ಇಡಿಯಿಂದ ಅರವಿಂದ್ ಕೇಜ್ರಿವಾಲ್ ಬಂಧನ ? ಭೀತಿ ವ್ಯಕ್ತಪಡಿಸಿದ ಎಎಪಿ ನಾಯಕರು

By Anusha KbFirst Published Jan 4, 2024, 9:20 AM IST
Highlights

ಅಬಕಾರಿ ಹಗರಣದಲ್ಲಿ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ ಅರವಿಂದ್ ಕೇಜ್ರಿವಾಲ್ ಅವರಿಗೆ ಒಟ್ಟು ಮೂರು ಬಾರಿ ನೋಟೀಸ್ ಕಳುಹಿಸಿತ್ತು. ಈ ನೋಟಿಸ್‌ಗೆ ಅರವಿಂದ್ ಕೇಜ್ರಿವಾಲ್ ಲಿಖಿತ ಉತ್ತರ ಕಳುಹಿಸಿದ್ದರು. ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ.

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಅವರು ಮೂರನೇ ಬಾರಿಯೂ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಗೈರಾಗಿರುವ ಹಿನ್ನೆಲೆಯಲ್ಲಿ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿ ಅವರನ್ನು ಬಂಧಿಸಬಹುದು ಎಂದು ಎಎಪಿ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಬಕಾರಿ ಹಗರಣದಲ್ಲಿ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ ಅರವಿಂದ್ ಕೇಜ್ರಿವಾಲ್ ಅವರಿಗೆ ಒಟ್ಟು ಮೂರು ಬಾರಿ ನೋಟೀಸ್ ಕಳುಹಿಸಿತ್ತು. ಈ ನೋಟಿಸ್‌ಗೆ ಅರವಿಂದ್ ಕೇಜ್ರಿವಾಲ್ ಲಿಖಿತ ಉತ್ತರ ಕಳುಹಿಸಿದ್ದರು. ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ. ಆದರೆ ಈಗ 3ನೇ ಬಾರಿಯೂ ಗೈರಾದ ಹಿನ್ನೆಲೆಯಲ್ಲಿ ಅವರ ನಿವಾಸದ ಮೇಲೆ ದಾಳಿ ನಡೆಯಬಹುದು. ಅವರನ್ನು ಬಂಧಿಸಬಹುದು ಎಂದು ಎಎಪಿ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್, ಜಾಸ್ಮೀನ್ ಶಾ ಮುಂತಾದವರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಇಂದು ಮುಂಜಾನೆ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಬಹುದು. ಅವರ ನಿವಾಸದ ಮೇಲೆ ದಾಳಿ ನಡೆಯಬಹುದು ಎಂದು ಕೆಲ ಎಎಪಿ ನಾಯಕರು ಟ್ವಿಟ್ ಮಾಡಿದ್ದಾರೆ. ಎಎಪಿ ನಾಯಕಿ ಅತಿಶಿ ಟ್ವಿಟ್ ಮಾಡಿದ್ದು, ಇಡಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ಮುಂಜಾನೆ ದಾಳಿ ಮಾಡಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನುವ ಸುದ್ದಿಗಳು ಬರುತ್ತಿವೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. 

Latest Videos

ಆಪ್ ಸಂಸದ ಸಂಜಯ್ ಸಿಂಗ್‌ಗೆ ಮತ್ತೆ ನಿರಾಸೆ, ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್!

ಹಿಂದಿ ನ್ಯೂಸ್ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಜಾರಿ ನಿರ್ದೇಶನಾಲಯವೂ ಸಮನ್ಸ್ ನೀಡಿದ ಸಮಯವನ್ನು ಪ್ರಶ್ನಿಸಿದ್ದು, ಅರವಿಂದ್ ಕೇಜ್ರೀವಾಲ್ ಅವರು ಇಡಿಯ ಪ್ರತಿ ಪ್ರಶ್ನೆಗೂ ಉತ್ತರಿಸಲು ಸಿದ್ಧರಿದ್ದಾರೆ ಎಂದು ಹೇಳಿದ್ದರು. ಇಡಿಯ ಪ್ರತಿ ಪ್ರಶ್ನೆಗೆ ಅವರು ಉತ್ತರಿಸಲಿದ್ದಾರೆ. ಆದರೆ ಇಡಿಯವರು ಅರವಿಂದ್ ಕೇಜ್ರೀವಾಲ್ ಅವರನ್ನು ಏಕೆ ವಿಚಾರಣೆಗೆ ಕರೆಸುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು. ಅವರನ್ನು ಸಾಕ್ಷಿಯಾಗಿ ಕರೆಯುತ್ತಿದ್ದಾರೊ ಅಥವಾ ಆರೋಪಿ ಎಂದು ಕರೆಸುತ್ತಿದ್ದಾರೋ ಅಥವಾ ದೆಹಲಿ ಸಿಎಂ ಅಥವಾ ಎಎಪಿ ರಾಷ್ಟ್ರೀಯ ಸಂಚಾಲಕ ಎಂಬ ಕಾರಣಕ್ಕೆ ಕರೆಸುತ್ತಿದ್ದಾರೋ ಎಂದು ಪ್ರಶ್ನಿಸಿದ ಅತಿಶಿ, ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಬಂದ ಈ ಇಡಿ ಸಮನ್ಸ್‌ ಹಲವು ಪ್ರಶ್ನೆಗಳನ್ನು ಎತ್ತುತ್ತಿದೆ ಎಂದು ಹೇಳಿದ್ದಾರೆ.  

ಅಲ್ಲದೇ ಇಡಿ ಏನಾದರೂ ಪ್ರಶ್ನೆ ಕೇಳಬೇಕು ಎಂದಿದ್ದಾರೆ ಪ್ರಶ್ನಾವಳಿಯನ್ನು ಅವರು ಕಳುಹಿಸಬೇಕು. ಅದಕ್ಕೆ ಲಿಖಿತ ರೂಪದಲ್ಲಿ ಅರವಿಂದ್ ಕೇಜ್ರಿವಾಲ್‌ ಉತ್ತರಿಸಲಿದ್ದಾರೆ ಎಂದು ಅತಿಶಿ ಹೇಳಿದ್ದಾರೆ.


850 ಕೋಟಿ ರೂ ದಿಲ್ಲಿ ಭೂ ಹಗರಣ ಬೆಳಕಿಗೆ, ಕೇಜ್ರಿವಾಲ್ ಮುಖ್ಯ ಕಾರ್ಯದರ್ಶಿ ಅಮಾನತಿಗೆ ಶಿಫಾರಸು!

click me!