ಲಿಸಿ ಸ್ಕೇಲ್ ಹಿಡಿದು ಅಳೆಯುವ ಬದಲು ಸ್ಪಷ್ಟವಾಗಿ ಎತ್ತರ ಅಳೆಯುವ ಹೊಸ ವಿಧಾನ ಟೀಚರ್ ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ. ಈ ಹೊಸ ವಿಧಾನ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ದೆಹಲಿ(ನ.13) ನಿಮ್ಮ ಎತ್ತರ ಎಷ್ಟು? ಸಾಮಾನ್ಯವಾಗಿ ಅಳೆತೆ ಮಾಡಲು ಟೇಪ್, ಸ್ಕೇಲ್ ಸೇರಿದಂತೆ ಇತರ ವಸ್ತುಗಳ ಮೂಲಕ ಮಾಡಲಾಗುತ್ತದೆ. ಇನ್ನು ಹೋಲಿಕೆ ಮಾಡುತ್ತಿದ್ದರೆ ಇಬ್ಬರನ್ನು ನಿಲ್ಲಿಸಿ ನೋಡಲಾಗುತ್ತದೆ. ಆದರೆ ದೆಹಲಿ ಶಿಕ್ಷಕಿ ಹೊಸ ವಿಧಾನದ ಮೂಲಕ ಅಳತೆ ಮಾಡಿದ್ದಾರೆ. ಶಾಲಾ ತರಗತಿಯಲ್ಲಿ ಮಕ್ಕಗಳಿಗೆ ಹೊಸ ವಿಧಾನ ಪರಚಿಯಿಸಿದ್ದಾರೆ. ಈ ವಿಧಾನವನ್ನು ಪರೀಕ್ಷಿಸಿ ನೋಡಿದ್ದಾರೆ. ಎಲ್ಲಾ ಮಕ್ಕಳ ಎತ್ತರ ಎಷ್ಟು ಅನ್ನೋದನ್ನು ನೋಡಿದ್ದಾರೆ. ದೆಹಲಿ ಟೀಚರ್ ಹೊಸ ವಿಧಾನ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕೆಲವರು ಮನೆಯಲ್ಲಿ ಈ ವಿಧಾನ ಪ್ರಯತ್ನಿಸಿ ತಮ್ಮ ಎತ್ತರ ಎಷ್ಟು ಅನ್ನೋದನ್ನು ಕಂಡುಕೊಳ್ಳುತ್ತಿದ್ದಾರೆ.
ಮಕ್ಕಳಲ್ಲಿ ಕ್ರಿಯಾತ್ಮಕತೆ, ಕೌಶಲ್ಯ ಬೆಳೆಸುವ ನಿಟ್ಟನನಲ್ಲಿ ದೆಹಲಿಯ ಟೀಚರ್ ಸ್ವಪ್ನ ಭಾಟಿಯಾ ಶಾಲಾ ತರಗತಿಯಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ. ಕೈಗಳ ಅಭ್ಯಾಸದ ಮೂಲಕ ಎತ್ತರ ಅಳೆಯುವ ವಿಧಾನವನ್ನು ಟೀಚರ್ ಪರಿಚಯಿಸಿದ್ದಾರೆ. ಈ ಮೂಲಕ ಶಾಲಾ ತರಗತಿಯನ್ನು ಮತ್ತಷ್ಟು ಆಸಕ್ತಿಕರ ಮಾಡಿದ್ದಾರೆ.
undefined
ಆನ್‌ಲೈನ್ ಕ್ಲಾಸ್ ನಡುವೆ ಟೀಚರ್‌ಗೆ ಪ್ರಪೋಸ್ ಮಾಡಿದ ವಿದ್ಯಾರ್ಥಿ, ಶಿಕ್ಷಕಿ ಉತ್ತರಕ್ಕೆ ನೆಟ್ಟಿಗರ ಶ್ಲಾಘನೆ!
ಗೋಡೆ ಬದಿ ನಿಂತು ಒಂದು ಕೈಯನ್ನು ನೆಲಕ್ಕೆ ತಾಗಿಸಬೇಕು, ಮತ್ತೊಂದು ಕೈಯನ್ನು ಗೋಡೆ ಮೇಲ್ಬಾಗಕ್ಕೆ ಇಡಬೇಕು. ಉದಾಹರಣೆಗೆ ಬಲಭಾಗದ ಕೈಯನ್ನು ನೆಲಕ್ಕೆ ತಾಗಿಸಿದರೆ, ಎಢಭಾಗದ ಕೈಯನ್ನು ಗೋಡೆಯ ಮೇಲ್ಬಾಗದಲ್ಲಿ ಇಡಬೇಕು. ಎಡಭಾಗದ ಕೈ ಎಷ್ಟು ಎತ್ತರವರೆಗೆ ಇದೆಯೋ ಅದೇ ನಿಮ್ಮ ಎತ್ತರ. ಇಲ್ಲಿ ಮಾರ್ಕ್ ಮಾಡಿದರೆ ಸಾಕು. ಒಬ್ಬ ವ್ಯಕ್ತಿಯ ಸ್ಪಷ್ಟ ಎತ್ತರ ಅಳೆಯಲು ಸಾಧ್ಯವಾಗುತ್ತದೆ. ಗೋಡೆ ಬದಿಯಲ್ಲಿ ನೇರವಾಗಿ ನಿಲ್ಲಿಸಿ ಅಳೆಯುವಾಗ ಕೂದಲು, ಅಥವಾ ತಲೆಯ ಭಾಗದಲ್ಲಿ ಎತ್ತರವನ್ನು ಸ್ಪಷ್ಟವಾಗಿ ಗುರುತಿಸಲು ಸಾದ್ಯವಾಗುವುದಿಲ್ಲ. ಆದರೆ ಸ್ವಪ್ನ ಭಾಟಿಯಾ ಹೊಸ ವಿಧಾನದ ಮೂಲಕ ಯಾವುದೇ ಗೊಂದಲ ಇರುವುದಿಲ್ಲ.
ಮಕ್ಕಳನ್ನು ಕರೆದು ತಮ್ಮ ಎತ್ತರ ಅಳೆಯುವ ಹೊಸ ವಿಧಾನವನ್ನು ಪರೀಕ್ಷಿಸಿದ್ದಾರೆ. ಎಲ್ಲಾ ಮಕ್ಕಳ ಎತ್ತರ ಸ್ಪಷ್ಟವಾಗಿದೆ. ಈ ವಿಡಿಯೋ ಇನ್‌ಸ್ಟಾಗ್ರಾಂ ಮೂಲಕ ಭಾರಿ ಹರಿದಾಡಿದೆ. ಇದೇ ವೇಳೆ ಹಲವರು ಕಮೆಂಟ್ ಮಾಡಿದ್ದಾರೆ. ಟೀಚರ್ ಈ ಲೆವಲ್‌ಗೆ ಭಿನ್ನವಾಗಿ ಯೋಚಿಸಿದ್ದಾರೆ ಅನ್ನೋದು ಸಂತಸವಾಗುತ್ತಿದೆ. ಈ ರೀತಿಯ ಹೊಸ ವಿಧಾನ ನಮಗೆ ತಿಳಿದಿರಲಿಲ್ಲ. ದೇಹದ ಉದ್ದ ಅಳತೆ ಮಾಡಲು ಆಚಾರ್ಯ ಚರಕ ವಿಧಾನ ಅನುಸರಿಸಲಾಗುತ್ತಿತ್ತು. ಇದೇ ವಿಧಾನದ ಸುಧಾರಿತ ವರ್ಶನ್ ಇದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ಇದು ಎಲ್ಲರಿಗೂ ಅನ್ವಯಿಸಲು ಸಾಧ್ಯವಾಗುವುದಿಲ್ಲ. ಕೆಲವರ ಕೈಗಳು ಉದ್ದವಾಗಿರುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.
ಒಂದಷ್ಟು ಮಂದಿ ಈ ವಿಡಿಯೋ ನೋಡಿದ ಬಳಿಕ ಮನೆಯಲ್ಲಿ ತಮ್ಮ ತಮ್ಮ ಎತ್ತರ ಅಳೆಯುವ ಪ್ರಯತ್ನ ಮಾಡಿದ್ದಾರೆ. ಬಳಿಕ ಕಮೆಂಟ್ ಮೂಲಕ ಈ ವಿಧಾನದಲ್ಲಿ ನಮ್ಮ ಎತ್ತರ ಎಷ್ಟು ಅನ್ನೋದು ಸ್ಪಷ್ಟವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಚಿಕ್ಕವರಿದ್ದಾಗ ಅಜ್ಜಿ ಈ ರೀತಿಯ ವಿಧಾನ ಹೇಳಿದ್ದರು. ಆದರೆ ಇದೀಗ ವಿಡಿಯೋ ನೋಡಿ ಮತ್ತೊಮ್ಮೆ ಪ್ರಯತ್ನಿಸಿದೆ. ಇದೀಗ ಎತ್ತರ ಸ್ಪಷ್ಟ ಎಂದು ಕಮೆಂಟ್ ಮಾಡಿದ್ದಾರೆ.