ಚೆನ್ನೈನಲ್ಲಿನ ಅಮೆರಿಕ ರಾಯಭಾರ ಕಚೇರಿ ಕಾನ್ಸಲ್ ಜನರಲ್ ಆಗಿ ಕ್ರಿಸ್ಟೋಫರ್ ಹಾಡ್ಜಸ್

By Suvarna News  |  First Published Aug 3, 2023, 5:20 PM IST

ಕ್ರಿಸ್ಟೋಫರ್ ಡಬ್ಲ್ಯೂ. ಹಾಡ್ಜಸ್ ಅವರು ಚೆನ್ನೈ ನ ಅಮೇರಿಕ ದೂತಾವಾಸದ ಮುಖ್ಯಸ್ಥರಾಗಿ (ಕಾನ್ಸಲ್ ಜನರಲ್) ಕಳೆದ ಸೋಮವಾರ ಜುಲೈ 31, 2023 ರಂದು ಅಧಿಕಾರ ವಹಿಸಿಕೊಂಡರು.


ಚೆನ್ನೈ (ಆ.03): ಕ್ರಿಸ್ಟೋಫರ್ ಡಬ್ಲ್ಯೂ. ಹಾಡ್ಜಸ್ ಅವರು ಚೆನ್ನೈ ನ ಅಮೇರಿಕ ದೂತಾವಾಸದ ಮುಖ್ಯಸ್ಥರಾಗಿ (ಕಾನ್ಸಲ್ ಜನರಲ್) ಕಳೆದ ಸೋಮವಾರ ಜುಲೈ 31, 2023 ರಂದು ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಾನ್ಸಲ್ ಜನರಲ್ ಹಾಡ್ಜಸ್ ಅವರು, 'ಅಮೇರಿಕ-ಭಾರತದ ಸಹಭಾಗಿತ್ವದ ಮಹತ್ವದ ಹೊತ್ತಿನಲ್ಲಿ ದಕ್ಷಿಣ ಭಾರತದಲ್ಲಿ ಅಮೇರಿಕವನ್ನು ಪ್ರತಿನಿಧಿಸುತ್ತಿರುವ ಗೌರವ ನನ್ನದು. 

ನಾವು ಸ್ಥಳೀಯ ಮತ್ತು ಪ್ರಾದೇಶಿಕವಾಗಿ ಮಾಡುವ ಕೆಲಸಗಳು ಉಭಯ ದೇಶಗಳ ನಡುವಣ ಶ್ರೀಮಂತ ವಾಣಿಜ್ಯ ಮತ್ತು ಶೈಕ್ಷಣಿಕ ಸಂಬಂಧಗಳು ಮತ್ತು ಬಾಹ್ಯಾಕಾಶ ವಲಯವೂ ಸೇರಿದಂತೆ ದ್ವಿಪಕ್ಷೀಯ ಸಹಭಾಗಿತ್ವವನ್ನು ವಿಸ್ತಾರಗೊಳಿಸುವಲ್ಲಿ ಕೊಡುಗೆ ನೀಡುತ್ತವೆ. ನಮ್ಮ ಜನರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಹತ್ತಿರ ತರುವ ವಿಷಯಗಳಾದ ಅಮೇರಿಕದ ಪೌರರಿಗೆ ಬೆಂಬಲ ನೀಡುವುದು ಹಾಗೂ ಕಾನ್ಸಲರ್‌ ಸೇವೆಗಳನ್ನು ಒದಗಿಸುವುದಕ್ಕೆ ಹೆಮ್ಮೆಯಿದೆ.'

Tap to resize

Latest Videos

ಬೆಂಗಳೂರು ಏರ್​ಪೋರ್ಟ್​​​ನಲ್ಲಿ 'ವಾಯುಯಾನ ಭದ್ರತಾ ಸಂಸ್ಕೃತಿ ಸಪ್ತಾಹ' ಆಚರಣೆ

'ಅಮೇರಿಕ- ಭಾರತದ ಸಂಬಂಧವು ಎರಡು ಸರ್ಕಾರಗಳ ನಡುವೆ ಮಾತ್ರವಲ್ಲ, ಉಭಯ  ದೇಶಗಳ ಜನರ ನಡುವಿನ ಸಂಬಂಧ ಎಂಬುದನ್ನು ನಮ್ಮ ಪ್ರಯತ್ನಗಳು ಎತ್ತಿ ತೋರುತ್ತವೆ. ನಮ್ಮ ಪ್ರಾಂತ್ಯದಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ನಿಕೊಬಾರ್‌ ದ್ವೀಪ ಸಮೂಹ, ಲಕ್ಷದ್ವೀಪ ಮತ್ತು ಪುದುಚೆರಿಗಳಲ್ಲಿ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇನೆ,' ಎಂದು ಕಾನ್ಸಲ್‌ ಜನರಲ್‌ ಹೇಳಿದರು.

ಚೆನ್ನೈನಲ್ಲಿನ ಅಮೇರಿಕ ದೂತಾವಾಸದ ಕಾನ್ಸಲ್‌ ಜನರಲ್‌ ಆಗಿ ಅಧಿಕಾರವಹಿಸಿಕೊಳ್ಳುವ ಮುನ್ನ, ಹಾಡ್ಜಸ್‌ ಅವರು ಕೋಆರ್ಡಿನೇಟರ್ ಫಾರ್ ಆಫ್ಘನ್ ರಿಲೊಕೇಷನ್ ಎಫರ್ಟ್ಸ್(ಕೇರ್) ಕಚೇರಿಯ ಹಿರಿಯ ಸಲಹೆಗಾರರಾಗಿದ್ದರು. ಅದಕ್ಕೂ ಮುನ್ನ ಬ್ಯೂರೋ ಫಾರ್ ನಿಯರ್ ಈಸ್ಟ್ರನ್ ಅಫೇರ್ಸ್ ನಲ್ಲಿ ಅಸಿಸ್ಟೆನ್ಸ್ ಕೋಆರ್ಡಿನೇಷನ್ ಅಂಡ್ ಪ್ರೆಸ್ ಅಂಡ್ ಪಬ್ಲಿಕ್ ಡಿಪ್ಲೊಮಸಿ ವಿಭಾಗದ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿಯಾಗಿ ಹಾಗೂ ಇಸ್ರೇಲಿ-ಪ್ಯಾಲೆಸ್ಟಿನಿಯನ್ ವ್ಯವಹಾರಗಳ ಉಪ ಸಹಾಯಕ ಕಾರ್ಯದರ್ಶಿಯಾಗಿ  ಕಾರ್ಯನಿರ್ವಹಿಸಿದ್ದರು.

ಬೆಂಗಳೂರು-ಪುಣೆ ಹೆದ್ದಾರಿ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್

ಅವರು ಕಡೆಯದಾಗಿ ವಿದೇಶದಲ್ಲಿ ಕಾರ್ಯನಿರ್ವಹಿಸಿದ್ದು ಜೆರೂಸಲೇಂನ ರಾಯಭಾರ ಕಚೇರಿಯಲ್ಲಿ ಅಸಿಸ್ಟೆಂಟ್ ಡೆಪ್ಯುಟಿ ಛೀಫ್ ಆಫ್ ಮಿಷನ್ ಮತ್ತು ಛೀಫ್ ಆಫ್ ದಿ ಪ್ಯಾಲೆಸ್ತೇನಿಯನ್ ಅಫೇರ್ಸ್ ಯೂನಿಟ್‌ನಲ್ಲಿ. ಹಾಡ್ಜಸ್‌ ಅವರು 2000ರಲ್ಲಿ ವಿದೇಶಾಂಗ ಸೇವೆಗೆ ಸೇರಿಕೊಂಡರು. ಅವರುಜೆರೂಸಲೇಂ, ಹನೊಯ್, ವಿಯೆಟ್ನಾಂ; ಮತ್ತು ಅಕ್ಕ್ರಾ, ಘಾನಾದಲ್ಲಿ ಪಬ್ಲಿಕ್ ಅಫೇರ್ಸ್ ಆಫೀಸರ್ ಆಗಿ ಸೇವೆ ಸಲ್ಲಿಸಿದರು.  ಅಲ್ಲದೆ ಆಸ್ಟ್ರಿಯಾ, ಜರ್ಮನಿ, ಸ್ವಿಟ್ಜರ್‌ಲೆಂಡ್ ಮತ್ತು ಲಿಷೆನ್ ಸ್ಟೀನ್ ಗಳಲ್ಲಿ ಆಫೀಸ್ ಆಫ್  ದಿ ಸೆಂಟ್ರಲ್ ಯೂರೋಪಿಯನ್ ಅಫೇರ್ಸ್ ನಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ದುಡಿದಿದ್ದಾರೆ.  ಸುವಾ, ಫಿಜಿ ಮತ್ತು ಫ್ರಾಂಕ್ ಫರ್ಟ್, ಜರ್ಮನಿಗಳಲ್ಲೂ ಕೆಲಸ ಮಾಡಿದ್ದಾರೆ.

click me!