
ಅಹಮದಾಬಾದ್: ಮೋರ್ಬಿ ಸೇತುವೆ (Morbi Bridge) ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಹಮದಾಬಾದ್ ನಗರ ಪಾಲಿಕೆ (Ahmedabad Municipal Corporation) ಸಾಬರಮತಿ ನದಿ ಮೇಲೆ ಕಟ್ಟಲಾದ ಅಟಲ್ ಸೇತುವೆಯ (Atal Bridge) ಮೇಲೆ ಗಂಟೆಗೆ ಕೇವಲ 3000 ಜನರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದೆ. 300 ಮೀ. ಉದ್ದದ 14 ಮೀ. ಅಗಲವಿರುವ ಅಟಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಸ್ಟ್ 27ರಂದು ಉದ್ಘಾಟಿಸಿದ್ದರು. ಇದರ ಬಳಿಕ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಸೇತುವೆಗೆ ಭೇಟಿ ನೀಡುತ್ತಿದ್ದಾರೆ.
‘ಈ ಸೇತುವೆಯು ಏಕಕಾಲಕ್ಕೆ 12,000 ಜನರ ಹೊರುವ ಸಾಮರ್ಥ್ಯ ಹೊಂದಿದೆ. ಆದರೂ ಮೋರ್ಬಿ ದುರಂತದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯ ಮೇಲೆ ಮಿತಿ ಹೇರಲು ನಿರ್ಧರಿಸಲಾಗಿದೆ. ಪ್ರತಿ ಗಂಟೆಗೆ 3,000 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು’ ನಗರ ಪಾಲಿಕೆ ಸೋಮವಾರ ಹೇಳಿದೆ. ಸಾಬರಮತಿ ರಿವರ್ ಫ್ರಂಟ್ ಅಭಿವೃದ್ಧಿ ಕಾರ್ಪೊರೇಷನ್ (Sabarmati Riverfront Development Corporation Limited ) (ಎಸ್‌ಆರ್‌ಎಫ್‌ಡಿಸಿಎಲ್) (SRFDCL) ಸಹ ಈ ಬಗ್ಗೆ ಮಾಹಿತಿ ನೀಡಿದೆ.
ಇದನ್ನು ಓದಿ: Gujarat ತೂಗು ಸೇತುವೆ ಕುಸಿತ: 132 ಜನರ ಬಲಿ; ಮುಂದುವರಿದ ರಕ್ಷಣಾ ಕಾರ್ಯ
ಅಟಲ್ ಸೇತುವೆಯ ರಚನೆ ತಾಂತ್ರಿಕವಾಗಿ ಹೆಚ್ಚು ಸುರಕ್ಷಿತ ಹಾಗೂ ಬಲವಾಗಿದೆ. ಆದರೂ, ಮೋರ್ಬಿ ಘಟನೆ ಹಿನ್ನೆಲೆ ಒಂದು ಗಂಟೆಗೆ 3,000 ಹೆಚ್ಚು ಜನರು ಭೇಟಿ ನೀಡಿದರೆ ಕೆಲ ಕಾಲ ಭೇಟಿ ನೀಡುವವರನ್ನು ತಡೆಯಲಾಗುತ್ತದೆ ಹಾಗೂ ಸ್ಥಳೀಯ ಆಡಳಿತದ ಜತೆಗೆ ಅವರು ಸಹಕರಿಸಬೇಕು ಎಂದೂ ಎಸ್‌ಆರ್‌ಎಫ್‌ಡಿಸಿಎಲ್ ಮಾಹಿತಿ ನೀಡಿದೆ.
ಇನ್ನು, ಬಡವರು ಸೇತುವೆಯನ್ನು ಬಳಸುವುದಕ್ಕೆ ಶುಲ್ಕ ವಿಧಿಸಬಾರದು ಎಂದು ಎಸ್‌ಆರ್‌ಎಫ್‌ಡಿಸಿಎಲ್ ಮುಖ್ಯಸ್ಥ ಕೇಶವ ವರ್ಮಾ ಸೇತುವೆಗೆ ಪ್ರವೇಶ ಶುಲ್ಕ ವಿಧಿಸಿದ್ದಕ್ಕೆ ಪ್ರತಿಭಟಿಸಿದಾಗ ಅಟಲ್ ಸೇತುವೆ ವಿವಾದಕ್ಕೆ ಸಿಲುಕಿತ್ತು. ಸದ್ಯ, ಸೇತುವೆ ಬಳಕೆದಾರರಿಗೆ ಪ್ರತಿ ಪ್ರವೇಶಕ್ಕೆ 30 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ಆದರೆ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಶ್ ಬರೋಟ್ ಅವರು "ಉಚಿತವಾಗಿ ಏನನ್ನೂ ನೀಡಬಾರದು" ಎಂದು ಕೇಶವ ವರ್ಮಾಗೆ ಪ್ರತಿವಾದ ಮಾಡಿದ್ದರು.
ಇದನ್ನೂ ಓದಿ: Gujaratನಲ್ಲಿ ಕುಸಿದ ತೂಗು ಸೇತುವೆ: 60ಕ್ಕೂ ಹೆಚ್ಚು ಮೃತದೇಹಗಳು ಹೊರಕ್ಕೆ; ಇನ್ನೂ ಹಲವರು ಅಪಾಯದಲ್ಲಿ ಸಿಲುಕಿರುವ ಶಂಕೆ..!
ಒಂದೇ ದಿನದಲ್ಲಿ 50,000 ಕ್ಕೂ ಹೆಚ್ಚು ನಿವಾಸಿಗಳು ಸೇತುವೆಗೆ ಹೇಗೆ ಭೇಟಿ ನೀಡಿದರು ಎಂಬುದನ್ನು ಉಲ್ಲೇಖಿಸುವ ಮೂಲಕ ಹಿತೇಶ್ ಬರೋಟ್ ಅದನ್ನು ಸಮರ್ಥಿಸಿಕೊಂಡರು. "ನಾನು ಈ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಇದು ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಮತ್ತು ಸಮಯ ಮಿತಿಯು ಜನರು ದಿನವಿಡೀ ಸೇತುವೆಯ ಮೇಲೆ ಉಳಿಯುವುದನ್ನು ತಪ್ಪಿಸುತ್ತದೆ. ಇಲ್ಲದಿದ್ದರೆ, ನೀವು ಗುಂಪನ್ನು ಹೇಗೆ ನಿರ್ವಹಿಸುತ್ತೀರಿ? ಸೇತುವೆಯ ಮೇಲಿನ ಜನದಟ್ಟಣೆಯನ್ನು ಪರಿಶೀಲಿಸಲು ಪೊಲೀಸರು ಸಹ ಇದನ್ನು ಮತ್ತು ಇತರ ಮಾರ್ಗಗಳನ್ನು ಸೂಚಿಸಿದ್ದಾರೆ’’ ಎಂದೂ ಅವರು ಹೇಳಿದರು.
ಇದನ್ನೂ ಓದಿ: ಮೊರ್ಬಿ ತೂಗು ಸೇತುವೆ ದುರಂತ ಸ್ಥಳ ಪರಿಶೀಲಿಸಿದ ಮೋದಿ, ಅಧಿಕಾರಿಗಳ ವಿರುದ್ಧ ಗರಂ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ