ಸೋಂಕಿತರ ಚಿಕಿತ್ಸೆಗೆ ನೆರವಾಗಲು ವೆಬ್‌ಸೈಟ್ ಆರಂಭಿಸಿದ ಡಾಟಾ ಕನ್ಸಲ್ಟೆಂಟ್!

By Suvarna NewsFirst Published May 14, 2021, 6:12 PM IST
Highlights
  • ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗಲು ವೆಬ್‌ಸೈಟ್
  • ಪ್ಲಾಸ್ಮಾ ದಾನಿಗಳಿಗೂ, ಪ್ಲಾಸ್ಮಾ ಅಗತ್ಯವಿರುವ ಸೋಂಕಿತರಿಗೂ ನೆರವು
  • 26 ವರ್ಷದ ದಿವ್ಯಾ ಜೈನ್ ಕಾರ್ಯದಿಂದ 1,500 ಸೋಂಕಿತರು ಗುಣಮುಖ

ನವದೆಹಲಿ(ಮೇ.14): ಕೊರೋನಾ ವೈರಸ್ ವಕ್ಕರಿಸಿದ ಬೆನ್ನಲ್ಲೇ ಹಲವರು ಹಗಳಿರುಳು ನೆರವು ನೀಡುತ್ತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡೋ ಮೂಲಕ ಜನರ ಪ್ರಾಣ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿರುವ ಹಿಂಬಾಲಕರು, ಗೆಳೆಯರನ್ನು ಸದುಪಯೋಗ ಪಡಿಸಿಕೊಳ್ಳಲು 26 ವರ್ಷದ ಡಾಟಾ ಕನ್ಸಲ್ಟೆಂಟ್ ದಿವ್ಯಾ ಜೈನ್ ಪ್ಲಾಸ್ಮಾ ದಾನಿಗಳು ಹಾಗೂ ಪ್ಲಾಸ್ಮಾ ಅಗತ್ಯತೆ ಇರುವವರಿಗಾಗಿ ಹೊಸ ವೆಬ್‌ಸೈಟ್ ಆರಂಭಿಸಿದ್ದಾರೆ.

9ನೇ ಬಾರಿ ಪ್ಲಾಸ್ಮಾ ದಾನ ಮಾಡಿ ಹಲವರ ಜೀವ ಉಳಿಸಿದ ಬೆಂಗಳೂರಿನ ವೈದ್ಯ!.

ಕೊರೋನಾ ಸೋಂಕಿತರ ಶೀಘ್ರ ಚೇತರಿಕಿಗೆ ಪ್ಲಾಸ್ಮಾ ಚಿಕಿತ್ಸೆ ಉತ್ತಮವಾಗಿದೆ. ಹೀಗಾಗಿ ಸೋಂಕಿತರಿಗೆ ನೆರವಾಗಲು ದಿವ್ಯಾ ಜೈನ್, ಹೊಸ ವೈಬ್‌ಸೈಟ್ ತೆರೆದಿದ್ದಾರೆ. ಈ ವೆಬ್‌ಸೈಟ್ ಮೂಲಕ ಪ್ಲಾಸ್ಮಾ ದಾನಿಗಳು ಸುಲಭವಾಗಿ ಕೊರೋನಾ ಸೋಂಕಿತರ ಜೀವ ಉಳಿಸಬಹುದು.  ಇಷ್ಟೇ ಅಲ್ಲ ಪ್ಲಾಸ್ಮಾ ಅಗತ್ಯವಿರುವ ಸೋಂಕಿತರು ವೆಬ್‌ಸೈಟ್ ಮೂಲಕ ಪ್ಲಾಸ್ಮಾ ಸುಲಭವಾಗಿ ಪಡೆದುಕೊಳ್ಳಬುಹುದು.

ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯವಾಗಿರುವ ದಿವ್ಯಾ ಜೈನ್‌ಗೆ ಪ್ರತಿ ದಿನ ಸಾವಿರಾರು ಮೆಸೇಜ್ ಬರುತ್ತಿತ್ತು. ಆಕ್ಸಿಜನ್ , ಬೆಡ್ , ಆರ್ಥಿಕ ಸಹಾಯ ಸೇರಿದಂತೆ ಹಲವು ಮನವಿಗಳು ಬರುತ್ತಿತ್ತು. ಹೀಗಾಗಿ ಏನಾದರೂ ಸಹಾಯ ಮಾಡಲೇಬೇಕು ಎಂದು ತನ್ನ 7 ಮಂದಿ ಕಾಲೇಜು ಸಹಪಾಠಿಗಳನ್ನು ಸೇರಿಸಿಕೊಂಡು  ವೆಬ್‌ಸೈಟ್ ತೆರೆದಿದ್ದಾರೆ.

ಬರೋಬ್ಬರಿ 14 ಸಲ ಪ್ಲಾಸ್ಮಾ ದಾನ ಮಾಡಿದ ವ್ಯಕ್ತಿ..!

ದಿವ್ಯಾ ಸೇರಿದಂತೆ ಈ ವೆಬ್‌ಸೈಟ್ ಹಿಂಭಾಗದಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಈಗಾಗಲೇ ಹಲವು ಪ್ಲಾಸ್ಮಾ ದಾನಿಗಳು ಸೋಂಕಿತರ ಚಿಕಿತ್ಸೆಗೆ ನೆರವಾಗಿದ್ದಾರೆ.  ಇತ್ತ ಅಗತ್ಯ ಇರುವ ಸೋಂಕಿತರು ಪ್ಲಾಸ್ಮಾ ಅಶ್ಯಕತೆ ಇದ್ದರೆ, ಈ ವೆಬ್‌ಸೈಟ್‌ಗೆ ತೆರಳಿ ಸುಲಭವಾಗಿ ಪ್ಲಾಸ್ಮಾ ಪಡೆದುಕೊಳ್ಳಬಹುದು.

ವೆಬ್‌ಸೈಟ್ ಮೂಲಕ ಈಗಾಗಲೇ 2,000 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಇನ್ನು 1,500 ಸೋಂಕಿತರು ಪ್ಲಾಸ್ಮಾ ಚಿಕಿತ್ಸೆ ನೆರವು ಪಡೆದುಕೊಂಡಿದ್ದಾರೆ. ಹೆಚ್ಚಿನವರು ಪ್ಲಾಸ್ಮಾ ದಾನ ಮಾಡಲು ಸಿದ್ಧರಿದ್ದಾರೆ. ಆದರೆ ಆಸ್ಪತ್ರೆಗೆ ತೆರಳಿ ಪ್ಲಾಸ್ಮಾ ದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ವೆಬ್‌ಸೈಟ್ ಮೂಲಕ ಪ್ಲಾಸ್ಮಾ ಸೆಂಟರ್ ವಿವರಗಳನ್ನು ನೀಡಲಾಗುತ್ತಿದೆ. ಇದರಿಂದ ಹೆಚ್ಚಿನ ಮಂದಿ ಪ್ಲಾಸ್ಮಾ ದಾನ ಮಾಡಲು ಸಾಧ್ಯವಾಗುತ್ತಿದೆ ಎಂದು ದಿವ್ಯಾ ಜೈನ್ ಹೇಳಿದ್ದಾರೆ.

click me!