ದೆಹಲಿ ಸ್ಫೋಟ: ಖಲಿಸ್ತಾನಿ ಕೈವಾಡ ಶಂಕೆ, ತನಿಖೆ ಆರಂಭ

By Kannadaprabha NewsFirst Published Oct 22, 2024, 8:13 AM IST
Highlights

ದೆಹಲಿಯ ಸಿಆರ್‌ಪಿಎಫ್ ಶಾಲೆಯ ಬಳಿ ನಡೆದ ಸ್ಫೋಟದಲ್ಲಿ ಖಲಿಸ್ತಾನಿ ಉಗ್ರರು ಅಥವಾ ಲಾರೆನ್ಸ್ ಬಿಷ್ಟೋಯಿ ತಂಡದ ಕೈವಾಡದ ಶಂಕೆ ವ್ಯಕ್ತವಾಗಿದೆ. ಲಶ್ಕರ್-ಇ-ತೈಬಾ ಸಂಘಟನೆಯ ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ ಸ್ಫೋಟದ ಹೊಣೆ ಹೊತ್ತುಕೊಂಡಿದೆ. ಪೊಲೀಸರು ಹಲವು ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ.

ನವದೆಹಲಿ: ದೆಹಲಿಯ ಸಿಆರ್‌ಪಿಎಫ್ ಶಾಲೆಯ ಬಳಿ ಭಾನುವಾರ ನಡೆದ ಸ್ಫೋಟದಲ್ಲಿ ಖಲಿಸ್ತಾನಿ ಉಗ್ರರು ಅಥವಾ ಜೈಲುಪಾಲಾ ಗಿರುವ ಲಾರೆನ್ಸ್ ಬಿಷ್ಟೋಯಿ ತಂಡದ ಕೈವಾಡವಿರುವ ಬಗ್ಗೆ ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ ಈ ಸ್ಫೋಟದ ಹೊಣೆಯನ್ನು ಪಾಕಿಸ್ತಾನ ಮೂಲದ ಲಶ್ವರ್-ಇ-ತೈಬಾಸಂಘ ಟನೆಯ ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಹೀಗಾಗಿ ಹಲವು ಆಯಾಮ ಗಳಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಸ್ಫೋಟದ ದೃಶ್ಯಗಳನ್ನು ಖಲಿಸ್ತಾನ್ ಜಿಂದಾಬಾದ್ ಎಂಬ ಬರಹದೊಂದಿಗೆ 'ಜಸ್ಟಿಸ್ ಲೀಗ್ ಇಂಡಿಯಾ' ಎಂಬ ಖಾತೆಯಿಂದ ಟೆಲಿಗ್ರಾಂನಲ್ಲಿ ಹಂಚಿಕೊಳ್ಳ ಲಾಗಿದ್ದು, ಖಲಿಸ್ತಾನಿ ಬೆಂಬಲಿಗರ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಯಾಗಿ ಸ್ಫೋಟ ನಡೆಸಿರುವುದಾಗಿ ಬರೆಯಲಾಗಿತ್ತು. ಈ ಖಾತೆಯ ಸೃಷ್ಟಿಕರ್ತರ ಕುರಿತ ಮಾಹಿತಿ ಕೋರಿ ಪೊಲೀಸರು ಟೆಲಿಗ್ರಾಂಗೆ ಪತ್ರ ಬರೆದಿದ್ದಾರೆ. ಅಂತೆಯೇ, ಪೊಲೀಸರು ಸ್ಫೋಟದ ಹಿಂದಿನ ರಾತ್ರಿ ಬಿಳಿ ಟಿ-ಶರ್ಟ್ ತೊಟ್ಟ ಶಂಕಿತನನ್ನು ಗುರುತಿಸಿದ್ದಾರೆ.

Latest Videos

ನ.1-19ರ ಅವಧಿಯಲ್ಲಿ ಏರಿಂಡಿಯಾ ಮೇಲೆ ದಾಳಿ: ಉಗ್ರ ಪನ್ನೂನ್ 
ಮುಂದಿನ ನ.1ರಿಂದ ನ.19ರ ನಡುವೆ ಏರಿಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡಬೇಡಿ. ಆ ಅವಧಿಯಲ್ಲಿ ವಿಮಾನದ ಮೇಲೆ ಖಲಿಸ್ತಾನಿ ಉಗ್ರ ಗುರು ಪತ್ವಂತ್ ಸಿಂಗ್ ಪನ್ನೂ ಸಿಬ್ಬರಿಗೆ ಎಚ್ಚರಿಕೆ ನೀಡಿದ್ದಾನೆ. ದಿಲ್ಲಿಯಲ್ಲಿ 1984 ರಲ್ಲಿ ನಡೆದ ಸಿಖ್ ವಿರೋಧಿ ದಂ ಗೆಗೆ 40 ವರ್ಷ ತುಂಬುತ್ತಿರುವ ಬೆನ್ನಲ್ಲೇ ಈ ಎಚ್ಚರಿಕೆ ನೀಡಿದ್ದಾನೆ. 

ಭಾರತದ ಮೋಸ್ಟ್ ವಾಂಡೆಟ್ ಉಗ್ರರ ಪೈಕಿ ಒಬ್ಬನಾಗಿರುವ ಪನ್ನೂ ಸದ್ಯ ಅಮೆರಿಕದಲ್ಲಿ ವಾಸಿಸುತ್ತಿದ್ದಾನೆ. ಪ್ರತಿ ವರ್ಷ ಆತ ಇದೇ ರೀತಿಯ ಬೆದರಿಕೆ ಸಂದೇಶ ರವಾನಿಸುತ್ತಾನೆ. ದಾಳಿ ನಡೆಯಬಹುದು ಎಂದು ಹೇಳಿದ್ದಾನೆ.

ತಗ್ಗದ ಹುಸಿ ಬಾಂಬ್‌ ಹಾವಳಿ: ಮತ್ತೆ 24 ವಿಮಾನಕ್ಕೆ ಬೆದರಿಕೆ

 ಬಾಂಬ್‌ ಬೆದರಿಕೆ: ಟ್ವೀಟರ್‌ ಸಹಾಯ ಕೇಳಿದ ಪೊಲೀಸ್‌

ವಿಮಾನಗಳಿಗೆ ಬೆದರಿಕೆ ಫೋನ್‌ ಕರೆಗಳು ಹಾಗೂ ಸೋಷಿಯಲ್‌ ಮೀಡಿಯಾಗಳ ಮೂಲಕ ಸಂದೇಶಗಳ ಪ್ರವಾಹ ರೂಪದಲ್ಲಿ ಬರುತ್ತಿರುವುದು ಪೊಲೀಸರನ್ನು ಪೇಚಿಗೆ ಸಿಲುಕಿಸಿದೆ. ಹೀಗಾಗಿ ಈ ಬೆದರಿಕೆಗಳ ಮೂಲ ಪತ್ತೆ ಹಚ್ಚುವಂತೆ ದಿಲ್ಲಿ ಪೊಲೀಸರು ಖ್ಯಾತ ಸಾಮಾಜಿಕ ಮಾಧ್ಯಮವಾದ ಟ್ವೀಟರ್‌ಗೆ ಕೋರಿದ್ದಾರೆ.

ಶನಿವಾರ ರಾತ್ರಿವರೆಗೆ 1 ವಾರದಲ್ಲಿ 70 ಬೆದರಿಕೆಗಳು ಬಂದಿದ್ದವು. ಈ 70ರ ಪೈಕಿ ಟ್ವೀಟರ್‌ ಮೂಲಕ ಬಂದ ಬೆದರಿಕೆಗಳ ಸಂಖ್ಯೆ 46. ಹೀಗಾಗಿ ಈ ಸಂದೇಶವಾಹಕರ ಮೂಲ ಪತ್ತೆ ಮಾಡಿ ಎಂದು ಎಲಾನ್‌ ಮಸ್ಕ್‌ ಮಾಲೀಕತ್ವದ ಟ್ವೀಟರ್‌ಗೆ ದಿಲ್ಲಿ ಪೊಲೀಸರು ಕೋರಿದ್ದಾರೆ ಹಾಗೂ ಅಂಥ ಸಂದೇಶಗಳನ್ನು ಅಳಿಸಿ ಹಾಕುವಂತೆ ಸೂಚಿಸಿದ್ದಾರೆ.

ಅನೇಕ ಸಂದೇಶಗಳು ಬೇನಾಮಿ ಆಗಿರುತ್ತವೆ ಹಾಗೂ ಮೂಲ ಪತ್ತೆ ಆಗಬಾರದು ಎಂದು ಡಾರ್ಕ್‌ ವೆಬ್‌ನಿಂದ ರವಾನೆ ಆಗುತ್ತಿವೆ. ಹೀಗಾಗಿ ಇವುಗಳ ಮೂಲ ಪತ್ತೆ ಮಾಡುವುದು ಸವಾಲು ಎಂದು ಪೊಲೀಸರು ಹೇಳಿದ್ದಾರೆ.

ಹಿಜ್ಬುಲ್ಲಾಹ್ ಉಗ್ರರಿಗೆ ಬಡ್ಡಿರಹಿತ ಸಾಲ ನೀಡುವ ಬ್ಯಾಂಕ್ ಮೇಲೆ ಇಸ್ರೇಲ್ ದಾಳಿ!

click me!