ಬಿಗ್‌ಬಜಾರ್‌ ಮಾಲೀಕರ ಪೂರ್ಣ ಆಸ್ತಿ ಜಪ್ತಿಗೆ ಆದೇಶ

By Kannadaprabha NewsFirst Published Mar 19, 2021, 10:07 AM IST
Highlights

ಬಿಗ್ ಬಜಾರ್ ಮಾಲಿಕರ ಸಂಪೂರ್ಣ ಆಸ್ತಿ ಜಪ್ತಿ ಮಾಡಬೇಕು ಹಾಗೂ 20 ಲಕ್ಷ ಪ್ರಧಾನಿ ಪರಿಹಾರ ನಿಧಿಗೆ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದೆ. 

ನವದೆಹಲಿ (ಮಾ.19): ಬಿಗ್‌ ಬಜಾರ್‌ ಅನ್ನು ಒಳಗೊಂಡಿರುವ  ಫ್ಯೂಚರ್‌ ಗ್ರೂಪ್‌ ಅನ್ನು ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಸಂಸ್ಥೆ ಖರೀದಿಸುವುದಕ್ಕೆ ದೆಹಲಿ ಹೈಕೋರ್ಟ್‌ ಗುರುವಾರ ತಡೆ ನೀಡಿದೆ. 

ಅಲ್ಲದೆ ಫ್ಯೂಚರ್‌ ಗ್ರೂಪ್‌ ಮಾಲೀಕ ಕಿಶೋರ್‌ ಬಿಯಾನಿ ಆಸ್ತಿ ಜಪ್ತಿ ಮಾಡಬೇಕು. ಜೊತೆಗೆ ಪ್ರಧಾನಿ ಪರಿಹಾರ ನಿಧಿಗೆ ಬಿಯಾನಿ 20 ಲಕ್ಷ ರು. ಪಾವತಿ ಮಾಡಬೇಕು ಎಂದು ಸೂಚಿಸಿದೆ. 
ಫ್ಯೂಚರ್‌ ಗ್ರೂಪ್‌ ಅನ್ನು 24,713 ಕೋಟಿ ರು.ಗೆ ಖರೀದಿಸಲು 2020 ಆ.29ರಂದು ರಿಲಯನ್ಸ್‌ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಇದಕ್ಕಿಂತಲೂ ಮುನ್ನ ಅಮೆಜಾನ್‌ ಫ್ಯೂಚರ್ ಗ್ರೂಪ್‌ನ ಕೂಪನ್‌ನಲ್ಲಿ ಶೇ.49ರಷ್ಟುಪಾಲನ್ನು ಖರೀದಿಸಿತ್ತು.

ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಗುಡ್ ನ್ಯೂಸ್

 ಹೀಗಾಗಿ ಫ್ಯೂಚರ್‌ ಗ್ರೂಪ್‌ ತನ್ನ ಜೊತೆಗಿನ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಅಮೆಜಾನ್‌ ಸಂಸ್ಥೆ ಸಿಂಗಾಪುರದ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿತ್ತು. ಬಳಿಕ ಸಿಂಗಾಪುರ ಕೋರ್ಟ್‌ ಖರೀದಿ ಒಪ್ಪಂದಕ್ಕೆ ತಡೆ ನೀಡಿತ್ತು. ಇದೀಗ ಅಮೆಜಾನ್‌ ಸಲ್ಲಿಸಿದ ಅರ್ಜಿಗೆ ಸಂಬಂಧಿದಂತೆ ಒಪ್ಪಂದಕ್ಕೆ ದೆಹಲಿ ಹೈಕೋರ್ಟ್‌ ಕೂಡ ತಡೆ ನೀಡಿದೆ

click me!