
ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ತೆಲಂಗಾಣವನ್ನು (Telangana) ತಲುಪಿದ್ದು, ಅಲ್ಲಿನ ರಾಜಧಾನಿ ಹೈದರಾಬಾದ್‌ನಲ್ಲಿ (Hyderabad) ಯಾತ್ರೆ ನಡೆಯುತ್ತಿದೆ. ಈ ವೇಳೆ ಬಾಲಿವುಡ್ (Bollywood) ಖ್ಯಾತ ನಟಿ ಆಲಿಯಾ ಭಟ್ (Alia Bhatt) ಸಹೋದರಿ ಹಾಗೂ ಸ್ವತ: ನಟಿ, ನಿರ್ಮಾಪಕಿಯಾಗಿರುವ ಪೂಜಾ ಭಟ್ (Pooja Bhatt) ಭಾರತ್ ಜೋಡೋ ಅಚ್ಚರಿಯೆಂಬಂತೆ ಯಾತ್ರೆಯಲ್ಲಿ ಕೈಜೋಡಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜತೆಯಲ್ಲಿ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾದ ಮೊದಲ ಪ್ರಮುಖ ಬಾಲಿವುಡ್ ಸೆಲೆಬ್ರಿಟಿ (Celebrity) ಎನಿಸಿಕೊಂಡಿದ್ದಾರೆ. ಯಾತ್ರೆಯಲ್ಲಿ ಭಾಗಿಯಾಗುವ ಜತೆಗೆ ರಾಹುಲ್ ಗಾಂಧಿ ಜತೆಗೆ ಪೂಜಾ ಭಟ್ ನಡೆದಾಡಿದ್ದು, ಕೆಲ ಕಾಲ ಚರ್ಚೆಯನ್ನೂ ನಡೆಸಿದ್ದಾರೆ. ಹಾಗೂ, ರಾಹುಲ್ ಗಾಂಧಿ ಜತೆಗೆ ಪುಜಾ ಭಟ್ ವೇಗವಾಗಿ ನಡೆದಾಡಿದ್ದು, ಈ ಹಿನ್ನೆಲೆ ಈ ವೇಳೆ ನೆರೆದಿದ್ದ ಜನರು ಹಾಗೂ ಕೆಲ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಹ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ಪೂಜಾ ಭಟ್ ಹಲವು ವಿಚಾರಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. 1989ರ ಡ್ಯಾಡಿ ಚಿತ್ರದ ಮೂಲಕ ಪೂಜಾ ಭಟ್ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಖ್ಯಾತ ನಿರ್ದೇಶಕ ಮಹೇಶ್ ಭಟ್ ಮಗಳೂ ಆಘಿರುವ ಪೂಜಾ ಭಟ್ ದಿಲ್ ಹೈ ಕೀ ಮಾನ್ತಾ ನಹೀನ್, ಸಡಕ್, ಫಿರ್ ತೇರಿ ಕಹಾನಿ ಯಾದ್ ಆಯೀ, ಸರ್ ಹಾಗೂ ಝಕಮ್‌ನಂತಹ ಚಿತ್ರಗಳಲ್ಲಿ ನಟಿಸಿದ್ದು, ಆಕೆಯ ನಟನೆಗೆ ಮೆಚ್ಚುಗೆಗೂ ಪಾತ್ರರಾಗಿದ್ದರು. ಅಲ್ಲದೆ, ತಮ್ಮನ, ಸುರ್, ಪಾಪ್ ಹಗೂ ಹಾಳಿಡೇಯಂತಹ ಚಿತ್ರಗಳ ಮೂಲಕ ನಿರ್ಮಾಣ ಹಾಗೂ ನಿರ್ದೇಶನದ ಕಡೆಗೂ ಪೂಜಾ ಭಟ್ ಹೆಜ್ಜೆ ಇಟ್ಟಿದ್ದಾರೆ.
ಇದನ್ನು ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ನಟಿ ರಮ್ಯಾ ಪ್ರತ್ಯಕ್ಷ, ರಾಹುಲ್ ಗಾಂಧಿ ಜೊತೆ ಹೆಜ್ಜೆ!
ಬುಧವಾರ ಬೆಳಗ್ಗೆ ಹೈದರಾಬಾದ್ ನಗರದ ಬಾಲನಗರ ಮುಖ್ಯ ರಸ್ಥೆಯ ಎಂಜಿಬಿ ಬಜಾಜ್ ಶೋರೂಂನಿಂದ ಇಂದು ಯಾತ್ರೆ ಪುನಾರಂಭಗೊಂಡಿದ್ದು, ಈ ವೇಳೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವು ಇತರರೊಂದಿಗೆ ನಡೆದಾಡಿದ್ದಾರೆ. 56ನೇ ದಿನದ ಇಂದಿನ ಯಾತ್ರೆಯಲ್ಲಿ ಪೂಜಾ ಭಟ್ ಭಾಗಿಯಾಗಿದ್ದು ವಿಶೇಷವಾಗಿತ್ತು.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿತ್ತು. ಕರ್ನಾಟಕದಲ್ಲೂ ಹಲವು ದಿನಗಳ ಯಾತ್ರೆ ನಡೆದಿದ್ದು, ಈ ವೇಳೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಜತೆಯಲ್ಲಿ ಹೆಜ್ಜೆ ಹಾಕಿದ್ದರು. ಹಾಗೂ ನಟಿ ಪೂನಮ್ ಕೌರ್ ಸಹ ಇತ್ತೀಚೆಗೆ ಯಾತ್ರೆಯಲ್ಲಿ ಭಾಗಿಯಾಗಿದ್ದು, ರಾಹುಲ್ ಗಾಂಧಿ ಅವರ ಕೈ ಹಿಡಿದುಕೊಂಡಿದ್ದು, ಟ್ರೋಲ್ ಆಗಿತ್ತು.
ಇದನ್ನೂ ಓದಿ: Rahul Gandhi ಶಿರಡಿ ಸಾಯಿಬಾಬಾ ಇದ್ದಂತೆ: ರಾಬರ್ಟ್ ವಾದ್ರಾ
ಈಗಾಗಲೇ ತಮಿಳು ನಾಡು, ಕೆರಳ, ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮುಗಿದಿದ್ದು, ಕಳೆದ ವಾರದಿಂದ ತೆಲಂಗಾಣದಲ್ಲಿ ಯಾತ್ರೆ ನಡೆಯುತ್ತಿದೆ. ಈ ಮದ್ಯೆ, ತೆಲಂಗಾಣ ರಾಜ್ಯ ಕಾಂಗ್ರೆಸ್ ಯಾತ್ರೆಗೆ ಸಹಕರಿಸಲು ಹಾಗೂ ಯಶಸ್ವಿಯಾಗುವಂತೆ ನೋಡಿಕೊಳ್ಳಲು 10 ಸಮಿತಿಗಳನ್ನು ರಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ