
ಕಣ್ಣೂರು(ಮೇ.14): ದೇಶಾದ್ಯಂತ COVID-19 ನಿರ್ಬಂಧಗಳನ್ನು ಹೇರಿರುವುದರಿಂದ ಜನರು ತುರ್ತು ಸಂದರ್ಭದಲ್ಲಿ ತಮ್ಮ ಮನೆಗಳಿಂದ ಹೊರಗೆ ಬರಲು ಇ-ಪಾಸ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೇರಳ ಪೊಲೀಸ್ ಅಧಿಕಾರಿಗಳು ನಾಗರಿಕರಿಂದ ಸಾವಿರಾರು ಇ-ಪಾಸ್ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ.
ಹೆಚ್ಚಿನವರು ನಿಜವಾದ ಕಾರಣ ಕೊಟ್ಟರೆ ಇನ್ನು ಕೆಲವರದ್ದು ಇಲ್ಲಿಯೂ ಮಂಗಾಟ. ಕೇರಳ ಪೊಲೀಸರು ಇತ್ತೀಚೆಗೆ ಸ್ವೀಕರಿಸಿದ ಈ ಪಾಸ್‌ನಲ್ಲಿ ವ್ಯಕ್ತಿ ಕೊಟ್ಟ ಕಾರಣ ಕೇಳಿ ಸುಸ್ತಾಗಿದ್ದಾರೆ.
ಗರ್ಲ್ ಫ್ರೆಂಡ್ ಮೀಟ್ ಮಾಡೋದು ಅಗತ್ಯ ಸೇವೆಯಡಿ ಬರಲ್ವಲ್ಲಪ್ಪಾ!
ಕಣ್ಣೂರಿನ ಕಣ್ಣಪುರಂನ ಇರಿನಾವೆ ನಿವಾಸಿಯೊಬ್ಬರು ತಮ್ಮ ಇ-ಪಾಸ್ ಅರ್ಜಿಯಲ್ಲಿ ಸಂಜೆ ಕಣ್ಣೂರಿನ ಒಂದು ಸ್ಥಳದಲ್ಲಿ ಸೆಕ್ಸ್‌ಗಾಗಿ ಹೋಗಬೇಕಿದೆ ಎಂದು ಕಾರಣ ಕೊಟ್ಟಿದ್ದಾರೆ. ಅರ್ಜಿಯಲ್ಲಿನ ಅಸಾಮಾನ್ಯ ಕಾರಣವನ್ನು ಪೊಲೀಸರು ನೋಡಿದಾಗ ಸಹಾಯಕ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ.
ವ್ಯಕ್ತಿಯನ್ನು ಪತ್ತೆ ಮಾಡಲು ವಾಲಪಟ್ಟಣಂ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಮತ್ತು ಅರ್ಜಿಯಲ್ಲಿ ಉಲ್ಲೇಖಿಸಲಾದ ಕಾರಣದ ಬಗ್ಗೆ ಪ್ರಶ್ನಿಸಿದಾಗ, ಅವರು ಅರ್ಜಿ ತಪ್ಪಾಗಿ ಬರೆಯಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ