
ಇಂದು ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಲೈಕ್ಸ್ ಮತ್ತು ಕಮೆಂಟ್‌ಗಾಗಿ ಜನರು ಯಾವ ಹಂತಕ್ಕಾದ್ರೂ ಹೋಗಲು ಸಿದ್ಧರಾಗುತ್ತಾರೆ. ಎಷ್ಟೋ ಜನರು ಲೈಕ್ಸ್, ಕಮೆಂಟ್‌ಗಾಗಿ ಖಾಸಗಿ ಜೀವನದ ಹಲವು ವಿಷಯಗಳನ್ನು ಸಾರ್ವಜನಿಕ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರಂತೂ ಅಪಾಯಕಾರಿ ಸ್ಥಳಗಳಲ್ಲಿ ನಿಂತುಕೊಂಡು ಫೋಟೋ ಕ್ಲಿಕ್ಕಿಸಿ, ರೀಲ್ಸ್ ಮಾಡುತ್ತಾ ಪ್ರಾಣ ಕಳೆದುಕೊಂಡಿರುವ ಉದಾಹರಣಗಳಿವೆ. ಇದೀಗ ಇಂತಹವುದೇ ಒಂದು ವಿಡಿಯೋ ವೈರಲ್ ಆಗಿದ್ದು, ಮಕ್ಕಳ ಪ್ರಾಣವನ್ನೇ ಲೆಕ್ಕಿಸದೇ ಬಾಯಿ ಅಂಚಿನಲ್ಲಿ ನಿಂತು ರೀಲ್ಸ್ ಮಾಡಿದ್ದಾಳೆ.
ಮಹಿಳೆಯ ಹುಚ್ಚುತನದ ರೀಲ್ಸ್‌ನ್ನು ಐಪಿಎಸ್ ಅಧಿಕಾರಿ ವಿ.ಸಿ.ಸಜ್ಜನರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ 55 ಸಾವಿರಕ್ಕೂ ಅಧಿಕ ವ್ಯೂವ್ ಬಂದಿದ್ದು, ಮಹಿಳೆಯನ್ನು ಬಂಧಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಕೆಲ ನೆಟ್ಟಿಗರು, ಮಕ್ಕಳೊಂದಿಗೆ ಅಪಾಯಕಾರಿಯ ರೀಲ್ಸ್‌ಗಳನ್ನು ಕಮೆಂಟ್ ಮಾಡಿದ್ದಾರೆ.
ಇದು ಸಾಮಾಜಿಕ ಮಾಧ್ಯಮ ಹುಚ್ಚುತನದ ಪರಮಾವಧಿ! ಬಾವಿಯ ಅಂಚಿನಲ್ಲಿ ನಿಂತಿರುವ ಮಕ್ಕಳ ವೀಡಿಯೊಗಳನ್ನು ಮಾಡುವುದು ಸಾಹಸವಲ್ಲ. ಅದು ಮೂರ್ಖತನ. ಅದು ಆತ್ಮ*ಹತ್ಯಾ ಸನ್ನಿವೇಶ. ಸಾವಿನ ಅಂಚಿನಲ್ಲಿ ನಿಂತಿರುವ ಮಕ್ಕಳನ್ನು ರಕ್ಷಿಸಬೇಕಾದ ವಯಸ್ಕರನ್ನು ನೋಡಿದಾಗ, ಸಮಾಜ ಎಲ್ಲಿಗೆ ಹೋಗುತ್ತಿದೆ ಎಂದು ನಮಗೆ ಅರ್ಥವಾಗುವುದಿಲ್ಲ. ಸಾಮಾಜಿಕ ಮಾಧ್ಯಮ ಹುಚ್ಚುತನವನ್ನು ನಿಮ್ಮ ಜೀವನದ ಮೇಲೆ ತೆಗೆದುಕೊಳ್ಳಬೇಡಿ. ಇಂತಹ ಹುಚ್ಚು ಕೃತ್ಯಗಳನ್ನು ಪ್ರೋತ್ಸಾಹಿಸಬೇಡಿ ಎಂದು ಸಜ್ಜನರ್ ಬರೆದುಕೊಂಡಿದ್ದಾರೆ.
ಮಹಿಳೆಯೊಬ್ಬಳು ಬಾವಿ ಗೋಡೆಯ ಮೇಲೆ ನಿಂತಿರೋದನ್ನು ನೋಡಬಹುದು. ಆಕೆಯ ಪಕ್ಕ ಸುಮಾರು ಮೂರರಿಂದ ನಾಲ್ಕು ವರ್ಷದ ಮಕ್ಕಳಿವೆ. ಎರಡೂ ಕೈಗಳಲ್ಲಿ ಮಕ್ಕಳನ್ನು ಹಿಡಿದುಕೊಂಡು ಅವರನ್ನು ಬಾವಿಗೆ ಇಳಿಸಿದ ಮಹಿಳೆ ಅಲ್ಲಿಯೇ ನಿಂತುಕೊಂಡು ಸೊಂಟ ಬಳುಕಿಸಿದ್ದಾಳೆ. 30 ಸೆಕೆಂಡ್‌ನ ವಿಡಿಯೋದಲ್ಲಿ ಕೊನೆ ಕ್ಷಣ ಮಕ್ಕಳಿಬ್ಬರ ಕೈಯನ್ನು ಬಿಟ್ಟು ಮಹಿಳೆ ಡ್ಯಾನ್ಸ್ ಮಾಡಲು ಮುಂದಾಗುತ್ತಾಳೆ. ಮಹಿಳೆಯ ಈ ಅಪಾಯಕಾರಿ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಹಿಳೆಯನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಬೇಕು. ಮಗುವಿನ ಜೀವಕ್ಕೆ ಅಪಾಯ ತಂದೊಡ್ಡುವುದು ಗಂಭೀರ ಕ್ರಿಮಿನಲ್ ಅಪರಾಧ. ಭವಿಷ್ಯದಲ್ಲಿ ಇಂತಹ ನಡವಳಿಕೆಯನ್ನು ತಡೆಯಲು ಕಠಿಣ ಕಾನೂನು ಕ್ರಮ ಅಗತ್ಯ. ಮಹಿಳೆಗೆ ನಾಚಿಕೆಯಾಗಬೇಕು ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸರು ಆದಷ್ಟು ಬೇಗ ಮಹಿಳೆಯನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Dry Fish: ಒಣ ಮೀನು ಪುರುಷರಿಗೆ ಒಳ್ಳೇದು... ಆಗಾಗ್ಗೆ ಸೇವಿಸ್ತಾ ಇದ್ರೆ ಎಷ್ಟೆಲ್ಲಾ ಲಾಭಗಳಿವೆ ನೋಡಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ