ದೆಹಲಿ, ಮುಂಬೈನಲ್ಲಿ ಸೋಂಕು ಭಾರೀ ಇಳಿಕೆ!

By Suvarna NewsFirst Published May 23, 2021, 9:52 AM IST
Highlights

* ದೆಹಲಿ, ಮುಂಬೈನಲ್ಲಿ ಸೋಂಕು ಭಾರೀ ಇಳಿಕೆ

* ಮುಂಬೈನಲ್ಲಿ 1350 ಕೇಸ್‌, ದೆಹಲಿಯಲ್ಲಿ 3846 ಕೇಸ್‌

* ಮುಂಬೈನಲ್ಲಿ ಕೊರೋನಾಕ್ಕೆ 57 ಹಾಗೂ ದೆಹಲಿಯಲ್ಲಿ 235 ಮಂದಿ ಬಲಿ

ನವದೆಹಲಿ/ಮುಂಬೈ(ಮೇ.23): ದೇಶದ ಎರಡು ಪ್ರಮುಖ ಮಹಾನಗರಗಳಾದ ದೆಹಲಿ ಹಾಗೂ ಮುಂಬೈನಲ್ಲಿ ದೈನಂದಿನ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ದೆಹಲಿಯಲ್ಲಿ ಬುಧವಾರ 3846 ಕೇಸ್‌ಗಳು ಪತ್ತೆ ಆಗಿದ್ದರೆ, ಮುಂಬೈನಲ್ಲಿ 1,350 ಕೇಸ್‌ಗಳು ಪತ್ತೆ ಆಗಿವೆ.

ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!

ಇದೇ ವೇಳೆ ಮುಂಬೈನಲ್ಲಿ ಕೊರೋನಾಕ್ಕೆ 57 ಹಾಗೂ ದೆಹಲಿಯಲ್ಲಿ 235 ಮಂದಿ ಬಲಿಯಾಗಿದ್ದಾರೆ. ಮುಂಬೈನಲ್ಲಿ 29,643 ಸಕ್ರಿಯ ಪ್ರಕರಣಗಳು ಮಾತ್ರ ಇದ್ದು, ಚೇತರಿಕೆ ಪ್ರಮಾಣ ಶೇ.93ಕ್ಕೆ ಏರಿಕೆ ಆಗಿದೆ.

ಇನ್ನೊಂದೆದೆಡೆ ದೆಹಲಿಯಲ್ಲಿ ಸತತ 3ನೇ ದಿನವೂ 5000ಕ್ಕಿಂತ ಕಡಿಮೆ ಕೇಸ್‌ಗಳು ಪತ್ತೆ ಆಗಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಇದರೊಂದಿಗೆ ದಿಲ್ಲಿಯಲ್ಲಿ ಪಾಸಿಟಿವಿಟಿ ದರ ಶೇ.5.78ಕ್ಕೆ ಕುಸಿದಿದೆ. ಮೇ 5ರ ಬಳಿಕ ದೆಹಲಿಯಲ್ಲಿ ದಾಖಲಾಗಿರುವ ಅತೀ ಕನಿಷ್ಠ ದೈನಂದಿನ ಕೋವಿಡ್‌ ಸಂಖ್ಯೆ ಇದಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!