ಭಾರತದ ಅತೀ ದೊಡ್ಡ, ಖ್ಯಾತ ತಿಹಾರ್ ಜೈಲು ಸ್ಥಳಾಂತರ, 67 ವರ್ಷ ಇತಿಹಾಸದ ಜೈಲು ಶಿಫ್ಟ್ ಯಾಕೆ?

ಭಾರತದ ಅತೀ ದೊಡ್ಡ ಜೈಲು, ಭಾರಿ ಖ್ಯಾತಿ ಗಳಿಸಿರುವ ತಿಹಾರ್ ಜೈಲು ಸ್ಥಳಾಂತರಗೊಳ್ಳುತ್ತಿದೆ. 1958ರಲ್ಲಿ ಆರಂಭಗೊಂಡ ಈ ಜೈಲು ಇದೀಗ ಸ್ಥಳಾಂತರಕ್ಕೆ ಕಾರಣವೇನು?

Delhi Govt plan to shift Tihar jail allocated rs 10 crore for survey

ದೆಹಲಿ(ಮಾ.26) ಅಪರಾಧಿಗಳು, ಭ್ರಷ್ಟಾಚಾರಿಗಳು, ಆರೋಪಿಗಳು, ಗ್ಯಾಂಗ್‌ಸ್ಟರ್, ಭಯೋತ್ಪಾದಕರು ಸೇರಿದಂತೆ ಭಯಾನಕ ಇತಿಹಾಸವಿರುವ ಹಲವರನ್ನು ಸುರಕ್ಷಿತವಾಗಿ ಬಂಧಿಸಿಡಲು, ಶಿಕ್ಷೆ ವಿಧಿಸಲು ಕೇಳಿಬರುವ ಮುಂಚೂಣಿಯ ಹೆಸರು ತಿಹಾರ್ ಜೈಲು. ಸ್ವತಂತ್ರ ಭಾರತದಲ್ಲಿ ನಿರ್ಮಾಣಗೊಂಡ ಅತೀ ದೊಡ್ಡ ಜೈಲು ಅನ್ನೋ ಹೆಗ್ಗಳಿಕೆಗೆ ತಿಹಾರ್ ಜೈಲು ಪಾತ್ರವಾಗಿದೆ. 1958ರಲ್ಲಿ ಆರಂಭಗೊಂಡ ಈ ತಿಹಾರ್ ಜೈಲಿಗೆ 67 ವರ್ಷಗಳ ಇತಿಹಾಸವಿದೆ. ಇದೀಗ ಈ ತಿಹಾರ್ ಜೈಲನ್ನು ಸ್ಥಳಾಂತರ ಮಾಡಲಾಗುತ್ತಿದೆ.

10 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಜೈಲು
ದೆಹಲಿ ಸರ್ಕಾರ ಈ ಘೋಷಣೆ ಮಾಡಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ತಿಹಾರ್ ಜೈಲು ಸ್ಥಳಾಂತರದ ಕುರಿತು ಸ್ಥಳ ಗುರುತಿಸುವಿಕೆ, ಸಮೀಕ್ಷೆಗೆ 10 ಕೋಟಿ ರೂಪಾಯಿ ಮೀಸಲಿಡಲಾಗಿದೆ. ತಿಹಾರ್ ಜೈಲಿನ ಸ್ಥಳವಕಾಶ ಕೊರತೆ ಎದುರಾಗುತ್ತಿದೆ. ಅಪರಾಧಿಗಳು, ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕೂಡಿ ಹಾಕಲು, ಶಿಕ್ಷೆ ವಿಧಿಸಲು ಸ್ಥಳವಕಾಶ ಸಾಲುತ್ತಿಲ್ಲ. ಹೀಗಾಗಿ ತಿಹಾರ್ ಜೈಲನ್ನು ಬೇರೆಗೆ ಸ್ಥಳಾಂತರಿಸಲು ಈ ಯೋಜನೆ ತರಲಾಗಿದೆ. ಕೈದಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಭದ್ರತೆ ಒದಿಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಳಾಂತರ ಮಾಡಲು ದೆಹಲಿ ಸರ್ಕಾರ ಮುಂದಾಗಿದೆ. 

Latest Videos

ಜೈಲಿನಿಂದ ಹೊರಗೆ ಬಂದ ಅರವಿಂದ್ ಕೇಜ್ರಿವಾಲ್ ಸಂಭ್ರಮ ಹೇಗಿತ್ತು? ಫೋಟೋಗಳಲ್ಲಿ ನೋಡಿ

ದೆಹಲಿ ಹೊರವಲಯದಲ್ಲಿ ನೂತನ ತಿಹಾರ್ ಜೈಲು ನಿರ್ಮಾಣ ಮಾಡಲು ದೆಹಲಿ ಸರ್ಕಾರ ಮುಂದಾಗಿದೆ. ಒಟ್ಟು 9 ಜೈಲು ಕಾಂಪ್ಲೆಕ್ಸ್ ಸೇರಿ 400 ಎಕರೆಯಲ್ಲಿರುವ ತಿಹಾರ್ ಜೈಲನ್ನು ಇದೀಗ ದೆಹಲಿ ಹೊರವಲಯಕ್ಕೆ ಸ್ಥಳಾಂತರಗೊಳಿಸಲು ದೆಹಲಿ ಸರ್ಕಾರ ಮುಂದಾಗಿದೆ. ಅತೀ ಹೆಚ್ಚು ಅಪರಾಧಿಗಳನ್ನು, ಆರೋಪಿಗಳನ್ನು ಹಾಗೂ ಶಿಕ್ಷೆ ವಿಧಿಸಿದವರನ್ನು ಏಕಕಾಲಕ್ಕೆ ಕೂಡಿ ಹಾಕಬಲ್ಲ ಜೈಲು ಇದಾಗಿದೆ.  

ತಿಹಾರ್ ಜೈಲು ಇತಿಹಾಸ
ಪಶ್ಚಿಮ ದೆಹಲಿ ತಿಲಕ ನಗರ ಹಾಗೂ ಹಿರಿನಗರದ ನಡುವೆ ತಿಹಾರ್ ಜೈಲು ಕಾಂಪ್ಲೆಕ್ಸ್ ಇದೆ. ಇದೀಗ ತಿಹಾರ್ ಜೈಲಿನಲ್ಲಿ ಒಟ್ಟು 19,000 ಖೈದಿಗಳಿದ್ದಾರೆ. 1958ರಲ್ಲಿ ಈ ಜೈಲು ಆರಂಭಿಸಲಾಯಿತು. ಭೌಗೋಳಿಕ ಕಾರಣದಿಂದ ಆರಂಭಿಕ ಹಂತದಲ್ಲಿ ಈ ಜೈಲುನ್ನು ಪಂಜಾಬ್ ಆಡಳಿತದಲ್ಲಿತ್ತು. 1966ರಲ್ಲಿ ತಿಹಾರ್ ಜೈಲು ಆಡಳಿತವನ್ನು ದೆಹಲಿಗೆ ವರ್ಗಾಯಿಸಲಾಯಿತು. ಬಳಿಕ ಹಂತ ಹಂತವಾಗಿ ತಿಹಾರ್ ಜೈಲು ವಿಸ್ತರಣೆಯಾಗುತ್ತಲೇ ಬಂದಿದೆ.

ತಿಹಾರ್ ಜೈಲಿನಲ್ಲಿದ್ದ ಜನಪ್ರಿಯ ಖೈದಿಗಳ ವಿವರ
ತಿಹಾರ್ ಜೈಲಿನಲ್ಲಿ ಹೈಪ್ರೊಫೈಲ್ ಖೈದಿಗಳಿಂದ ಹಿಡಿದು, ಲೋ ಪ್ರೊಫೈಲ್, ಭಯಾನಕ ಕ್ರಿಮಿನಲ್ಸ್ ವರೆಗೂ ಇಲ್ಲಿ ಕಳೆದಿದ್ದಾರೆ, ಶಿಕ್ಷೆ ಅನುಭವಿಸಿದ್ದಾರೆ. ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಾಜಿ ಸಚಿವರಾದ ಸತ್ಯೇಂದ್ರ ಜೈನ್, ಸಂಜಯ್ ಸಿಂಗ್ ಕೂಡ ಇದೇ ಜೈಲಿನಲ್ಲಿ ಕಳೆದಿದ್ದಾರೆ. ಬಿಹಾರ ಅಂದಿನ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಅಂತಾರಾಷ್ಟ್ರೀಯ ಸೀರಿಯಲ್ ಕಿಲ್ಲರ್ ಚಾರ್ಲೆಸ್ ಶೋಭರಾಜ್, ಗ್ಯಾಂಗ್‌ಸ್ಟರ್ ಚೋಟಾರಾಜನ್ ಸೇರಿದಂತೆ ಹಲವು ಹೈಫ್ರೋಫೈಲ್ ಈ ಜೈಲಿನಲ್ಲಿ ಕಳೆದಿದ್ದಾರೆ.

ಬ್ಲಾಕ್ ವಾರೆಂಟ್ ಮೂಲಕ ಜೈಲು ಸೇರಿದ ಖ್ಯಾತರು
ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಕೇಂದ್ರ ಸಚಿವ ಪಿ ಚಿದಂರಬರ್, ಕುಸ್ತಿಪಟು ಸುಶೀಲ್ ಕುಮಾರ್ ಸೇರಿದಂತೆ ಹಲವು ಖ್ಯತನಾಮರು ಇದೇ ಜೈಲಿನಲ್ಲಿ ಕಳೆದಿದ್ದಾರೆ.

'ಮಿಸ್ಟರ್ ಕುಮಾರಸ್ವಾಮಿ ನಾನು ತಿಹಾರ್ ಜೈಲು ನೋಡಿದ್ದೇನೆ' ಹೆಚ್‌ಡಿಕೆ ವಿರುದ್ಧ ಡಿಕೆ ಶಿವಕುಮಾರ ವಾಗ್ದಾಳಿ
 

vuukle one pixel image
click me!