
ನವದೆಹಲಿ(ಮೇ.23): ಮೂರನೇ ಅಲೆಯು ಮಕ್ಕಳಿಗೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿರುವ ನಡುವೆಯೇ, ‘ಮಕ್ಕಳಿಗೆ ಕೊರೋನಾ ಸೋಂಕು ತಾಗುವುದೇ ಇಲ್ಲ ಎಂದೇನೂ ಇಲ್ಲ. ಆದರೆ ಅವರ ಮೇಲಿನ ಪರಿಣಾಮ ತುಂಬಾ ಕಡಿಮೆ ಇರುತ್ತದೆ. ಆದಾಗ್ಯೂ ಅವರನ್ನು ಸೋಂಕಿನ ಸರಣಿಯ ಭಾಗವಾಗಲು ಸರ್ಕಾರ ಬಿಡಬಾರದು’ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ. ಪೌಲ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಕ್ಕಳು ಕೊರೋನಾ ಸೋಂಕಿಗೆ ಅತೀತರು ಎಂದೇನಲ್ಲ. ಆದರೆ ಇತರರಂತೆ ಅವರಿಗೆ ಗಂಭೀರ ಪ್ರಮಾಣದಲ್ಲಿ ಸೋಂಕು ತಾಗುವುದಿಲ್ಲ. ಹಾಗಂತ ಸುಮ್ಮನೇ ಇರಲಾಗದು. ಇತರರಿಗೆ ಅವರು ಸೋಂಕು ಹರಡಿಸಬಲ್ಲರು. ಹೀಗಾಗಿ ಆರೋಗ್ಯ ಮೂಲಸೌಕರ‍್ಯವನ್ನು ಇನ್ನಷ್ಟುಹೆಚ್ಚಿಸಬೇಕು. ಅವರು ಇತರರಿಗೆ ವಾಹಕರಾಗುವುದನ್ನು ತಪ್ಪಿಸಲು ಮೊದಲ ಆದ್ಯತೆ ನೀಡಬೇಕು. ಕೊರೋನಾ ಸೋಂಕಿನ ಸರಣಿಯಲ್ಲಿ ಅವರು ಭಾಗವಾಗಬಾರದು’ ಎಂದು ಹೇಳಿದರು.
WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು
ಭಾರತದ ಜನಸಂಖ್ಯೆಯಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲು ಶೇ.26ರಷ್ಟಿದೆ. ಇನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪಾಲು ಶೇ.7.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೌಲ್, ‘ಡಿಸೆಂಬರ್-ಜನವರಿ ಸೀರೋ ಸಮೀಕ್ಷೆಯಲ್ಲಿ ಮಕ್ಕಳು ಹಾಗೂ ವಯಸ್ಕರಲ್ಲಿನ ಸೀರೋಪಾಸಿಟಿವಿಟಿ ಹೆಚ್ಚೂ ಕಮ್ಮಿ ಒಂದೇ ಆಗಿದೆ. ಕೊರೋನಾ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಮಕ್ಕಳ ಪಾಲು ಭಾರತ ಹಾಗೂ ವಿದೇಶದಲ್ಲಿ ಶೇ.3ರಿಂದ 4ರಷ್ಟಿದೆ. ಅದರಲ್ಲಿ 10ರಿಂದ 12 ವರ್ಷ ವಯಸ್ಸಿನ ಮಕ್ಕಳು ಹೊರಗೆ ಸುತ್ತಾಡುತ್ತಿರುತ್ತಾರೆ. ಅವರ ಮೇಲೆ ಗಮನ ಹರಿಸಬೇಕು’ ಎಂದು ಕಳಕಳಿಯ ಮನವಿ ಮಾಡಿದರು.
ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳಲ್ಲಿ ಕೊರೋನಾ ಸೋಂಕು ತಡೆಗಟ್ಟಬೇಕು. 2ನೇ ಅಲೆಯಲ್ಲಿ ಎಷ್ಟುಮಕ್ಕಳು ಬಾಧಿತರಾಗಿದ್ದಾರೆ ಎಂಬ ಅಂಕಿ-ಅಂಶಗಳನ್ನು ಕಲೆ ಹಾಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ