ಲೆಬನಾನ್‌ನಲ್ಲಿ ಹಿಜ್ಬುಲ್ಲಾಹ್‌ಗೆ ಸಂಬಂಧಿಸಿದ ಬ್ಯಾಂಕ್‌ಗಳ ಮೇಲೆ ಇಸ್ರೇಲ್ ದಾಳಿ
ಇಸ್ರೇಲ್‌ನ ಮಿಲಿಟರಿ ಲೆಬನಾನ್ ಮೇಲೆ ರಾತ್ರಿಯಿಡೀ ವೈಮಾನಿಕ ದಾಳಿ ನಡೆಸಿದ ಬಳಿಕ ಉಗ್ರಗಾಮಿ ಗುಂಪು ಹೆಜ್ಬುಲ್ಲಾಗೆ ಹಣಕಾಸು ಸಂಕಷ್ಟ ತಂದೊಡ್ಡಿದೆ
ಇಸ್ರೇಲ್‌ನ ಬಾಂಬ್ ದಾಳಿ
ಇಸ್ರೇಲಿ ಸೇನೆಯು ಹಿಜ್ಬುಲ್ಲಾಹ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಬಯಸುತ್ತದ ಪಣತೊಟ್ಟಿದೆ. ಆದ್ದರಿಂದ ಐಡಿಎಫ್ ಈಗ ಲೆಬನಾನ್‌ನಲ್ಲಿ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಬ್ಯಾಂಕ್‌ಗಳನ್ನು ಗುರಿಯಾಗಿಸಿಕೊಂಡಿದೆ.
ಹಿಜ್ಬುಲ್ಲಾಹ್ ಉಗ್ರರಿಗೆ ಬಡ್ಡಿರಹಿತ ಸಾಲ ನೀಡುವ ಬ್ಯಾಂಕ್ ಮೇಲೆ ದಾಳಿ
ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, ಐಡಿಎಫ್ ಭಾನುವಾರ ಅಲ್-ಕರ್ದ್ ಅಲ್-ಹಸನ್ ಅಸೋಸಿಯೇಷನ್‌ಗೆ ಸಂಬಂಧಿಸಿದ ಬ್ಯಾಂಕ್‌ಗಳ ಮೇಲೆ ಬಾಂಬ್ ದಾಳಿ ನಡೆಸಿತು. ಇದು ಹಿಜ್ಬುಲ್ಲಾಹ್ ಉಗ್ರರಿಗೆ ಬಡ್ಡಿರಹಿತ ಸಾಲ ನೀಡುತ್ತಿತ್ತು.
ಲೆಬನಾನ್‌ನಲ್ಲಿ ಈ ಬ್ಯಾಂಕ್‌ನ 31 ಶಾಖೆಗಳು
ಲೆಬನಾನ್‌ನಲ್ಲಿ ಈ ಸಂಸ್ಥೆಯ 31 ಶಾಖೆಗಳಿವ್, ಐಡಿಎಫ್ ತೀವ್ರ ಬಾಂಬ್ ದಾಳಿ ನಡೆಸಿದೆ. ಆದಾಗ್ಯೂ, 31 ರಲ್ಲಿ ಎಷ್ಟು ಶಾಖೆಗಳು ಹಾನಿಗೊಳಗಾಗಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಐಡಿಎಫ್: ಉಗ್ರರಿಗೆ ಹಣ ಸಿಗಬಾರದು ಎಂದು ನಾವು ಬಯಸುತ್ತೇವೆ
ಹಿಜ್ಬುಲ್ಲಾಹ್ ಉಗ್ರರಿಗೆ ಹೋರಾಡಲು ಹಣ ಸಿಗಬಾರದು ಎಂದು ನಾವು ಬಯಸುತ್ತೇವೆ. ಆದ್ದರಿಂದ ನಾವು ಬಡ್ಡಿರಹಿತ ಸಾಲ ನೀಡುವ ಇಂತಹ ಬ್ಯಾಂಕ್‌ಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದೇವೆ ಎಂದು ಐಡಿಎಫ್ ಹೇಳಿದೆ.
ಹಿಜ್ಬುಲ್ಲಾಹ್ ಗಳ ಆರ್ಥಿಕ ಬೆನ್ನೆಲುಬನ್ನು ಮುರಿಯುತ್ತೇವೆ
ಅಲ್-ಕರ್ದ್ ಅಲ್-ಹಸನ್‌ನ ಹಣವನ್ನು ಹಿಜ್ಬುಲ್ಲಾಹ್ ತನ್ನ ಉಗ್ರರಿಗೆ ಸಂಬಳ ನೀಡಲು ಬಳಸುತ್ತದೆ. ಆದ್ದರಿಂದ ಈ ಬ್ಯಾಂಕ್‌ಗಳನ್ನು ನಾಶಮಾಡುವ ಮೂಲಕ ನಾವು ಅದರ ಆರ್ಥಿಕ ಬೆನ್ನೆಲುಬನ್ನು ಮುರಿಯುತ್ತೇವೆ ಎಂದು ಐಡಿಎಫ್ ಹೇಳಿದೆ.