
ನವದೆಹಲಿ (ಆ.3): ದೆಹಲಿ ಸೇವಾ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಧ್ವನಿ ಮತದಿಂದ ಅಂಗೀಕರಿಸಲಾಗಿದೆ. ಮತದಾನದ ವೇಳೆ ವಿರೋಧ ಪಕ್ಷದ ಸಂಸದರು ಸದನದಿಂದ ಹೊರ ನಡೆದರು. ಮತದಾನದ ವೇಳೆ ಸ್ಪೀಕರ್ ಓಂ ಬಿರ್ಲಾ ಮಾತನಾಡುತ್ತಿದ್ದಾಗ, ಆಮ್ ಆದ್ಮಿ ಪಾರ್ಟಿಯ ಸಂಸದ ಸುಶೀಲ್ ಕುಮಾರ್ ರಿಂಕು ಆಡಳಿತ ಪಕ್ಷದ ಸಂಸದರ ಮೇಲೆ ಪೇಪರ್ ಹರಿದು ಎಸೆದಿದ್ದಾರೆ. ಇದಕ್ಕಾಗಿ ಸುಶೀಲ್ ಕುಮಾರ್ ರಿಂಕು ಅವರನ್ನು ಇಡೀ ಅಧಿವೇಶನಕ್ಕೆ ಅಮಾನತುಗೊಳಿಸಲಾಗಿದೆ. ಆಮ್ ಆದ್ಮಿ ಪಕ್ಷದ ಲೋಕಸಭೆಯಲ್ಲಿ ಸುಶೀಲ್ ಕುಮಾರ್ ರಿಂಕು ಮಾತ್ರ ಸಂಸದರಾಗಿದ್ದರು. ಮಸೂದೆ ಅಂಗೀಕಾರವಾದ ಬಳಿಕ ಲೋಕಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ಈ ಮಸೂದೆಯನ್ನು ಅಂಗೀಕರಿಸುವ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ಮಾಡಿದರು. ಈ ವೇಳೆ ಅಮಿತ್ ಶಾ ಅವರು ಐಎನ್‌ಡಿಐಎ ಮೈತ್ರಿಕೂಟವನ್ನು ತೀವ್ರವಾಗಿ ಟೀಕಿಸಿದರು.
ದೆಹಲಿ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧದ ಹೋರಾಟದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುತ್ತಿರುವ ಐಎನ್‌ಡಿಐಎ ಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯಾರೊಬ್ಬರ ಬೆಂಬಲವನ್ನು ಪಡೆಯಲು ಕಾನೂನನ್ನು ಬೆಂಬಲಿಸುವ ಅಥವಾ ವಿರೋಧಿಸುವ ರಾಜಕೀಯ ಸರಿಯಲ್ಲ. ಒಂದು ಮೈತ್ರಿ ಉಳಿಸಿಕೊಳ್ಳುವ ಸಲುವಾಗಿ, ನಿಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ ಜನರ ಹಿತಾಸಕ್ತಿಗಳನ್ನು ಬಲಿ ಕೊಡಬಾರದು ಎಂದು ಹೇಳಿದ್ದಾರೆ. "ಚುನಾವಣೆ ಗೆಲ್ಲಲು, ಯಾರೊಬ್ಬರ ಬೆಂಬಲವನ್ನು ಪಡೆಯಲು ಯಾವುದೇ ಮಸೂದೆಯನ್ನು ಬೆಂಬಲಿಸಲು ಅಥವಾ ವಿರೋಧಿಸಲು ಇಂತಹ ರಾಜಕೀಯ ಮಾಡಬಾರದು ಎಂದು ನಾನು ಎಲ್ಲಾ ಪಕ್ಷಗಳ ಸದಸ್ಯರನ್ನು ವಿನಂತಿಸುತ್ತೇನೆ" ಎಂದು ಶಾ ಹೇಳಿದರು.
ನೂತನ ಮಸೂದೆಯ (ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆ, 2023) ಪ್ರಕಾರ, ದೆಹಲಿಯ ಅಧಿಕಾರಿಗಳು ಮತ್ತು ನೌಕರರ ಸೇವೆಯ ಕಾರ್ಯಗಳು, ನಿಯಮಗಳು ಮತ್ತು ಇತರ ಷರತ್ತುಗಳನ್ನು ಒಳಗೊಂಡಂತೆ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ಈ ವಿಧೇಯಕ ದೇಶಕ್ಕೆ ಒಳ್ಳೆಯದು ಎಂದು ಹೇಳಿದ ಅಮಿತ್ ಶಾ, ಯಾವುದೇ ಮಸೂದೆಯನ್ನು ಬೆಂಬಲಿಸುವ ಹಾಗು ವಿರೋಧಿಸುವ ಹಿತದೃಷ್ಟಿ ಜನಪರವಾಗಿ ಇರಬೇಕು. ರಾಜಕೀಯ ಕಾರಣಗಳಿಗಾಗಿ ರಾಜಕೀಯ ಉದ್ದೇಶಕ್ಕಾಗಿ ಯಾವುದೇ ಮಸೂದೆಗಳನ್ನು ಬೆಂಬಲಿಸುವ ವಿರೋಧಿಸುವ ರಾಜಕಾರಣ ಸರಿಯಲ್ಲ. ಹೊಸ ಹೊಸ ಮೈತ್ರಿ ಮಾಡಿಕೊಳ್ಳಲು ಹಲವು ಮಾರ್ಗಗಳಿವೆ. ಮಸೂದೆಯನ್ನು ಮುಂದಿಟ್ಟುಕೊಂಡು ರಾಜಕೀಯದ ಬೇಳೆ ಬೇಯಿಸಿಕೊಳ್ಳಬಾರದು. ಮಸೂದೆಗಳು ಇರುವುದು ದೇಶದ ಒಳಿತಿಗಾಗಿ. ಇದನ್ನು ದೇಶ ಅಥವಾ ದೆಹಲಿಯ ಒಳಿತಿಗಾಗಿ ವಿರೋಧಿಸಬೇಕು ಅಥವಾ ಬೆಂಬಲಿಸಬೇಕು. ಒಂದು ಮಸೂದೆಯಿಂದ ನಮಗೇನು ಲಾಭವಾಗಲಿದೆ ಎನ್ನುವುದನ್ನು ಯೋಚಿಸಿಕೊಂಡು ಮಸೂದೆಯ ಬೆಂಬಲ-ವಿರೋಧಕ್ಕೆ ನಿಲ್ಲಬಾರದು ಎಂದಿದ್ದಾರೆ.
ರಾಜ್ಯದಲ್ಲಿ ಕರಪ್ಷನ್ ಸರ್ಕಾರ ಹೋಗಿ, ಕಂಡೀಷನ್ ಸರ್ಕಾರ ಬಂದಿದೆ: ಮುಖ್ಯಮಂತ್ರಿ ಚಂದ್ರು
ಪ್ರತಿಪಕ್ಷಗಳ ಮಹಾಮೈತ್ರಿಕೂಟದ ಮೇಲೆ ಮೇಲಿಂದ ಮೇಲೆ ವಾಗ್ದಾಳಿ ನಡೆಸಿದ ಅವರಯ, "ಪ್ರಧಾನಿ ನರೇಂದ್ರ ಮೋದಿ ಪೂರ್ಣ ಬಹುಮತದೊಂದಿಗೆ ಪ್ರಧಾನಿಯಾಗಲಿರುವುದರಿಂದ ಮೈತ್ರಿಯಿಂದ ಪ್ರಯೋಜನವಾಗುವುದಿಲ್ಲ" ಎಂದು ಹೇಳಿದರು. ಹಾಗಾಗಿ ಈ ಮೈತ್ರಿಗಾಗಿ ಜನರ ಹಿತಾಸಕ್ತಿಗಳನ್ನು ಬಲಿಕೊಡಬೇಡಿ, ಸಾರ್ವಜನಿಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಅಬಕಾರಿ ಹಗರಣದ ಬಳಿಕ 'ಪ್ಯಾನಿಕ್ ಬಟನ್ ಸ್ಕ್ಯಾಮ್' ಬಲೆಯಲ್ಲಿ ಸಿಲುಕಿದ ದೆಹಲಿಯ ಆಪ್ ಸರ್ಕಾರ?
ಸದನದಲ್ಲಿ ಮಸೂದೆಯನ್ನು ಮಂಡಿಸಿದ ಗೃಹ ಸಚಿವರು, ದೆಹಲಿಗೆ ಕಾನೂನು ಮಾಡಲು ಕೇಂದ್ರಕ್ಕೆ ಅವಕಾಶ ನೀಡುವ ಅವಕಾಶಗಳು ಸಂವಿಧಾನದಲ್ಲಿ ಇವೆ ಎಂದು ಹೇಳಿದರು. ಎಎಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, 2015ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹೊಸ ಪಕ್ಷ ಅಧಿಕಾರಕ್ಕೆ ಬರುವವರೆಗೆ ದೆಹಲಿಯಲ್ಲಿ ಆಡಳಿತ ವ್ಯವಸ್ಥೆಯು ವಿವಿಧ ಸರ್ಕಾರಗಳ ಅಡಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ