Tablighi Jamaat ಸದಸ್ಯರಿಗೆ ಆಶ್ರಯ ನೀಡಿದ್ದು ಅಪರಾಧವೇ? : ದೆಹಲಿ ಹೈಕೋರ್ಟ್!

Suvarna News   | Asianet News
Published : Nov 12, 2021, 11:54 PM ISTUpdated : Nov 12, 2021, 11:58 PM IST
Tablighi Jamaat ಸದಸ್ಯರಿಗೆ ಆಶ್ರಯ ನೀಡಿದ್ದು ಅಪರಾಧವೇ? : ದೆಹಲಿ ಹೈಕೋರ್ಟ್!

ಸಾರಾಂಶ

*ತಬ್ಲಿಘಿ ಜಮಾತ್ ಸದಸ್ಯರಿಗೆ ಆಶ್ರಯ ನೀಡಿದ್ದ ಭಾರತೀಯರು *ಕೊರೋನಾ ನಿಯಮ ಉಲ್ಲಂಘನೆ ಎಂದು  FIR  *ಜಮಾತ್ ಸದಸ್ಯರಿಗೆ ಆಶ್ರಯ ನೀಡಿದ್ದು ಅಪರಾಧವೇ? *ದೆಹಲಿ ಪೊಲೀಸರಿಗೆ ಹೈಕೋರ್ಟ್‌ ಪ್ರಶ್ನೆ..!  

ನವದೆಹಲಿ(ನ.12): ಕಳೆದ ವರ್ಷ ಕೋವಿಡ್-19 ಲಾಕ್‌ಡೌನ್ (Corona Lockdown) ಮಧ್ಯೆ ತಬ್ಲಿಘಿ ಜಮಾತ್ (Tablighi Jamaat) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದೇಶಿಯರಿಗೆ ಕೆಲವು ಭಾರತೀಯರು ಆಶ್ರಯ ನೀಡಿ ಯಾವ ಅಪರಾಧ ಎಸಗಿದ್ದಾರೆ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ನಗರ ಪೊಲೀಸರನ್ನು ಪ್ರಶ್ನಿಸಿದೆ. ಜನರು ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ತಂಗಲು ಸರ್ಕಾರ ಆಗ ನಿಷೇಧ ಹೇರಿರಲಿಲ್ಲ ಎಂದು ಅದು ಹೇಳಿದೆ. ತಬ್ಲಿಘಿ ಜಮಾತ್  ವಿರುದ್ಧದ ಎಫ್‌ಐಆರ್‌ಗಳನ್ನು (FIR)  ರದ್ದುಗೊಳಿಸುವ ನಿಟ್ಟಿನಲ್ಲಿ ಕೆಲವರು ಸಲ್ಲಿಸಿದ್ದ ಮನವಿ ಅರ್ಜಿಗಳನ್ನು ನ್ಯಾಯಮೂರ್ತಿ ಮುಕ್ತಾ ಗುಪ್ತಾ (Mukta Gupta) ಆಲಿಸುತ್ತಿದ್ದರು.  "ಕೊರೋನಾ ಲಾಕ್‌ಡೌನ್ ವಿಧಿಸುವ ಮೊದಲು ಜಮಾತ್‌ನಲ್ಲಿ ಪಾಲ್ಗೊಂಡವರು ಆಶ್ರಯ ಪಡೆದಿದ್ದಾರೆ ಮತ್ತು ಸರ್ಕಾರದ ಯಾವುದೇ ನಿರ್ಬಂಧಗಳನ್ನು ಉಲ್ಲಂಘಿಸಿಲ್ಲ" ಎಂದು ನ್ಯಾಯಮೂರ್ತಿ ಮುಕ್ತಾ ಗುಪ್ತಾ ಹೇಳಿದರು.

ಇದ್ದಕ್ಕಿದ್ದಂತೆ, ಲಾಕ್‌ಡೌನ್ ವಿಧಿಸಿದಾಗ, ಅವರು ಎಲ್ಲಿಗೆ ಹೋಗುತ್ತಾರೆ?

ಮನವಿ ಪರೀಶಿಲಿಸಿದ ನ್ಯಾಯಮೂರ್ತಿ  ಗುಪ್ತಾ "ಇದ್ದಕ್ಕಿದ್ದಂತೆ, ಲಾಕ್‌ಡೌನ್ ವಿಧಿಸಿದಾಗ, ಅವರು ಎಲ್ಲಿಗೆ ಹೋಗುತ್ತಾರೆ? ಅವರು ಮಾಡಿದ ಅಪರಾಧವೇನು? ಮಧ್ಯಪ್ರದೇಶದ ನಿವಾಸಿಗಳು ದೆಹಲಿಯಲ್ಲಿ (Delhi) ಯಾವುದೇ ಮಸೀದಿ, ದೇವಸ್ಥಾನ ಅಥವಾ ಗುರುದ್ವಾರದಲ್ಲಿ ಉಳಿಯಲು ಯಾವುದೇ ನಿರ್ಬಂಧವಿದೆಯೇ? ಅವರು ಎಲ್ಲಿ ಬೇಕಾದರೂ ಉಳಿಯಬಹುದು.  ಅವರೊಂದಿಗೆ ಉಳಿದುಕೊಂಡಿರುವವರನ್ನು ಎಲ್ಲರೂ ಹೊರಹಾಕುವ ಸೂಚನೆ ಇತ್ತೆ? ಎಂದು ಹೇಳಿದರು.

Gurgaon: Namaz ಸಲ್ಲಿಕೆಗೆ ವಿರೋಧ : ವಾಲಿಬಾಲ್ ಕೋರ್ಟ್ ನಿರ್ಮಿಸುತ್ತೇವೆ ಎಂದ ಪ್ರತಿಭಟನಾಕಾರರು!

"ನಾನು ವಿಷಯವನ್ನು ಹೊರತಂದಿದ್ದೇನೆ ... ಆ ಸಮಯದಲ್ಲಿ ಸ್ಥಳಗಳನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲದಿರುವಾಗ ನಿಯಮ ಎಲ್ಲಿ ಉಲ್ಲಂಘನೆಯಾಗಿದೆ ಎಂದು ನೀವು ನನಗೆ ಹೇಳುತ್ತೀರಿ? ಅವರು ಹೊರಗೆ ಹೋಗಿದ್ದಾರೆ, ಅವರು (ಲಾಕ್‌ಡೌನ್) ಅಧಿಸೂಚನೆಯನ್ನು ಉಲ್ಲಂಘಿಸಿದ್ದಾರೆ ಎಂದು ನನಗೆ ಅರ್ಥವಾಗುತ್ತದೆ. ಲಾಕ್‌ಡೌನ್ ವಿಧಿಸಿದಾಗ , ಇಲ್ಲಿ ವಾಸಿಸುವ ಯಾರಿಗೂ ಯಾವುದೇ ನಿರ್ಬಂಧವಿರಲಿಲ್ಲ," ಎಂದು ನ್ಯಾಯಾಲಯವು ಹೇಳುವ ಮೂಲಕ ಅರ್ಜಿಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ದೆಹಲಿ ಪೊಲೀಸರಿಗೆ ಸಮಯ ನೀಡಿದೆ.

ಪೊಲೀಸ್ ಪರ ವಕೀಲರು ಸ್ಥಿತಿ ವರದಿ ಸಲ್ಲಿಸಲು ಸಮಯ ಕೋರಿದರು ಮತ್ತು ಆ  ಸಮಯದಲ್ಲಿ ಎಲ್ಲ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿತ್ತು ಎಂದು ಹೇಳಿದರು. ಲಾಕ್‌ಡೌನ್ ವಿಧಿಸುವ ಮೊದಲೇ ಜಮಾತ್‌ ನಲ್ಲಿ ಪಾಲ್ಗೊಂಡವರು  ಅಲ್ಲಿ ಆಶ್ರಯ ಪಡೆದಿದ್ದರು. ಹಾಗೂ ಯಾರೂ ಕೋವಿಡ್‌ಗೆ ಪಾಸಿಟಿವ್‌ (Covid positive) ಬರಲಿಲ್ಲ ಹಾಗಾಗಿ ಅವರ ಕಕ್ಷಿದಾರರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ ಎಂದು ಅರ್ಜಿದಾರರ ವಕೀಲರು ಹೇಳಿದರು.

ಅವರಿಗೆ ಎಲ್ಲಿಯೂ ಹೋಗಲು ಅವಕಾಶವಿರಲಿಲ್ಲ! 

ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೆಲ ವೈಯುಕ್ತಿಕ ಅರ್ಜಿಗಳು ಕೂಡ ನೀಡಲಾಗಿದ್ದು, ಲಾಕ್‌ಡೌನ್‌ನಿಂದ ಪ್ರಯಾಣಿಸಲು ಸಾಧ್ಯವಾಗದ  ವಿದೇಶಿಯರಿಗೆ ಆಶ್ರಯ ನೀಡಿದವರಾಗಿದ್ದಾರೆ. ಇತರ ಅರ್ಜಿಗಳು ವಸತಿ ಸೌಲಭ್ಯಗಳನ್ನು ಒದಗಿಸಿದ ಆರೋಪ ಹೊತ್ತಿರುವ ಆಡಳಿತ ಸಮಿತಿ ಸದಸ್ಯರು ಅಥವಾ ಮಸೀದಿಗಳ ಉಸ್ತುವಾರಿಗಳಂತಹ ವ್ಯಕ್ತಿಗಳಿಂದ ಬಂದಿವೆ. ವಕೀಲರಾದ ಅಶಿಮಾ ಮಂಡ್ಲಾ ಮತ್ತು ಮಂದಾಕಿನಿ ಸಿಂಗ್ ಅವರ ಮೂಲಕ, ಫಿರೋಜ್ ಮತ್ತು ರಿಜ್ವಾನ್  ಸಲ್ಲಿಸಿದ ಅರ್ಜಿಯಲ್ಲಿ, ತಲಾ ನಾಲ್ಕು ತಬ್ಲಿಘಿಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ  ಆಶ್ರಯ ನೀಡಿದ್ದು, ಲಾಕ್‌ಡೌನ್ ಸಮಯದಲ್ಲಿ ಅವರಿಗೆ ಎಲ್ಲಿಯೂ ಹೋಗಲು ಅವಕಾಶವಿರಲಿಲ್ಲ ಎಂದು ಹೇಳಿದ್ದಾರೆ.

Salman Khurshid;1984ರ ದಂಗೆಯಲ್ಲಿ ಹಿಂದೂ, ಸಿಖ್‌ರ ಸಾವಿಗೆ ಮುಸ್ಲಿಮರ ವಿರುದ್ಧ ಮಾಡಿದ ಪಾಪ ಕಾರಣ; ಕಾಂಗ್ರೆಸ್ ನಾಯಕ!

ಎಫ್‌ಐಆರ್ ಅಥವಾ ಚಾರ್ಜ್‌ಶೀಟ್‌ನಲ್ಲಿ ಕೋವಿಡ್‌ನಿಂದ ಸೋಂಕಿಗೆ ಒಳಗಾಗಿದ್ದಾರೆಂದು ಸೂಚಿಸಲು ಯಾವುದೇ ದಾಖಲಾತಿಗಳಿಲ್ಲ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ (Epidemic Diseases Act), 1897 ರ ಅಡಿಯಲ್ಲಿ ಅವರು ರೋಗವನ್ನು ಹರಡುವ ಆರೋಪವನ್ನು ಮಾಡಲಾಗುವುದಿಲ್ಲ ಎಂದು ಫಿರೋಜ್, ರಿಜ್ವಾನ್ ಮತ್ತು ಇತರ ಅರ್ಜಿದಾರರು  ಹೇಳಿದ್ದಾರೆ ಈ ಹಿಂದೆ, ಪ್ರತಿ ಆರೋಪಿಗಳ  ವಾಸ್ತವ್ಯದ ಅವಧಿ ಮತ್ತು ಲಾಕ್‌ಡೌನ್ ಆದೇಶಗಳನ್ನು ನೀಡಿದ ನಂತರ ಅಥವಾ ಮೊದಲು ವಸತಿ ಸೌಲಭ್ಯವನ್ನು ನೀಡಲಾಗಿದೆಯೇ ಎಂಬುದನ್ನು ತಿಳಿಸುವ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ತಿಳಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ
ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್