ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಕೀಚಕನಿಗೆ ಕೇವಲ 26 ದಿನದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅಪಹರಣ ಕೇಸಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 75000 ರು. ದಂಡ ಕಟ್ಟಲು ಸೂಚಿಸಿದೆ.
ಜೈಪುರ (ಮಾ. 19): ಐದು ವರ್ಷದ ಬಾಲಕಿಯೊಬ್ಬಳನ್ನು ಅಪಹರಣಗೈದು ಅತ್ಯಾಚಾರವೆಸಗಿದ್ದ ದುರುಳನಿಗೆ ರಾಜಸ್ಥಾನದ ವಿಶೇಷ ಪೋಕ್ಸೋ ನ್ಯಾಯಾಲಯ, ಘಟನೆ ನಡೆದು ಕೇವಲ 26 ದಿನಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿದೆ.
ಫೆ.19ರಂದು ಸುನೀಲ್ ಕುಮಾರ್ (21) ಎಂಬಾತ ಅಪ್ರಾಪ್ತೆಯನ್ನು ಅಪಹರಣಗೈದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಈ ಸಂಬಂಧ ವಿಚಾರಣೆ ನಡೆಸಿದ್ದ ಪೋಕ್ಸೋ ಕೋರ್ಟ್, ಸುನೀಲ್ ಅತ್ಯಚಾರ ಕೇಸಲ್ಲಿ ಗಲ್ಲು ಶಿಕ್ಷೆ, ಅಪಹರಣ ಕೇಸಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 75000 ರು. ದಂಡ ಕಟ್ಟಲು ಸೂಚಿಸಿದೆ.
ತಮ್ಮ ಪುತ್ರಿಗೆ ಕಿರುಕುಳ ನೀಡಿದ ದುಷ್ಕರ್ಮಿಗೆ ಕೋರ್ಟ್ ವಿಧಿಸಿದ ಶಿಕ್ಷೆಯಿಂದ ಸಂತಸವಾಗಿದೆ ಎಂದು ಸಂತ್ರಸ್ತೆ ಪೋಷಕರು ತಿಳಿಸಿದ್ದಾರೆ.