ದಿಲ್ಲಿ, ಸಿಕ್ಕಿಂ ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ವರ್ಕ್‌ ಫ್ರಂ ಹೋಂ! ಈ ನಿರ್ಧಾರ ತೆಗೆದುಕೊಂಡದ್ದು ಯಾಕೆ?

Kannadaprabha News   | Kannada Prabha
Published : May 15, 2026, 05:34 AM IST
Delhi Sikkim government employees to work from home 2 days a week why

ಸಾರಾಂಶ

ಪ್ರಧಾನಿ ಮೋದಿಯವರ ಇಂಧನ ಉಳಿತಾಯದ ಕರೆಗೆ ಸ್ಪಂದಿಸಿ, ದೆಹಲಿ ಮತ್ತು ಸಿಕ್ಕಿಂ ಸರ್ಕಾರಗಳು ತಮ್ಮ ಸರ್ಕಾರಿ ಅಧಿಕಾರಿಗಳಿಗೆ ವಾರಕ್ಕೆ ಎರಡು ದಿನ ವರ್ಕ್‌ ಫ್ರಂ ಹೋಂ ಕಡ್ಡಾಯಗೊಳಿಸಿವೆ. ಇದರೊಂದಿಗೆ ದೆಹಲಿಯಲ್ಲಿ 'ಮೆಟ್ರೋ ಮಂಡೆ' ಮತ್ತು ಸ್ವಯಂಪ್ರೇರಿತ 'ನೋ ವೆಹಿಕಲ್ ಡೇ'ಯಂತಹ ಕ್ರಮಗಳನ್ನು ಜಾರಿಯಾಗಿದೆ.

  • ತಲಾ 1 ದಿನ ಮೆಟ್ರೋ ಡೇ, ನೋ ವೆಹಿಕಲ್ ಡೇ
  • ಮೋದಿ ಕರೆಗೆ ಮೊದಲ ಸಲ 2 ರಾಜ್ಯ ಸ್ಪಂದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿಸುವ ಸಲುವಾಗಿ ಸೂಚಿಸಿರುವ ವರ್ಕ್‌ ಫ್ರಂ ಹೋಂ ಕ್ರಮವನ್ನು ದೆಹಲಿ ಮತ್ತು ಸಿಕ್ಕಿಂನಲ್ಲಿ ವಾರಕ್ಕೆ 2 ದಿನ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಕಡ್ಡಾಯವಾಗಿ ಜಾರಿಗೆ ತರಲಾಗಿದೆ. ಈ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಯೋಜನೆ ಜಾರಿಗೆ ತಂದ ಮೊದಲ 2 ರಾಜ್ಯಗಳಾಗಿ ಹೊರಹೊಮ್ಮಿವೆ.

ಅಂತೆಯೇ, ದೆಹಲಿಯಲ್ಲಿ ಪ್ರತಿ ಸೋಮವಾರವನ್ನು ‘ಮೆಟ್ರೋ ಮಂಡೆ’ ಎಂದು ಘೋಷಿಸಲಾಗಿದೆ. ಜತೆಗೆ, ವಾರಕ್ಕೊಂದು ದಿನ ಸ್ವಯಂಪ್ರೇರಿತವಾಗಿ ವಾಹನಗಳನ್ನು ಬಳಸದಂತೆ ಕೂಡ ಸೂಚಿಸಲಾಗಿದೆ.

ಖಾಸಗಿ ಕಂಪನಿಗಳಿಗೂ ಕರೆ:

ದೆಹಲಿ ಸಚಿವ ಸಂಪುಟ ಸಭೆಯಲ್ಲಿ ಈ ಆದೇಶ ಹೊರಡಿಸಿರುವ ದೆಹಲಿ ಸಿಎಂ ರೇಖಾ ಗುಪ್ತಾ, ‘ಮೇರಾ ಭಾರತ್‌, ಮೇರಾ ಯೋಗದಾನ್‌’ ಅಡಿಯಲ್ಲಿ ತಾವು ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಇಂಧನ ಉಳಿತಾಯಕ್ಕಾಗಿ ಇಂತಹ ಕ್ರಮಗಳನ್ನು ಪಾಲಿಸಬೇಕು ಎಂದರು. ಜತೆಗೆ ಖಾಸಗಿ ಕಂಪನಿಗಳೂ ಇದನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದರು.

ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಇಂಧನ ಕೋಟಾವನ್ನು ಶೇ.20ರಷ್ಟು ಕಡಿತಗೊಳಿಸಲಾಗಿದೆ. ಇನ್ನೊಂದು ವರ್ಷದ ಮಟ್ಟಿಗೆ ಸಚಿವರ ವಿದೇಶಿ ಪ್ರವಾಸಕ್ಕೆ ಬ್ರೇಕ್‌ ಬಿದ್ದಿದ್ದು, ರಾಜ್ಯದಲ್ಲಿ 3 ತಿಂಗಳು ಯಾವುದೇ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳದೆ ಇರಲು ನಿರ್ಧರಿಸಲಾಗಿದೆ.

ಈಗಾಗಲೇ ಗುಪ್ತಾರ ಬೆಂಗಾವಲು ಪಡೆಯ ಗಾತ್ರವನ್ನು ಶೇ.60ರಷ್ಟು ತಗ್ಗಿಸಿ, 4 ವಾಹನಗಳಿಗೆ ಇಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉತ್ತರ ಪ್ರದೇಶದಲ್ಲಿ 100 ಜನರ ಬಲಿ ಪಡೆದ ಚಂಡಮಾರುತ; ಪ್ರಯಾಗರಾಜ್‌ನಲ್ಲಿ ಅತ್ಯಧಿಕ, ಗಾಳಿಯಲ್ಲಿ ತೇಲಿಹೋದ ಮನುಷ್ಯ!
ದಳಪತಿ ವಿಜಯ್​ಗೆಳತಿ ತ್ರಿಷಾಗೆ ಜಾಕ್​ಪಾಟ್; ಟ್ರೆಂಡಿಂಗ್ ನಟಿಗೆ ಬಂತು ಸೂಪರ್ ಆಫರ್..!