ಮನೆಯಿಂದ ಕೆಲಸ ಮಾಡಿ ಇಲ್ಲ ಸಾರ್ವಜನಿಕ ಸಾರಿಗೆ ಬಳಸಿ, ಮಾಲಿನ್ಯ ತಡೆಯಲು ಸಚಿವರ ಹೊಸ ಸೂತ್ರ!

Published : Nov 02, 2022, 04:50 PM IST
ಮನೆಯಿಂದ ಕೆಲಸ ಮಾಡಿ ಇಲ್ಲ ಸಾರ್ವಜನಿಕ ಸಾರಿಗೆ ಬಳಸಿ, ಮಾಲಿನ್ಯ ತಡೆಯಲು ಸಚಿವರ ಹೊಸ ಸೂತ್ರ!

ಸಾರಾಂಶ

ಕೊರೋನಾ ಕಾಲದಲ್ಲಿದ್ದ ವರ್ಕ್ ಫ್ರಮ್ ಹೋಮ್ ಬಹುತೇಕ ಅಂತ್ಯಗೊಂಡಿದೆ. ಹೀಗಾಗಿ ಎಲ್ಲಾ ನಗರಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದರಿಂದ ವಾಯು ಮಾಲಿನ್ಯವೂ ವಿಪರೀತವಾಗಿದೆ. ಇದೀಗ ಪರಿಸರ ಸಚಿವರು ಹೊಸ ಸೂತ್ರ ಮುಂದಿಟ್ಟಿದ್ದಾರೆ. 

ನವದೆಹಲಿ(ನ.02): ಕಚೇರಿಗೆ, ಫ್ಯಾಕ್ಟರಿ, ಕೈಗಾರಿಗೆ ಸೇರಿದಂತೆ ಎಲ್ಲೇ ಕೆಲಸಕ್ಕೆ ಹೋಗುವವರು ಸಾರ್ವಜನಿಕ ಸಾರಿಗೆ ಬಳಸಬೇಕು. ಇನ್ನೊಂದು ಆಯ್ಕೆ ಮನೆಯಿಂದ ಕೆಲಸ ಮಾಡಿ. ಇದನ್ನು ಹೊರತು ಪಡಿಸಿ ಕಾರಿನಲ್ಲಿ ಅಥವಾ ಬೈಕ್‌ನಲ್ಲಿ ಓಡಾಡುವ ಸಾಹಸ ಬೇಡ. ಇದರಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಮಾಲಿನ್ಯ ನಿಯಂತ್ರಿಸಲು ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಪಾಲಿಸುವುದು ಸೂಕ್ತ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ದೆಹಲಿ ವಾಯು ಮಾಲಿನ್ಯದಲ್ಲಿ ವಾಹನಗಳ ಕೊಡುಗೆ ಅತ್ಯಧಿಕವಾಗಿದೆ. ಹೀಗಾಗಿ ವಾಹನಗಳ ಓಡಾಟ ಕಡಿಮೆಗೊಳಿಸಿದರೆ ಮಾಲಿನ್ಯ ತಗ್ಗಿಸಲು ಸಾಧ್ಯವಿದೆ ಎಂದು ಗೋಪಾಲ್ ರೈ ಹೇಳಿದ್ದಾರೆ.

ದೆಹಲಿಯಲ್ಲಿ ವಾಹನಗಳಿಂದ ಹೊರಸೂಸುವ ಹೊಗೆಯಿಂದ ಶೇಕಡಾ 51 ರಷ್ಟು ವಾಯು ಮಾಲಿನ್ಯವಾಗುತ್ತಿದೆ. ವಾಹನ ಒಡಾಟ ಕಡಿಮೆಗೊಳಿಸಲು ಮುಂದಿರುವ ಆಯ್ಕೆಗಳು ನಿಯಮಿತವಾಗಿದೆ. ಯಾರಿಗೆಲ್ಲಾ ಮನೆಯಿಂದ ಕೆಲಸ ಮಾಡುವ ಅವಕಾಶವಿದೆ, ಅವರಿಗೆ ವರ್ಕ್ ಫ್ರಮ್ ಹೋಮ್ ನೀಡಿ. ಇನ್ನುಳಿದವರು ತಮ್ಮ ಸ್ವಂತ ವಾಹನಗಳ ಬದಲು ಸಾರಿಗೆ ಬಳಸಿ. ಇದೂ ಸಾಧ್ಯವಾಗದಿದ್ದರೆ ಕಂಪನಿಗಳ ಬಸ್ ಅಥವಾ ಹೆಚ್ಚು ಮಂದಿ ತೆರಳು ವಾಹನಗಳನ್ನು ಬಳಸಿ ಎಂದು ಗೋಪಾಲ್ ರೈ ಸಲಹೆ ನೀಡಿದ್ದಾರೆ.

ವಾಯುಮಾಲಿನ್ಯ ಶ್ವಾಸಕೋಶದ ಶತ್ರು ಮಾತ್ರವಲ್ಲ, ಈ ರೋಗಗಳಿಗೂ ಕಾರಣವಾಗುತ್ತೆ

ಸಾಧ್ಯವಿರುವ ಎಲ್ಲಾ ದಾರಿಗಳನ್ನು ಬಳಸಿ ವಾಯು ಮಾಲಿನ್ಯ ತಗ್ಗಿಸಬೇಕು. ದೆಹಲಿಯಲ್ಲಿ ದಿನದಿಂದ ದಿನಕ್ಕೆ ಮಾಲಿನ್ಯದ ಪ್ರಮಾಣ ವಿಪರೀತವಾಗಿದೆ. ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಒಂದು ಪಟಾಕಿ ಮಾಲಿನ್ಯವೂ ದೆಹಲಿಯಲ್ಲಿ ವಿಪರೀತ ಪರಿಣಾಮ ತರುತ್ತಿದೆ. ದೆಹಲಿಯಲ್ಲಿ ಧೂಳಿನ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಕಟ್ಟಡ ಸೇರಿದಂತೆ ಹಲವು ನಿರ್ಮಾಣ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಗೋಪಾಲ್ ರೈ ಹೇಳಿದ್ದಾರೆ.

ನಿಯಮ ಉಲ್ಲಂಘಿಸಿ ದಿಲ್ಲಿ ದೆಹಲಿ ಬಿಜೆಪಿ ಕಚೇರಿ ನಿರ್ಮಾಣ: 5 ಲಕ್ಷ ದಂಡ
ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಕಟ್ಟಡ ಕಾಮಗಾರಿಗೆ ನಿಷೇಧ ಹೇರಿದ್ದರೂ, ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಎಲ್‌ ಆ್ಯಂಡ್‌ ಟಿ ಕಂಪನಿಗೆ ದೆಹಲಿ ಸರ್ಕಾರ 5 ಲಕ್ಷ ರು. ದಂಡ ವಿಧಿಸಿದೆ. ದೀನ್‌ ದಯಾಳ್‌ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಟ್ಟಡ ನಿರ್ಮಾಣ ಕಾರ‍್ಯ ನಡೆಯುತ್ತಿತ್ತು. ವಿಚಾರಿಸಿದಾಗ ಇದು ಬಿಜೆಪಿಗೆ ಸಂಬಂಧಿಸಿದ ಕೆಲಸ ಎಂದು ಕಂಪನಿಗಳು ತಿಳಿಸಿದವು. ಇದು ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾಗಿದೆ. ಹಾಗಾಗಿ ಬಿಜೆಪಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಕಂಪನಿಗೆ 5 ಲಕ್ಷ ರು. ದಂಡ ವಿಧಿಸಲಾಗಿದೆ ಎಂದು ದೆಹಲಿ ಪರಿಸರ ಖಾತೆ ಸಚಿವ ಗೋಪಾಲ್‌ ರೈ ಅವರು ಹೇಳಿದ್ದಾರೆ.

 

ಜಗತ್ತಿನ ಟಾಪ್‌ 10 ಕಲುಷಿತ ನಗರಗಳಲ್ಲಿ ದೆಹಲಿ, ಕೋಲ್ಕತ್ತಗೆ ಸ್ಥಾನ

ದಿಲ್ಲಿ ವಾಯುಗುಣಮಟ್ಟವಿಷಮ ಸ್ಥಿತಿಯಲ್ಲೇ  ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿರುವ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಧ್ವಂಸ ಕಾರಾರ‍ಯಚರಣೆ ನಿಷೇಧದ ಕಟ್ಟುನಿಟ್ಟಿನ ಅನುಷ್ಠಾನಕ್ಕೆ 586 ತಂಡಗಳನ್ನು ದಿಲ್ಲಿ ಸರ್ಕಾರ ರಚಿಸಿದೆ. ರಾಷ್ಟ್ರ ರಾಜಧಾನಿ ವಲಯದ ವಾಯುಗುಣಮಟ್ಟಸೂಚ್ಯಂಕ ಭಾನುವಾರ ಕೂಡ 400ರ ಆಸುಪಾಸಿನಲ್ಲಿದ್ದು ‘ವಿಷಮ’ (ಸ್ಟೇಜ್‌-3) ಅವಸ್ಥೆಯಲ್ಲೇ ಮುಂದುವರಿದಿದೆ. ದಿಲ್ಲಿಯ ಚಳಿಗಾಲ ಹಾಗೂ ಪಕ್ಕದ ಪಂಜಾಬ್‌, ಹರಾರ‍ಯಣ ರಾಜ್ಯಗಳಲ್ಲಿ ರೈತರು ಕಟಾವು ಮಾಡಿರುವ ಕಬ್ಬಿನ ಬೆಳೆ ತ್ಯಾಜ್ಯ ಸುಡುತ್ತಿರುವುದರಿಂದ ಏಳುತ್ತಿರುವ ಹೊಗೆ- ಇದಕ್ಕೆ ಕಾರಣವಾಗಿದೆ. ನಗರದ ಮಾಲಿನ್ಯದಲ್ಲಿ ಬೆಳೆ ತ್ಯಾಜ್ಯ ಸುಡುವಿಕೆ ಪಾಲು ಭಾನುವಾರ ಶೇ.21ರಿಂದ ಶೇ.26ಕ್ಕೆ ಹೆಚ್ಚಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!